Sunday, September 8, 2024

Latest Posts

ತೆಂಗಿನಕಾಯಿ ಸೇವನೆಯಿಂದ ಏನೆಲ್ಲಾ ಲಾಭವಿದೆ ಗೊತ್ತಾ..!

- Advertisement -

ತೆಂಗಿನ ಕಾಯಿ ಅಂದ ಕೂಡಲೇ ಸಾಮಾನ್ಯವಾಗಿ ಚಟ್ನಿ, ಪಲ್ಯ, ಸಾಂಬಾರ್ ಅಥವಾ ಕೊಬ್ಬರಿ ಮಿಟಾಯಿ ಅಂತ ಬಳಸ್ತಾರೆ. ಈ ತೆಂಗಿನ ಕಾಯಿ ಅಡುಗೆಯ ರುಚಿ ಹೆಚ್ಚಿಸುತ್ತದೆ ಎನ್ನುವುದಷ್ಟೇ ನಮಗೆ ತಿಳಿದಿರುವ ಅಂಶ.  ಕಾಯಿಯ ಅದ್ಬುತ ಗುಣಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ತೆಂಗಿನ ಕಾಯಿ ಆರೋಗ್ಯಕ್ಕೆ ಬಹಳ ಸಹಕಾರಿ . ಅದರಲ್ಲೂ ಬೇಸಿಗೆ  ಸಮಯದಲ್ಲಿ ತೆಂಗಿನ ಕಾಯಿ ಬಳಕೆ ಆರೋಗ್ಯಕ್ಕೆ ಇನ್ನೂ ಉಪಕಾರಿ. ಇದು ಅತ್ಯಂತ ಪೌಷ್ಠಿಕಾಂಶಗಳಿಂದ  ಕೂಡಿದೆ. ತೆಂಗಿನಕಾಯಿ ಸಾಕಷ್ಟು ಪ್ರಮಾಣದ ಮಿನರಲ್ಸ್ ಮತ್ತು ವಿಟಮಿನ್ ಗಳಿಂದ ಕೂಡಿದೆ. 
 ಬೇಸಿಗೆ ಶುರುವಾಗಿಯೇ ಬಿಟ್ಟಿದೆ. ಬೇಸಿಗೆ ಕಾಲದಲ್ಲಿ ತೆಂಗಿನ ಕಾಯಿ ಸೇವನೆ ನಮ್ಮ ದೇಹವನ್ನು ತಂಪಾಗಿಡಲು ಸಹಕರಿಸುತ್ತದೆ. ತೆಂಗಿನಕಾಯಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದನ್ನು ತಪ್ಪಿಸುತ್ತದೆ. ಈ ಕಾರಣದಿಂದಲೇ ಬೇಸಿಗೆಯಲ್ಲಿ ಹೆಚ್ಚು ಎಳನಿರು ಸೇವಿಸುವಂತೆ ಸೂಚಿಸಲಾಗುತ್ತದೆ. 

ಸ್ಯಾಚುರೇಟೆಡ್ ಕೊಬ್ಬು ತೆಂಗಿನಕಾಯಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ.  ಆದ್ದರಿಂದ ಪ್ರತಿದಿನ ಸ್ವಲ್ಪ ತೆಂಗಿನಕಾಯಿ ಸೇವಿಸಿದರೆ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ.  ತೆಂಗಿನಕಾಯಿ ಅಂದರೆ ಒಣಗಿರುವ ಕಾಯಿಯನ್ನಾದರೂ ಸೇವಿಸಬಹುದು ಅಥವಾ ಹಸಿ ಕಾಯಿಯಾದರೂ ಸರಿ. ಅದರಲ್ಲಿ ಹೇರಳವಾದ ವಿಟಮಿನ್ ಮಿನರಲ್ ಅಂಶ ಇರುತ್ತದೆ. 

ಆಂಟಿಫಂಗಲ್, ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಅಂಶಗಳು ತೆಂಗಿನಕಾಯಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ತೆಂಗಿನಕಾಯಿ ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಅಧಿಕವಾಗುತ್ತದೆ.  ತೆಂಗಿನ ಕಾಯಿಯ ಹಾಲನ್ನು ಮಕ್ಕಳಿಗೆ ನೀಡುವುದರಿಂದ ಮಕ್ಕಳ ಮೂಳೆಗಳು ಬಲಿಷ್ಟವಾಗುತ್ತದೆ. 


ಸಾಮಾನ್ಯವಾಗಿ ಬಹುತೇಕ ಮಂದಿ ಮಲಬದ್ಧತೆ ಸಮಸ್ಯೆಯನ್ನು ಎದುರಿಸುತ್ತಾರೆ. ಮಲಬದ್ಧತೆ ನಿವಾರಣೆಗೆ ತೆಂಗಿನ ಕಾಯಿ ಹೇಳಿ ಮಾಡಿಸಿರುವಂಥದ್ದು. ತೆಂಗಿನ ಕಾಯಿಯಲ್ಲಿ ಅಧಿಕ ಪ್ರಮಾಣದ ನಾರಿನ ಅಂಶ  ಇರುತ್ತದೆ. ಹಾಗಾಗಿ ಇದು ಮಲಬದ್ದತೆ ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗಿದೆ. ಪ್ರತಿದಿನ ತೆಂಗಿನ ಕಾಯಿ ಸೇವಿಸುವುದರಿಂದ ಹೊಟ್ಟೆ ಶುಚಿಯಾಗುತ್ತದೆ. ಅಲ್ಲದೆ ವಾಯುವಿನ ಸಮಸ್ಯೆಗೆ ಕೂಡಾ ತೆಂಗಿನ ಕಾಯಿ ರಾಮಬಾಣ. 

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಬಾಯಿಯಿಂದ ಕೇಳಿಬರುವ ಮಾತು ಅಂದರೆ ಟೈಂ ಇಲ್ಲ ಎನ್ನುವುದು. ನಿರಂತರ ಕೆಲಸದ ನಡುವೆ ಆರೋಗ್ಯದತ್ತ ಗಮನ ಹರಿಸಲು ಸಮಯವಿರುವುದಿಲ್ಲ. ಹೆಚ್ಚಾಗಿ ಕುಳಿತಲ್ಲೇ ಕೆಲಸ ಮಾಡುವವರಿಗಂತೂ ವ್ಯಾಯಾಮಕ್ಕೆ  ಸಮಯ ಸಿಗದಿದ್ದರೆ ದೇಹ ತೂಕ ಹೆಚ್ಚಾಗುವುದರಲ್ಲಿ ಸಂದೇಹವೇ ಇಲ್ಲ. ಇಂಥದ್ದರಲ್ಲಿ  ದೇಹ ತೂಕ ಕಡಿಮೆ ಮಾಡಲು  ತೆಂಗಿನಕಾಯಿ ಬಹಳ ಸಹಕಾರಿಯಾಗಿದೆ. ತೆಂಗಿನಕಾಯಿ ಸೇವನೆಯು ದೇಹದ ಚಯಾಪಚಯವನ್ನು ನಿಯಂತ್ರಣದಲ್ಲಿಡುತ್ತದೆ.  ಇದು ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ.  

- Advertisement -

Latest Posts

Don't Miss