Friday, March 28, 2025

Latest Posts

3 ರೀತಿಯ ಸೋಡಾ ಶರ್ಬತ್‌ ರೆಸಿಪಿ..

- Advertisement -

ನಾವಿಂದು 3 ರೀತಿಯ ಸೋಡಾ ಷರಬತ್ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ..

ಬೇಕಾಗುವ ಸಾಮಗ್ರಿ: ಪುದೀನಾ ಸೋಡಾ ಶರಬತ್‌ಗಾಗಿ ಚಟ್ನಿ ತಯಾರಿಸಲು, ಒಂದು ಮುಷ್ಠಿ ಪುದೀನಾ, ಕೊಂಚ ಕೊತ್ತೊಂಬರಿ ಸೊಪ್ಪು, ಒಂದು ನಿಂಬೆಹಣ್ಣು, ಎರಡು ಹಸಿ ಮೆಣಸು, 1 ಇಂಚು ಶುಂಠಿ.

ಒಂದು ಸ್ಪೂನ್ ಚೀಯಾ ಸೀಡ್ಸ್, ಅರ್ಧ ಕಪ್ ಸಕ್ಕರೆ, ಒಂದು ಸ್ಪೂನ್ ಸೇಂಧವ ಲವಣ, ಅರ್ಧ ಚಮಚ ಜೀರಿಗೆ ಪುಡಿ, ಒಂದು ಚಮಚ ಸಾಧಾರಣ ಉಪ್ಪು, ಬೇಕಾದಷ್ಟು ಐಸ್ ಕ್ಯೂಬ್ಸ್, ಒಂದು ಬಾಟಲ್ ಸೋಡಾ.

ನೆಗಡಿ ಮತ್ತು ಕೆಮ್ಮು ಇದ್ದರೆ, ಈ ಸರಳ ಉಪಾಯ ಮಾಡಿ ನೋಡಿ..

ಮಾಡುವ ವಿಧಾನ: ಮೊದಲು ಸಕ್ಕರೆ ಮತ್ತು ನೀರು ಹಾಕಿ, ಶುಗರ್ ಸಿರಪ್ ತಯಾರಿಸಿಟ್ಟುಕೊಳ್ಳಿ. ಪುದೀನಾ ಸೋಡಾ ಶರ್ಬತ್ ಮಾಡಲು, ಮೊದಲು ಮಿಕ್ಸಿ ಜಾರ್‌ಗೆ ಪುದೀನಾ, ನಿಂಬೆರಸ, ಕೊತ್ತೊಂಬರಿ ಸೊಪ್ಪು, ಮೆಣಸಿನಕಾಯಿ, ಶುಂಠಿ, ನಿಂಬೆ ರಸ, ಸಾಧಾರಣ ಉಪ್ಪು, ಸೇಂಧವ ಲವಣ, ಕೊಂಚ ಸಕ್ಕರೆ, ಜೀರಿಗೆ ಪುಡಿ, ಮತ್ತು ಐಸ್ ಹಾಕಿ, ಚಟ್ನಿ ತಯಾರಿಸಿ. ಈಗ ಒಂದು ಗ್ಲಾಸ್‌ನಲ್ಲಿ ನೆನೆಸಿಟ್ಟ ಚೀಯಾ ಸೀಡ್ಸ್‌ನಲ್ಲಿ ಕೊಂಚ ಚೀಯಾ ಸೀಡ್ಸ್ ಹಾಕಿ. ನಂತರ ಕೊಂಚ ಪುದೀನಾ ಮತ್ತು ಶುಗರ್ ಸಿರಪ್ ಹಾಕಿ.  ಈಗ ರೆಡಿ ಮಾಡಿಟ್ಟುಕೊಂಡ ಚಟ್ನಿ ಮತ್ತು ಸೋಡಾ ಹಾಕಿದ್ರೆ, ಪುದೀನಾ ಸೋಡಾ ಷರ್ಬತ್ ರೆಡಿ.

ಮಕ್ಕಳು ತಾವಾಗಿಯೇ ಎಂದಿಗೂ ಯೋಗ, ವ್ಯಾಯಾಮ ಮಾಡಬಾರದು.. ಯಾಕೆ..?

ಎರಡನೇಯದಾಗಿ ರೋಸ್ ಸೋಡಾ ಶರ್ಬತ್. ಒಂದು ಗ್ಲಾಸ್‌ಗೆ ಚೀಯಾ ಸೀಡ್ಸ್, ಒಂದು ಸ್ಪೂನ್ ಚಟ್ನಿ,  ಕೊಂಚ ಪುದೀನಾ, ಶುಗರ್ ಸಿರಪ್ ಹಾಕಿ. ನಂತರ ರೋಸ್ ಸಿರಪ್‌ ಹಾಕಿ. ಈಗ ಸೋಡಾ ಸೇರಿಸಿದ್ರೆ ರೋಸ್ ಸೋಡಾ ರೆಡಿ.

ಮೂರನೇಯದಾಗಿ ಮ್ಯಾಂಗೋ ಸೋಡಾ. ನೀವು ಇದಕ್ಕಾಗಿ ಮನೆಯಲ್ಲೇ ಮ್ಯಾಂಗೋ ಜ್ಯೂಸ್ ತಯಾರಿಸಿ ಬಳಸಿ. ಇಲ್ಲದಿದ್ದರೆ ಫ್ರೂಟಿ ಬಳಸಬಹುದು. ಒಂದು ಗ್ಲಾಸ್‌ಗೆ ಚೀಯಾ ಸೀಡ್ಸ್, ಒಂದು ಸ್ಪೂನ್ ಚಟ್ನಿ, ಕೊಂಚ ಪುದೀನಾ, ಶುಗರ್ ಸಿರಪ್ ಹಾಕಿ. ನಂತರ ಫ್ರೂಟಿ ಸೇರಿಸಿ, ಸೋಡಾ ಮಿಕ್ಸ್ ಮಾಡಿದ್ರೆ ಮ್ಯಾಂಗೋ ಸೋಡಾ ಶರ್ಬತ್ ರೆಡಿ. ಈ ಶರ್ಬತ್ ಕುಡಿಯುವಾಗ ನಿಮಗೆ ಉಪ್ಪು, ಸೇಂಧವ ಲವಣ, ಐಸ್‌, ಸೋಡಾ, ಜೀರಿಗೆ ಪುಡಿ, ಇವುಗಳನ್ನ ಅವಶ್ಯಕತೆಗೆ ತಕ್ಕಷ್ಟು ಬಳಸಬಹುದು.

- Advertisement -

Latest Posts

Don't Miss