Friday, March 14, 2025

Latest Posts

ಒಣಹಣ್ಣುಗಳಿಗಿಂತ ಹಣ್ಣಿನ ಸೇವನೆ ಉತ್ತಮ: ವೈದ್ಯರ ವಿವರಣೆ ಇಲ್ಲಿದೆ ನೋಡಿ..

- Advertisement -

Health Tips: ವೈದ್ಯೆಯಾದ ರಕ್ಷಿತಾ ನಾಯ್ಕ್, ನಮ್ಮ ಆಹಾರ ಪದ್ಧತಿ ಹೇಗಿರಬೇಕು..? ನಾವು ಯಾಕೆ ಹಣ್ಣು- ತರಕಾರಿಗಳ ಸೇವನೆ ಮಾಡಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..

ನಾವು ಪ್ರತಿದಿನ ಹಣ್ಣು ಮತ್ತು ತರಕಾರಿಗಳ ಸೇವನೆ ಮಾಡುವುದು ತುಂಬಾ ಮುಖ್ಯ ಎನ್ನುತ್ತಾರೆ ವೈದ್ಯರು. ಏಕೆಂದರೆ ನಮಗೆ ಹಣ್ಣು ತರಕಾರಿ ಸೇವನೆಯಿಂದ, ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತದೆ. ಅಲ್ಲದೇ, ನಮಗೆ ಬಿಪಿ ಇದ್ದರೆ, ಅದನ್ನು ಬ್ಯಾಲೆನ್ಸ್ ಮಾಡಲು ಹಣ್ಣಿನ ಸೇವನೆ ಅತ್ಯಗತ್ಯ. ಪ್ರತೀ ವಯಸ್ಸಿನ ಮನುಷ್ಯನಿಗೂ, ವಯಸ್ಸಿಗೆ ತಕ್ಕಷ್ಟು ಗ್ರಾಮ್ ಹಣ್ಣು ಮತ್ತು ತರಕಾರಿ ತಿನ್ನಬೇಕು ಎಂದು ಇರುತ್ತದೆ. ಹಾಗಾಗಿ ಆಯಾ ವಯಸ್ಸಿಗೆ ತಕ್ಕಂತೆ, ಅಷ್ಟೇ ಪ್ರಮಾಣದಲ್ಲಿ ಹಣ್ಣು ತರಕಾರಿಯನ್ನು ಸೇವಿಸಿದರೆ, ಆರೋಗ್ಯ ಅತ್ಯುತ್ತಮವಾಗಿರುತ್ತದೆ.

ಬಿಪಿ ಸಮತೋಲನ ಮಾತ್ರವಲ್ಲದೇ, ಹೃದಯದ ಆರೋಗ್ಯ ಕಾಪಾಡಲು ಹಣ್ಣಿನ ಮತ್ತು ತರಕಾರಿ ಸೇವನೆ ಸಹಕಾರಿಯಾಗಿದೆ. ಇನ್ನು ಕೆಲವರು ಹಣ್ಣು- ತರಕಾರಿ ಸೇವನೆಗಿಂತ ಹೆಚ್ಚಾಗಿ, ಡ್ರೈಫ್ರೂಟ್ಸ್ ಸೇವನೆಗೆ ಹೆಚ್ಚು ಮಹತ್ವ ನೀಡುತ್ತಾರೆ. ಆದರೆ ಡ್ರೈಫ್ರೂಟ್ಸ್ ಆರೋಗ್ಯಕ್ಕೆ ಉತ್ತಮವಾದರೆ, ಹಣ್ಣು ಮತ್ತು ಹಸಿ ತರಕಾರಿಗಳು, ಆರೋಗ್ಯಕ್ಕೆ ಅತ್ಯುತ್ತಮವಾಗಿರುತ್ತದೆ. ಡ್ರೈಫ್ರೂಟ್ಸ್‌ ಕೊಡುವುದಕ್ಕಿಂತಲೂ ಹೆಚ್ಚು ಪೋಷಕಾಂಶಗಳನ್ನು, ಹಣ್ಣು-ತರಕಾರಿ ನಮ್ಮ ದೇಹಕ್ಕೆ ಒದಗಿಸುತ್ತದೆ. ಹಣ್ಣುಗಳ ಸೇವನೆಯಿಂದ ವಿಟಾಮಿನ್ ಎ, ವಿಟಾಮಿನ್ ಬಿ, ವಿಟಾಮಿನ್ ಸಿ ಸಿಗುತ್ತದೆ.

ಇಷ್ಟೇ ಅಲ್ಲದೇ, ಹಣ್ಣಿನ ಸೇವನೆಯಿಂದ ನಮ್ಮ ದೇಹ ತೂಕ ಸರಿಯಾಗಿ ಇರುತ್ತದೆ. ಏಕೆಂದರೆ, ಹಣ್ಣುಗಳಲ್ಲಿ ಫೈಬರ್ ಇರುವ ಕಾರಣಕ್ಕೆ, ಇದರ ಸೇವನೆಯಿಂದ ತುಂಬ ಹೊತ್ತು ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹಾಗಾಗಿ ಕೆಲ ಸಮಯಕ್ಕೆ ಆಹಾರ ಸೇವಿಸಬೇಕು ಎನ್ನಿಸುವುದಿಲ್ಲ. ಹಾಗಾಗಿ ಹಣ್ಣಿನ ಸೇವನೆಯಿಂದ ನಮ್ಮ ತೂಕ ಸರಿಯಾಗಿರುತ್ತದೆ. ಹಾಗಾಗಿ ಡಯಟ್ ಮಾಡುವವರು ಹಣ್ಣಿನ ಸೇವನೆ ಮಾಡುವುದು ಉತ್ತಮ. ಹಣ್ಣು ತರಕಾರಿ ಸೇವನೆ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..

- Advertisement -

Latest Posts

Don't Miss