ಪತಿ- ಪತ್ನಿ ಸಂಬಂಧವೇ ಒಂದು ಪವಿತ್ರ ಸಂಬಂಧ ಎನ್ನಲಾಗುತ್ತದೆ. ಯಾಕಂದ್ರೆ ಈ ಸಂಬಂಧದಿಂದಲೇ ಒಂದು ಕುಟುಂಬ ರಚನೆಯಾಗೋದು. ಹಾಗಾಗಿ ಈ ಪವಿತ್ರ ಸಂಬಂಧ ಉತ್ತಮವಾಗಬೇಕಾದರೆ, ಪತಿ-ಪತ್ನಿಯಲ್ಲಿ ಒಳ್ಳೆ ಸ್ವಭಾವವರಿಬೇಕು. ಚಾಣಕ್ಯರು ಈ ಕುರಿತಂತೆ ತಮ್ಮ ಚಾಣಕ್ಯ ನೀತಿಯಲ್ಲಿ 4 ಸ್ವಭಾವವಿರುವ ಪತ್ನಿ ಸಿಕ್ಕವರು ಪುಣ್ಯವಂತರು ಎಂದು ಹೇಳಿದ್ದಾರೆ. ಹಾಗಾದ್ರೆ ಆ 4 ಸ್ವಭಾವಗಳ್ಯಾವುದು ಅಂತಾ ತಿಳಿಯೋಣ ಬನ್ನಿ..
ಸ್ನಾನ ಮಾಡದೇ ಅಡುಗೆ ಮಾಡಿದ್ರೆ ಏನಾಗತ್ತೆ ಗೊತ್ತಾ..?
ಮೊದಲನೇಯ ಗುಣ, ಮನೆ ನಿಭಾಯಿಸುವ ಕಲೆ ಬಲ್ಲವಳು. ಎಲ್ಲರೂ ಹುಟ್ಟಿದಾಗಿನಿಂದ ಕಲಿತುಕೊಂಡು ಬರುವುದಿಲ್ಲ. ಬೆಳೆಯುತ್ತ ಕಲಿಯುತ್ತಾರೆ. ಹೆಣ್ಣು ಮಕ್ಕಳಿಗೆ ಅಮ್ಮನಾದವಳು ಮನೆ ಕೆಲಸ ಕಲಿಸಿಕೊಡುತ್ತಾರೆ. ಇಂದಿನ ಕಾಲದಲ್ಲಿ ಅಮ್ಮ ಕೆಲಸ ಕಲಿಸಿದರೂ, ಮಗಳು ಕಲಿಯುವ ಇಂಟ್ರೆಸ್ಟ್ ತೋರಿಸುವುದಿಲ್ಲ. ಹಾಗಿದ್ದರೂ, ಅವರು ಗಂಡನ ಮನೆಗೆ ಬಂದು ಕೆಲಸ ಕಲಿತು ಕೆಲಸ ಮಾಡಿದರೆ, ಅದು ಕೂಡ ಉತ್ತಮವೇ. ಆಕೆ ದಿನಗಳೆದಂತೆ, ಮನೆ ನಿಭಾಯಿಸುವ ಅರ್ಹತೆ ಹೊಂದುತ್ತಾಳೆ.
ಹಿರಿಯರಿಗೆ ಗೌರವ ಕೊಡುವುದು. ಮಕ್ಕಳ ಆರೈಕೆ ಮಾಡುವುದು. ಮನೆಗೆ ಬಂದ ಅತಿಥಿಗಳಿಗೆ ಸತ್ಕರಿಸುವುದು, ನಿಮ್ಮ ಕಷ್ಟಕ್ಕೆ ಸಾಥ್ ನೀಡಿ ತಾನೂ ದುಡಿಯುವವಳು. ಇಂಥ ಪತ್ನಿ ನಿಮಗೆ ಸಿಕ್ಕಿದ್ದಲ್ಲಿ, ನೀವು ಅದೃಷ್ಟವಂತರು ಅಂತಾರೆ ಚಾಣಕ್ಯರು.
ದಕ್ಷಿಣ ಭಾರತದ ಮಹಾಕುಂಭಮೇಳದ ಲೋಗೋ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಎರಡನೇಯ ಗುಣ, ಪತಿಯೊಂದಿಗೆ ಉತ್ತಮವಾಗಿ ಮಾತನಾಡುವುದು. ಕೆಲವರು ಪತಿಯನ್ನ ತುಚ್ಛವಾಗಿ ಕಾಣುತ್ತಾರೆ. ಯಾವಾಗಲೂ ಗಂಡನಿಗೆ ಬೈಯ್ಯುವುದು, ಹಂಗಿಸುವುದೆಲ್ಲ ಮಾಡುತ್ತಾರೆ. ಹೀಗೆ ಮಾಡಿದಾಗ, ಪತಿಯ ಮನಸ್ಸಿಗೆ ನೋವಾಗುತ್ತದೆ ಅನ್ನುವ ಯೋಚನೆ ಅವರಿಗೆ ಬರುವುದಿಲ್ಲ. ಹಾಗಾಗಿ ನಿಮಗೇನಾದ್ರೂ ನಿಮ್ಮೊಂದಿಗೆ ಚೆಂದವಾಗಿ ಮಾತನಾಡುವ, ನಿಮ್ಮ ಮನಸ್ಸಿಗೆ ನೋವಾಗದಂತೆ ನಿಮ್ಮೊಂದಿಗೆ ವ್ಯವಹರಿಸುವ, ನಿಮ್ಮ ಮಾತನ್ನು ಕೇಳುವ, ನಿಮಗೆ ಬೇಸರವಾಗುವ ಕೆಲಸವನ್ನು ಮಾಡದ ಪತ್ನಿ ಸಿಕ್ಕಿದರೆ, ನೀವು ಅದೃಷ್ಟವಂತರು ಎನ್ನುತ್ತಾರೆ ಚಾಣಕ್ಯರು. `
ಮೂರನೇಯ ಗುಣ, ನಿಮ್ಮೊಂದಿಗೆ ನಿಯತ್ತಾಗಿರುವುದು. ಕೆಲವರು ವಿವಾಹದ ಬಳಿಕವೂ ಪರಪುರುಷನೊಂದಿಗೆ ಸಂಪರ್ಕದಲ್ಲಿರುತ್ತಾರೆ. ಅಥವಾ ಪತಿಗೆ ಮೋಸ ಮಾಡಿ ಹೋಗುತ್ತಾರೆ. ಇಲ್ಲವೇ ಜಗಳ ಮಾಡಿ, ಪತಿಯಿಂದ ದೂರವಾಗುತ್ತಾರೆ. ಹಾಗಾಗಿ ನಿಮಗೆ ಸಿಗುವ ಹೆಣ್ಣು, ಏನೇನ ಆದರೂ ನಿಮ್ಮೊಂದಿಗೆ ಹೊಂದಿಕೊಂಡು ಹೋಗುತ್ತಿದ್ದರೆ, ನಿಮ್ಮಷ್ಟು ಅದೃಷ್ಟವಂತರು ಯಾರಿಲ್ಲವೆಂದು ಅರ್ಥ.
ಶಶಾಂಕ್ ನಿರ್ದೇಶನದ ನೂತನ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ನಾಯಕ…
ನಾಲ್ಕನೇಯ ಗುಣ, ಕೆಟ್ಟ ಚಟ, ಆಸೆ ಬರುಕತನ ಇರದಿರುವವಳು. ಕೆಲವು ಹೆಣ್ಣು ಮಕ್ಕಳಿಗೆ ಕುಡಿಯುವುದು, ಧೂಮಪಾನ ಮಾಡುವ ಚಟವೆಲ್ಲ ಇರುತ್ತದೆ. ಅಲ್ಲದೇ, ನನಗೆ ನನ್ನ ಪತಿ ಕೇಳಿದ್ದೆಲ್ಲ ಕೊಡಿಸಬೇಕು ಅನ್ನೋ ದುರಾಸೆ ಇರುತ್ತದೆ. ಹಾಗೇನಾದರೂ ಅವರ ದುರಾಸೆಯಂತೆ ಪತಿ ಕೊಡಿಸದಿದ್ದಲ್ಲಿ, ಅವರಿಗೆ ಮಾತಿನಿಂದ ಚುಚ್ಚುವ ಹೆಣ್ಣು ಮಕ್ಕಳಿರುತ್ತಾರೆ. ಹಾಗಾಗಿ ನೀವು ವಿವಾಹವಾದ ಹೆಣ್ಣಿಗೆ ಯಾವುದೇ ಕೆಟ್ಟ ಚಟವಿರದೇ, ಆಕೆ ಹೆಚ್ಚು ಆಸೆ ಮಾಡದೇ, ನಿಮ್ಮೊಂದಿಗೆ ಹೊಂದಿಕೊಂಡು ಹೋಗುತ್ತಿದ್ದರೆ, ನೀವು ಅದೃಷ್ಟವಂತರು ಎನ್ನುತ್ತಾರೆ ಚಾಣಕ್ಯರು.