Tuesday, December 24, 2024

Latest Posts

Women’s Day Special- 20 ಪ್ರಸಿದ್ಧ ಭಾರತೀಯ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಮೊದಲಿಗರು- ಭಾಗ 3

- Advertisement -

ಈ ಮೊದಲ ಭಾಗದಲ್ಲಿ ನಾವು ನಿಮಗೆ ಈ 20 ಜನ ಸಾಧಕಿಯರಲ್ಲಿ 10 ಸಾಧಕಿಯರ ಬಗ್ಗೆ ವಿವರಣೆ ನೀಡಿದ್ದೆವು. ಈಗ ಮುಂದುವರಿದ ಭಾಗವಾಗಿ ಇನ್ನೂ 5 ಸಾಧಕಿಯರ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಹನ್ನೊಂದನೇಯವರು ಪ್ರತಿಭಾ ಪಾಟೀಲ್. ಕಾಂಗ್ರೆಸ್ ಪಾರ್ಟಿ ಆಡಳಿತ ನಡೆಸುತ್ತಿದ್ದ ಅವಧಿ, ಅಂದ್ರೆ 2007ರಿಂದ 2012ರವರೆಗೆ ಪ್ರತಿಭಾ ಪಾಟೀಲ್ ಭಾರತದ ಮೊದಲ ಮಹಿಳಾ ರಾಷ್ಟ್ರಪತಿಯಾಗಿದ್ದರು.

ಹನ್ನೆರಡನೇಯವರು ಕಿರಣ್ ಬೇಡಿ. ಇವರು ಭಾರತದ ಮೊದಲ ಮಹಿಳಾ ಐಪಿಎಸ್ ಆಗಿದ್ದಾರೆ. ಪುರುಷರು ಐಪಿಎಸ್ ಆಫೀಸರ್ ಇದ್ದಾಗಿಗಿಂತಲೂ, ಇವರು ಆಫೀಸರ್ ಇದ್ದಾಗ, ದುಷ್ಟರಿಗೆ ಹೆದರಿಕೆ ಜಾಸ್ತಿ ಇತ್ತು. ಅಷ್ಟು ಸ್ಟ್ರಿಕ್ಟ್ ಆಫೀಸರು ಇದ್ದರು ಇವರು. ಅಲ್ಲದೇ ಇವರು ಭಾರತದ ಮೊದಲ ಮಹಿಳಾ ಸಂಯುಕ್ತ ರಾಷ್ಟ್ರಗಳ ನಾಗರಿಕ ಪೊಲೀಸ್ ಸಲಹೆಗಾರ್ತಿಯಾಗಿದ್ದವರು.

ಹದಿಮೂರನೇಯವರು ಜಸ್ಟಿಸ್ ಫಾತೀಮಾ ಬಿವಿ. 1989ರಲ್ಲಿ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ ಆಗಿ ನೇಮಕಗೊಂಡ ಮೊದಲ ಮಹಿಳೆಯಾಗಿದ್ದಾರೆ.

ಹದಿನಾಲ್ಕನೇಯವರು ಸಾನಿಯಾ ಮಿರ್ಜಾ. ಇವರು ಟೆನ್ನಿಸ್ ಪ್ಲೇಯರ್ ಆಗಿದ್ದು, ಮಹಿಳಾ ಟೆನಿಸ್ ಅಸೋಸಿಯೇಷನ್ ನಿಂದ ಟೆನ್ನಿಸ್ ತಾರೆ ಎಂಬ ಬಿರುದು ಪಡೆದ ಮೊದಲ ಮಹಿಳಾ ಟೆನ್ನಿಸ್ ಆಟಗಾರ್ತಿಯಾಗಿದ್ದಾರೆ.

ಹದಿನೈದನೇಯವರು  ಸೈನಾ ನೆಹ್ವಾಲ್. ಈಕೆ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದು. 2012ರಲ್ಲಿ ನಡೆದ ಓಲಂಪಿಕ್ ಗೇಮ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದಾರೆ. 2015ರ ತನಕ ಇವರು ಈ ರ್ಯಾಂಕಿಂಗ್‌ನ್ನ ಮೆಂಟೇನ್ ಮಾಡಿದ್ದರು.

ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..

ಕಾಲೇಜು ಮತ್ತು ಆಫೀಸಿನಲ್ಲಿ ಮಹಿಳಾ ದಿನಾಚರಣೆಯನ್ನು ಈ ರೀತಿ ಸೆಲೆಬ್ರೇಟ್ ಮಾಡಬಹುದು ನೋಡಿ..

Women’s day special: ನಿಮ್ಮನ್ನು ಪ್ರೀತಿಸುವವಳು ನಿಮ್ಮಿಂದ ಇದನ್ನ ಮಾತ್ರ ಬಯಸುತ್ತಾಳೆ..

ಮುಖದ ಮೇಲಿನ ಡಾರ್ಕ್ ಸ್ಪಾಟ್ಸ್ ಕಡಿಮೆ ಮಾಡೋದು ಹೇಗೆ..?

- Advertisement -

Latest Posts

Don't Miss