ಹಲವರಿಗೆ ಹೆಣ್ಣು ಮಕ್ಕಳ ಬಗ್ಗೆ, ಕೀಳಾದ ಭಾವನೆಗಳಿದೆ. ಯಾಕಂದ್ರೆ ಯಾರೋ ಕೆಲವರು, ಅವರ ಜೀವನದ್ಲಲಿ ಬಂದು ಅವರ ಭಾವನೆಗಳ ಜೊತೆ ಆಟವಾಡಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಬರುವ ಕೆಲ ಹೆಣ್ಣು ಮಕ್ಕಳು, ಅದಕ್ಕೆ ತಕ್ಕಂತೆ ನಡೆದುಕೊಳ್ತಾರೆ. ಹಾಗಾಗಿ ಹೆಣ್ಣು ಮಕ್ಕಳ ಬಗೆಗಿನ ಅವರ ಭಾವನೆ ಕೀಳಾಗುತ್ತಲೇ ಹೋಗುತ್ತದೆ. ಹಾಗಾಗಿ ಹಲವು ಹುಡುಗರು ವಿವಾಹವಾಗಲು ಹಿಂಜರಿಯುತ್ತಾರೆ.
ಅವಲಕ್ಕಿ ಮತ್ತು ಮೆಂತ್ಯೆ ಸೊಪ್ಪಿನಿಂದ ಈ ತಿಂಡಿಯನ್ನೊಮ್ಮೆ ಮಾಡಿ ನೋಡಿ..
ಪತ್ನಿಯಾದವಳು ಹೇಗಿರ್ತಾಳೋ ಏನೋ..? ನನ್ನ ದುಡ್ಡಿಗಾಗಿಯೇ ಅವಳು ನನ್ನನ್ನು ಮದುವೆಯಾಗಬಹುದು. ನನ್ನ ಮನೆ, ಕಾರು, ಆಸ್ತಿ ನೋಡಿಯೇ ಅವಳು ನನ್ನನ್ನು ಒಪ್ಪಿರಬಹುದು ಎಂದು ಕೆಲ ಹುಡುಗರು ತಿಳಿಯುತ್ತಾರೆ. ಇನ್ನು ಕೆಲವರು ಹೆಣ್ಣನ್ನ ಮೆಚ್ಚಿಸುವುದಕ್ಕೆ, ಕಾರು, ಬಂಗಲೆ, ಗಿಫ್ಟ್ ಎಲ್ಲವನ್ನೂ ಆಕೆಗೆ ಕೊಡುತ್ತಾರೆ. ಆದ್ರೆ ಸಮಯವನ್ನೇ ಕೊಡುವುದಿಲ್ಲ. ಆಕೆಯ ಕಾಳಜಿ ಮಾಡುವುದಿಲ್ಲ. ಪ್ರೀತಿ ತೋರಿಸುವುದಿಲ್ಲ.
ಕಾಲೇಜು ಮತ್ತು ಆಫೀಸಿನಲ್ಲಿ ಮಹಿಳಾ ದಿನಾಚರಣೆಯನ್ನು ಈ ರೀತಿ ಸೆಲೆಬ್ರೇಟ್ ಮಾಡಬಹುದು ನೋಡಿ..
ನಿಮ್ಮನ್ನು ನಿಜವಾಗಿಯೂ ಪ್ರೀತಿಸುವ ಹೆಣ್ಣು ಮಗಳು ಇಷ್ಟನ್ನೇ ಬಯಸುತ್ತಾಳೆ. ಆಕೆಗೆ ನೀವು ತರುವ ಹಣ, ನಿಮ್ಮ ಬಳಿ ಇರುವ ಆಸ್ತಿಗಿಂತ, ನೀವು ಕೊಡುವ ಪ್ರೀತಿ ಬೇಕು. ನೀವು ಕಾಳಜಿ ಮಾಡಬೇಕು. ಅವಳಿಗಾಗಿ ಸಮಯ ಮೀಸಲಿಡಬೇಕು ಅಂತಷ್ಟೇ ಆಕೆ ಬಯಸುತ್ತಾಳೆ. ಆಕೆಗೆ ನಿಮ್ಮೊಂದಿಗೆ ತಿರುಗಾಡಬೇಕು. ಅವಳ ಕಷ್ಟ ಸುಖಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನೋ ಆಸೆ ಇರುತ್ತದೆ. ಅವಳ ಆರೋಗ್ಯ ಸರಿ ಇಲ್ಲದಿದ್ದಾಗ, ನೀವು ಅವಳ ಕಾಳಜಿ ಮಾಡಬೇಕೆಂದು ಆಕೆ ಬಯಸುತ್ತಾಳೆ. ಪ್ರೀತಿಯ ಮಾತುಗಳನ್ನ ಆಡಬೇಕು ಅಂತಷ್ಟೇ ಆಕೆ ಬಯಸುತ್ತಾಳೆ. ಹಾಗಾಗಿ ನಿಮ್ಮನ್ನು ಪ್ರೀತಿಸುವವರನ್ನ ಗೌರವಿಸಿ, ಕಾಳಜಿ ತೋರಿಸಿ.