Spiritual: ಊಟವಿದ್ದರಷ್ಟೇ ಮನುಷ್ಯ ಬದುಕಲು ಸಾಧ್ಯ. ಹಾಗಾಗಿಯೇ ಜನ ದುಡಿಯುವುದು. ಆದರೆ ನಾವು ಅನ್ನ ಉಣ್ಣುವಾಗ ಅನುಸರಿಸಬೇಕಾದ ನಿಯಮಗಳನ್ನು ಅನುಸರಿಸಿ, ಊಟ ಮಾಡಿದರಷ್ಟೇ, ಅದಕ್ಕೆ ನಾವು ಗೌರವ ನೀಡಿದಂತೆ. ಹಾಗಾದ್ರೆ ಊಟ ಮಾಡುವಾಗ ಯಾವ 5 ನಿಯಮಗಳನ್ನು ಅನುಸರಿಸಬೇಕು ಎಂದು ತಿಳಿಯೋಣ ಬನ್ನಿ..
ಎಲ್ಲಕ್ಕಿಂತ ಮೊದಲ ನಿಯಮ ಅಂದ್ರೆ ಕೈ ಕಾಲು ಮುಖ ತೊಳೆದು ಊಟಕ್ಕೆ ಕುಳಿತುಕೊಳ್ಳಬೇಕು. ಸ್ವಚ್ಛತೆ ಕಾಪಾಡಿಕೊಂಡು ಆಹಾರ ಸೇವಿಸುವವರಿಗೆ ಅನ್ನಪೂರ್ಣೇಶ್ವರಿ ಸದಾ ಕೃಪೆ ತೋರಿಸುತ್ತಾಳೆ. ಹಾಗಾಗಿ ಕೈ ಕಾಲು ಮುಖ ತೊಳೆದು ಊಟ ಮಾಡಬೇಕು. ಅಲ್ಲದೇ ನೆಲದ ಮೇಲೆ ಕುಳಿತು ಊಟ ಮಾಡುವುದು ತುಂಬಾ ಮುಖ್ಯ. ಏಕೆಂದರೆ, ಇದು ಊಟ ಮಾಡುವ ಸರಿಯಾದ ವಿಧಾನ ಮತ್ತು ಆರೋಗ್ಯಕ್ಕೆ ಉತ್ತಮವಾದ ಆಸನ. ಹಾಗಾಗಿ ನೆಲದ ಮೇಲೆ ಚಟ್ಟೆಮುಟ್ಟೆ ಹಾಕಿ ಕುಳಿತು ಊಟ ಮಾಡಬೇಕು.
ಎರಡನೇಯ ನಿಯಮ. ಊಟಕ್ಕೂ ಮುನ್ನ ದೇವರನ್ನು ನೆನೆಸಿಕೊಳ್ಳಿ. ಕೈ ಮುಗಿದು ಊಟ ಮಾಡಿ. ನಿಮಗೆ ಯಾವುದಾದರೂ ಶ್ಲೋಕ ಬಂದರೆ, ಅದನ್ನು ಹೇಳಿ ಬಳಿಕ ಊಟ ಮಾಡಲು ಶುರು ಮಾಡಿ. ಊಟ ಮಾಡುವಾಗ, ದೇವರನ್ನು ನೆನೆದು ಊಟ ಮಾಡಿದರೆ, ನಮ್ಮ ಆರೋಗ್ಯ ಉತ್ತಮವಾಗಿ ಇರುತ್ತದೆ. ನಾವು ತಿಂದ ಆಹಾರದಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಇದ್ದರೂ, ಅದು ಹೋಗುತ್ತದೆ ಅನ್ನೋ ನಂಬಿಕೆ ಇದೆ.
ಮೂರನೇಯ ನಿಯಮ ತಟ್ಟೆಯಲ್ಲಿ ಅನ್ನವನ್ನು ಬಿಡಬೇಡಿ. ಈ ಪ್ರಪಂಚದಲ್ಲಿ ಎಷ್ಟೋ ಜನ, ಒಂದು ತುತ್ತು ಅನ್ನಕ್ಕಾಗಿ ಪರದಾಡುತ್ತಾರೆ. ಹಾಗಾಗಿ ಯಾವುದೇ ಕಾರಣಕ್ಕೂ ನಿಮ್ಮ ತಟ್ಟೆಯಲ್ಲಿ ಅನ್ನ ಬಿಡಬೇಡಿ. ನಿಮಗೆ ಪ್ರತಿದಿನ ಹೊಟ್ಟೆ ತುಂಬ ಊಟ ಸಿಗುತ್ತಿದೆ ಎಂದಲ್ಲಿ, ನಿಮ್ಮ ಮೇಲೆ ಅನ್ನಪೂರ್ಣೆಯ ಕೃಪೆ ಇದೆ ಎಂದರ್ಥ. ಈ ಕೃಪೆ ಸದಾ ಇರಬೇಕು ಎಂದಾದರೆ, ತಟ್ಟೆಯಲ್ಲಿ ಅನ್ನ ಬಿಟ್ಟು ಅಗೌರವ ತೋರಬೇಡಿ.
ನಾಲ್ಕನೇಯ ನಿಯಮ ತಟ್ಟೆಯಲ್ಲಿ ಕೈ ತೊಳೆಯಬೇಡಿ. ಕೆಲವರಿಗೆ ಊಟವಾದ ಬಳಿಕ, ತಟ್ಟೆಯಲ್ಲೇ ಕೈ ತೊಳೆಯುವ ಅಭ್ಯಾಸವಿರುತ್ತದೆ. ಇದು ಕಾಣಲು ಕೂಡ ಕೆಟ್ಟದ್ದಾಗಿದ್ದು, ಮನೆಗೆ ದರಿದ್ರ, ಆರೋಗ್ಯ ಸಮಸ್ಯೆ ತಂದೊಡ್ಡುತ್ತದೆ. ನಿಮ್ಮ ಆರೋಗ್ಯ ಸರಿಯಾಗಿ ಇರಬೇಕು. ಮನೆಗೆ ದರಿದ್ರ ವಕ್ಕರಿಸಬಾರದು ಎಂದಾದಲ್ಲಿ, ಉಂಡ ತಟ್ಟೆಯಲ್ಲಿ ಕೈ ತೊಳೆಯಬೇಡಿ.
ಐದನೇಯ ನಿಯಮ ತಿಂದ ಜಾಗದಲ್ಲಿ ಕ್ಲೀನ್ ಮಾಡುವುದನ್ನು ಮರಿಯಬೇಡಿ. ಇಂದಿನ ಕಾಲದಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುವುದು ಅಪರೂಪವಾಗಿದೆ. ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುವವರು ಹೆಚ್ಚು. ನೀವು ಯಾವ ರೀತಿಯಾದರೂ ಊಟ ಮಾಡಿ. ಆದರೆ, ಉಂಡ ಜಾಗದಲ್ಲಿ ಮುಸುರೆ ತೆಗೆದು ಒರೆಸುವುದನ್ನು ಮಾತ್ರ ಮರಿಯಬೇಡಿ. ನೀವೇನಾದರೂ ಉಂಡ ಜಾಗವನ್ನು ಕ್ಲೀನ್ ಮಾಡದೇ ಹಾಗೆ ಬಿಟ್ಟಲ್ಲಿ, ಅದರಿಂದ ಮನೆಯಲ್ಲಿ ದರಿದ್ರ ವಕ್ಕರಿಸುತ್ತದೆ.