Friday, September 20, 2024

Latest Posts

Ghee ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಏನೆಲ್ಲಾ ಲಾಭವಿದೆ ಗೊತ್ತಾ..!

- Advertisement -

ನಮಸ್ತೆ ಗೆಳೆಯರೇ ಖಾಲಿ ಹೊಟ್ಟೇಯಲ್ಲಿ ತುಪ್ಪ ತಿಂದರೆ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ತುಪ್ಪವನ್ನು ಅತಿಯಾಗಿ ತಿಂದರೆ ಆರೋಗ್ಯ ಹಾಳಾಗಬಹುದು ದೇಹದ ತೂಕ ಹೆಚ್ಚಾಗುತ್ತದೆ. ಇನ್ನಿತರ ವಿಚಾರಗಳು ಮನಸ್ಸಿನಲ್ಲಿ ಬರುತ್ತದೆ. ಒಂದೆರಡು ಚಮಚ ತುಪ್ಪದಲ್ಲಿ ಹತ್ತಾರು ಲಾಭವನ್ನು ಕಾಣಬಹುದು ಆದ್ದರಿಂದ ತುಪ್ಪ ತಿನ್ನುವುದರಿಂದ ಯಾವ ಎಲ್ಲಾ ರೋಗಗಳನ್ನು ನಿವಾರಿಸಬಹುದು ಎಂದು ತಿಳಿಯೋಣ. ಗೆಳೆಯ ತುಪ್ಪ ಎಂದರೆ ಕೇವಲ ಕೊಬ್ಬಿನ ಪದಾರ್ಥವನ್ನು ಎಂಬುದಕ್ಕೆ ಸಿದ್ಧವಾಗಿಲ್ಲ ಆಯುರ್ವೇದದಲ್ಲಿ ತುಪ್ಪಕ್ಕೆ ವಿಶೇಷವಾದ ಸ್ಥಾನವಿದೆ ಹಾಗೂ ಇದೊಂದು ಔಷಧಿ ಪದಾರ್ಥ ಕೂಡ ಹೌದು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ತಿಂದರೆ ಜೀವಕೋಶದ ಚಟುವಟಿಕೆಯನ್ನು ಹೆಚ್ಚಿಸುವುದು ಆಯುರ್ವೇದದ ಪ್ರಕಾರ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವನೆ ಮಾಡಿದರೆ ದೇಹದ ಜೀವಕೋಶಗಳಿಗೆ ಪೋಷಕಾಂಶ ದೊರೆಯುವುದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ದೇಹಕ್ಕೆ ಉತ್ತಮವಾದ ಆರೈಕೆಯನ್ನು ಮಾಡುವುದು ಹಾಗೂ ಚರ್ಮದ ಕಾಂತಿಯನ್ನು ಹೆಚ್ಚಿಸುವುದು ಹಾಗೂ ಜೀವಕೋಶಗಳ ಪೋಷಣೆ ಹಾಗೂ ಪುನರುಜ್ಜೀವನಗೊಳಿಸುವುದರಿಂದ ಚರ್ಮ ನೈಸರ್ಗಿಕವಾಗಿ ಆರೋಗ್ಯವನ್ನು ಪಡೆದುಕೊಳ್ಳುತ್ತದೆ. ಇನ್ನು ತ್ವಚೆಯ ಶುಷ್ಕತೆಯನ್ನು ಹೋಗಲಾಡಿಸಿ ತ್ವಚೆ ಕಾಂತಿಯುತವಾಗಿ ಹಾಗೂ ತೇವಾಂಶದಿಂಕೂಡಿರುವಂತೆ ಮಾಡುತ್ತದೆ. ಸೋಯಾಸಿಸ್ ನಂತಹ ಭಯಂಕರ ಚರ್ಮ ರೋಗಗಳನ್ನು ಕೂಡ ಇದು ತಡೆಯುತ್ತದೆ. ತುಪ್ಪ ಸೇವನೆ ಮಾಡುವುದರಿಂದ ಸಂಧಿವಾತವನ್ನು ತಡೆಯುತ್ತದೆ. ನೈಸರ್ಗಿಕವಾದ ಒಮಿನಿಯಂ ಒಮೆಗಾತ್ರಿ ಕೊಬ್ಬಿನ ಆಮ್ಲವನ್ನು ತುಪ್ಪ ಒಳಗೊಂಡಿದೆ ಹಾಗಾಗಿ ಇದು ಉತ್ತಮ ಆರೈಕೆ ಮಾಡುತ್ತದೆ ಸಂದಿನ ನೋವಿಗೆ ಹಾಗೂ ಇನ್ನಿತರ ಮೂಳೆ ಸಂಬಂಧಿತ ಅನಾರೋಗ್ಯಕ್ಕೆ ತುಪ್ಪದ ಲೇಪನವನ್ನು ಮಾಡುವುದರಿಂದ ನಿವಾರಣೆಯಾಗುತ್ತದೆ. ಹಾಗು ತುಪ್ಪ ಸೇವನೆ ಮಾಡುವುದರಿಂದ ಮೆದುಳಿನ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಹಾಗು ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವನೆ ಮಾಡುವುದರಿಂದ ಮೆದುಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಜೊತೆಗೆ ನೆನಪಿನ ಶಕ್ತಿ ಕಲಿಕೆ ಜ್ಞಾನ ಕಾರ್ಯಚಟುವಟಿಕೆಗಳನ್ನು ಸುಧಾರಿಸುತ್ತದೆ. ಗೆಳೆಯರೇ ತೂಕವನ್ನು ಇಳಿಸಲು ಹಾಗೂ ತೂಕವನ್ನು ಹೆಚ್ಚಿಸಲು ಸಾಮಾನ್ಯವಾಗಿ ತುಪ್ಪವನ್ನು ಸೇವನೆ ಮಾಡಬೇಕು ಎಂದು ಹೇಳುತ್ತಾರೆ ಆದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 5 ಅಥವಾ 10 ಮಿಲಿ ಎಷ್ಟು ತುಪ್ಪವನ್ನು ಸೇವಿಸಿದರೆ ನಿಮ್ಮ ಚಯಾಪಚಯ ಸುಧಾರಣೆ ಕಾಣುತ್ತದೆ. ಅಲ್ಲದೆ ಗಣನೀಯವಾದ ತೂಕ ಇಳಿಕೆ ಕಾಣುತ್ತೀರಿ ಹಾಗೂ ಕೂದಲು ಉದುರುವಿಕೆ ಸಮಸ್ಯೆ ತಡೆಗಟ್ಟುತ್ತದೆ. ಕೇಶರಾಶಿ ಸಂರಕ್ಷಣೆಗೆ ಸಹಾಯವಾಗುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸ್ವೀಕರಿಸಿದರೆ ಲ್ಯಾಕ್ಟೋ ಸಮಸ್ಯೆ ಸುಧಾರಣೆ ಕಾಣುತ್ತದೆ. ನೈಸರ್ಗಿಕವಾದ ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಮಾತ್ರ ಅನೇಕ ಬಗೆಯ ಕ್ಯಾನ್ಸರ್ ಕಾಯಿಲೆಯಿಂದ ಪಾರಾಗಬಹುದು ದೇಹದ ಚರ್ಮ ವಿಪರೀತ ಒಣಗಿದ್ದರೆ 2 ಚಮಚ ತುಪ್ಪವನ್ನು ಬಿಸಿ ಮಾಡಿ ಉಗುರುಬೆಚ್ಚಗಿನ ತಾಪಮಾನದಲ್ಲಿ ಆರಿಸಿ ಅದನ್ನು ಒಣ ಚರ್ಮದ ಮೇಲೆ ನಯವಾಗಿ ಮಸಾಜ್ ಮಾಡಬೇಕು, ಒಂದು ಗಂಟೆ ನಂತರ ಸ್ನಾನವನ್ನು ಮಾಡಬೇಕು ಒಣ ಚರ್ಮ ಸಮಸ್ಯೆ ನಿವಾರಣೆ ಆಗುತ್ತದೆ.

- Advertisement -

Latest Posts

Don't Miss