Friday, September 20, 2024

Latest Posts

Women’s day special : ಮಹಿಳೆಯರು ಮನೆಯಿಂದಲೇ ಮಾಡಬಹುದಾದ ಉದ್ಯಮಗಳಿದು.. ಭಾಗ 1

- Advertisement -

ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಶಾಲೆ ಕಲಿಯುತ್ತಾರೆ, ಕೆಲಸಕ್ಕೆ ಹೋಗ್ತಾರೆ ಅಂದ್ರೆ ಅದನ್ನ ಖಂಡಿಸುವವರೇ ಹೆಚ್ಚಾಗಿದ್ರು. ಆದ್ರೆ ಈಗ ಕಾಲ ಬದಲಾಗಿದೆ. ಹೆಣ್ಣು ಮಕ್ಕಳು ಶಾಲೆ ಕಲಿಯುತ್ತಿದ್ದಾರೆ. ಉತ್ತಮ ಉದ್ಯೋಗಕ್ಕೆ ಸೇರುತ್ತಿದ್ದಾರೆ. ಅಷ್ಟೇ ಯಾಕೆ ಉದ್ಯಮವನ್ನ ನಿಭಾಯಿಸುವಷ್ಟು ಶಕ್ತರಾಗಿದ್ದಾರೆ. ಆದ್ರೆ ಈ ಪ್ರಪಂಚ ಎಷ್ಟು ಮುಂದುವರಿದ್ರು ಕೂಡ, ಹೆಣ್ಣು ಮಕ್ಕಳು ಮದುವೆಯಾಗಲೇಬೇಕು, ಮಕ್ಕಳನ್ನ ಹೆರಲೇಬೇಕು. ಅಂಥವರಲ್ಲಿ ಕೆಲವರು ತಮ್ಮ ಆಸೆಯನ್ನ ಮೊಟಕುಗೊಳಿಸಿ, ನಾಲ್ಕು ಗೋಡೆ ಮಧ್ಯೆ ಇರುತ್ತಾರೆ. ಅಂಥವರಿಗಾಗಿ ನಾವಿಂದು ಮನೆಯಿಂದಲೇ ಉದ್ಯಮ ಮಾಡಿ, ಹಣ ಗಳಿಸುವ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಮೊದಲನೇಯ ಕೆಲಸ ಹೊಲಿಗೆ ಕೆಲಸ. ಸ್ಟೈಲ್, ಫ್ಯಾಶನ್‌ಗೆ ತಕ್ಕಂತೆ ಬಟ್ಟೆ ಹೊಲಿಯೋಕ್ಕೆ ಬಂದ್ರೆ, ನೀವು ಕೆಲಸದಲ್ಲಿ ಸಕ್ಸಸ್ ಕಾಣಬಹುದು. ಆದ್ರೆ ನಿಮಗೆ ಬರುವ ಬಟ್ಟೆಯನ್ನ ಜೋಪಾನವಾಗಿ ಬಳಸೋದು ಮಾತ್ರ ನಿಮ್ಮ ಜವಾಬ್ದಾರಿ. ಹಾಗಾಗಿ ಸರಿಯಾಗಿ ಸ್ಟಿಚಿಂಗ್‌ ಕಲಿತುಕೊಂಡೇ, ನೀವು ಟೈಲರಿಂಗ್ ಶಾಪ್ ಹಾಕಿ. ಹೊಸ ತರಹದ ಚೂಡಿದಾರ, ಬ್ಲೌಸ್ ಸ್ಟಿಚ್‌ ಮಾಡಿದ್ರೆ, ಬೇಡಿಕೆ ಇನ್ನೂ ಹೆಚ್ಚಾಗತ್ತೆ. ಅದರಲ್ಲೂ ನಿಮಗೆ ಎಂಬ್ರೈಡ್ರಿ ಮಾಡೋಕ್ಕೆ ಬಂದ್ರೆ, ಇನ್ನೂ ಸೂಪರ್.

ಎರಡನೇಯ ಕೆಲಸ ಟೆರೆಸ್ ಗಾರ್ಡೆನಿಂಗ್. ಮನೆಯಲ್ಲಿ ಗಿಡ ಬೆಳೆಸೋದು ಅಂದ್ರೆ ಹಲವು ಹೆಣ್ಣು ಮಕ್ಕಳಿಗೆ ಇಷ್ಟದ ಕೆಲಸ. ಅದನ್ನ ಮಕ್ಕಳಂತೆ ಬೆಳೆಸ್ತಾರೆ. ಹೀಗೆ ನೀವು ಬೆಳೆಸಿದ ಗುಲಾಬಿ ಗಿಡ, ಹಣ್ಣು, ತರಕಾರಿ ಗಿಡವನ್ನೇ ಇನ್ನೊಬ್ಬರಿಗೆ ಮಾರಬಹುದು. ವೆರೈಟಿ ತರಕಾರಿ, ಹಣ್ಣು, ಹೂವಿನ ಗಿಡವನ್ನು ಬೆಳೆಸಿ, ಪಾಟ್ ಸಮೇತ ಮಾರಬಹುದು. ಇತ್ತೀಚೆಗೆ ಗಿಡಗಳಿಗೆ ಬೇಡಿಕೆ ಹೆಚ್ಚಾಗಿದೆ.

ಮೂರನೇಯ ಕೆಲಸ ಕೇಕ್, ಚಾಕೋಲೇಟ್, ಪಿಜ್ಜಾ ಮೇಕಿಂಗ್ ಬ್ಯುಸಿನೆಸ್. ಚಾಕೋಲೇಟ್ಸ್, ಪಿಜ್ಜಾ, ಕೇಕ್ ಇವೆಲ್ಲ ಮಕ್ಕಳನ್ನ ಸೆಳೆಯೋ ತಿಂಡಿಗಳು. ಪಾರ್ಟಿ, ಫಂಕ್ಷನ್, ಕೆಲ ಹಬ್ಬಗಳಲ್ಲೂ ಜನ ಇದನ್ನ ತಿನ್ನೋಕ್ಕೆ ಇಷ್ಟಪಡ್ತಾರೆ. ಹಾಗಾಗಿ ನೀವು ಇದನ್ನ ಮಾಡಿ ಮಾರಿದ್ರೆ, ಉತ್ತಮ ಲಾಭ ಗಳಿಸಬಹುದು. ನಿಮಗೆ ಈ ತಿಂಡಿ ಮಾಡೋದು ಹೇಗೆ ಅಂತಾ ಪರ್ಫೆಕ್ಟ್ ಆಗಿ ಗೊತ್ತಿರಬೇಕು. ಇದಕ್ಕೆ ಬೇಕಾದ ಕಚ್ಚಾ ವಸ್ತುಗಳಿಗೆ ಮತ್ತು ಓವನ್‌ಗೆ ಬಂಡವಾಳ ಹಾಕಬೇಕು. ಮತ್ತು ಫುಡ್ ಲೈಸೆನ್ಸ್ ಪಡೆಯಬೇಕು.

ನಾಲ್ಕನೇಯ ಕೆಲಸ ಮನೆಯೂಟ ಬ್ಯುಸಿನೆಸ್. ಬೆಂಗಳೂರಿನಂಥ ದೊಡ್ಡ ದೊಡ್ಡ ಸಿಟಿಗಳಲ್ಲಿ ಎಷ್ಟೆಲ್ಲ ಹೊಟೇಲ್‌ಗಳಿದೆ. ಆದ್ರೆ ಹೆಚ್ಚಿನ ಜನರಿಗೆ ಮನೆಯೂಟ ಅಂದ್ರೇನೇ ಇಷ್ಟ. ಹಾಗಾಗಿ ಅಲ್ಲಿ ಎಷ್ಟೇ ಜನ ಮನೆಯಲ್ಲೇ ಅಡುಗೆ ಮಾಡಿ, ಬುತ್ತಿಗೆ ತುಂಬಿಸಿ, ಊಟ ಕೊಡ್ತಾರೆ. ನೀವು ಮನೆಯಲ್ಲಿ ಟೇಸ್ಟಿ ಊಟ ರೆಡಿ ಮಾಡುವವರಾಗಿದ್ರೆ, ಇನ್ನೊಂದಿಷ್ಟು ದಿನಸಿ, ಗ್ಯಾಸ್ ಸ್ಟವ್ ಬಳಸಿ, ಊಟ ತಯಾರು ಮಾಡಿ, ಆಫೀಸು ಹೋಗುವವರಿಗೆ, ಬ್ಯಾಚುಲರ್‌ಗಳಿಗೆಲ್ಲ ಕೊಡಬಹುದು. ಇದರಿಂದ ಉತ್ತಮ ಲಾಭ ಗಳಿಸಬಹುದು.

ಐದನೇಯ ಕೆಲಸ ಉಪ್ಪಿನಕಾಯಿ, ಹಪ್ಪಳದ ಬ್ಯುಸಿನೆಸ್‌. ಇದೊಂಥರಾ ಹಳೆ ಉದ್ಯಮ. ಆದ್ರೂ ಎಂದಿಗೂ ಬೆಲೆ ಕಳೆದುಕೊಳ್ಳದ ಉದ್ಯಮ. ಯಾಕಂದ್ರೆ ಎಷ್ಟೋ ಜನಕ್ಕೆ ಮನೆಯಲ್ಲಿ ಹಪ್ಪಳ, ಉಪ್ಪಿನಕಾಯಿ, ಚಟ್ನಿಪುಡಿ ಮಾಡೋಕ್ಕೆ ಬರಲ್ಲ. ಆದ್ರೆ ಅದು ಇಷ್ಟದ ಆಹಾರ. ಊಟದೊಂದಿಗೆ ಇದೆಲ್ಲ ಇದ್ರೇನೇ ಊಟ ರುಚಿಸೋದು. ಹಾಗಾಗಿ ಹಪ್ಪಳ, ಉಪ್ಪಿನಕಾಯಿ, ಚಟ್ನಿಪುಡಿಗೆಲ್ಲ ಬೇಡಿಕೆ ಹೆಚ್ಚು. ನೀವು ಇದನ್ನೆಲ್ಲ ಮಾಡಿ, ಮನೆಯಿಂದಲೇ ಮಾರಬಹುದು.

Women’s day special ವಿದ್ಯಾಭ್ಯಾಸವಿಲ್ಲದವರು ಕೂಡ ಈ ಕೆಲಸ ಮಾಡಬಹುದು.. ಭಾಗ 1

Women’s day special ವಿದ್ಯಾಭ್ಯಾಸವಿಲ್ಲದವರು ಕೂಡ ಈ ಕೆಲಸ ಮಾಡಬಹುದು.. ಭಾಗ 2

Women’s Day Special- 20 ಪ್ರಸಿದ್ಧ ಭಾರತೀಯ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಮೊದಲಿಗರು- ಭಾಗ 4

- Advertisement -

Latest Posts

Don't Miss