ಮೊದಲೆಲ್ಲ ಹೆಣ್ಣು ಶಾಲೆಗೆ ಹೋಗುತ್ತಾಳೆ, ವಿದ್ಯೆ ಕಲಿಯುತ್ತಾಳೆ, ಸಾಧನೆ ಮಾಡುತ್ತಾಳೆಂದರೆ, ಅಲ್ಲಿ ಹಂಗಿಸುವಿಕೆಯ ಮಾತು ಕೇಳಿ ಬರುತ್ತಿತ್ತು. ಅವಳೊಬ್ಬಳು ಹೆಣ್ಣು, ಮನೆ ಗೆಲಸಕ್ಕಷ್ಟೇ ಅವಳು ಸೀಮಿತಳು ಎಂದು ಹೇಳುತ್ತಿದ್ದರು. ಆದ್ರೆ ಅಂಥ ಕಾಲದಲ್ಲೂ, ಭಾರತೀಯ ಹೆಣ್ಣು ಮಕ್ಕಳು ಸಾಧನೆ ಮಾಡಿದ್ದಾರೆ. ಅದರಲ್ಲೂ ಆಯಾ ಫೀಲ್ಡ್‌ನಲ್ಲಿ ಮೊದಲನೇಯವರಾಗಿ ಮಿಂಚಿದ್ದಾರೆ. ಹಾಗಾದ್ರೆ ಅವರೆಲ್ಲ ಯಾರು ಅಂತಾ ತಿಳಿಯೋಣ ಬನ್ನಿ..
ಮೊದಲನೇಯವರು ಆನಂದಿಬಾಯಿ ಗೋಪಾಲ್ ರಾವ್ ಜೋಷಿ. ಈಕೆ 1887ರಲ್ಲಿ ಮೊದಲ ಮಹಿಳಾ ವೈದ್ಯೆಯಾಗಿದ್ದವರು. ಅಲ್ಲದೇ ಇಂಗ್ಲೀಷ್ ಔಷಧಿಗಳ ಬಗ್ಗೆ ತಿಳಿಯಲು, ಅಮೆರಿಕಕ್ಕೆ ಹೋಗಿ ತರಬೇತಿ ಪಡೆದು ಬಂದ ಮೊದಲ ಮಹಿಳೆಯಾಗಿದ್ದಾರೆ.
ಎರಡನೇಯದಾಗಿ ಕಲ್ಪನಾ ಚಾವ್ಲಾ. ಈಕೆಯನ್ನ ಎಷ್ಟೋ ಜನ ಮನೆಮಗಳಂತೆ ತಿಳಿದಿದ್ದಾರೆ. 1997ರಲ್ಲಿ ಕಲ್ಪನಾ ಚಾವ್ಲಾ ಅಂತರಿಕ್ಷಕ್ಕೆ ಹೋಗಿದ್ದರು. ಇವರು ಭಾರತದಿಂದ ಅಂತರಕ್ಷಕ್ಕೆ ಹೋಗಿದ್ದ ಮೊದಲ ಮಹಿಳೆಯಾಗಿದ್ದಾರೆ. ಆದರೆ ಅಲ್ಲಿ ಆದ ಅಡಚಣೆಯಿಂದಾಗಿ, ಆಕೆ ಬದುಕಿ ಬರಲು ಸಾಧ್ಯವಾಗಲಿಲ್ಲ.
ಮೂರನೇಯದಾಗಿ ರೋಶನಿ ಶರ್ಮಾ. ಈಕೆ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಮೋಟರ್ ಬೈಕ್ ರೈಡ್ ಮಾಡಿದ ಮೊದಲ ಮಹಿಳೆ.
ನಾಲ್ಕನೇಯದಾಗಿ ಶೀಲಾ ದಾವ್ರೆ. 1988ರಲ್ಲಿ ಭಾರತದ ಮೊದಲ ಮಹಿಳಾ ಆಟೋ ಡ್ರೈವರ್ ಆಗಿದ್ದವರು. ಇವರು ಆಟೋ ಡ್ರೈವಿಂಗ್ ಕಲಿಯಲು ಆಸಕ್ತರಿರುವ ಹೆಣ್ಣು ಮಕ್ಕಳಿಗಾಗಿ ಟ್ರೇನಿಂಗ್ ಶಾಲೆಯನ್ನೇ ಆರಂಭಿಸಿದ್ದಾರೆ.
ಐದನೇಯದಾಗಿ ಅರುಣಿಮಾ ಸಿನ್ಹಾ. ಈಕೆ ಎವರೆಸ್ಟ್ ಶಿಖರವನ್ನು ಹತ್ತಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಇವರು ನ್ಯಾಷನಲ್ ಲೇವಲ್ ವಾಲಿಬಾಲ್ ಆಟಗಾರ್ತಿಯಾಗಿದ್ದರು. 2011ರಲ್ಲಿ ಚಲಿಸುತ್ತಿರುವ ರೈಲಿನಿಂದ ಕಳ್ಳರು ಈಕೆಯನ್ನ ನೂಕಿದ್ದರಿಂದ, ಈಕೆ ಒಂದು ಕಾಲು ಕಳೆದುಕೊಂಡಿದ್ದಾರೆ.
ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..
ಕಾಲೇಜು ಮತ್ತು ಆಫೀಸಿನಲ್ಲಿ ಮಹಿಳಾ ದಿನಾಚರಣೆಯನ್ನು ಈ ರೀತಿ ಸೆಲೆಬ್ರೇಟ್ ಮಾಡಬಹುದು ನೋಡಿ..
Women’s day special: ನಿಮ್ಮನ್ನು ಪ್ರೀತಿಸುವವಳು ನಿಮ್ಮಿಂದ ಇದನ್ನ ಮಾತ್ರ ಬಯಸುತ್ತಾಳೆ..