Saturday, July 27, 2024

Latest Posts

41 ಕೋಟಿ ರೂ. ಒಡೆಯರಾಗಿದ್ದಾರೆ ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್: ಪತ್ನಿ ಹೆಸರಲ್ಲೂ ಇದೆ ಕೋಟಿ ಆಸ್ತಿ

- Advertisement -

Hassan Political News: ಹಾಸನ: ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ನಾಮಪತ್ರ ಸಲ್ಲಿಕೆ ಮಾಡಿದ್ದು, ತಮ್ಮ ಆಸ್ತಿ ಎಷ್ಟು ಎಂದು ಘೋಷಿಸಿಕೊಂಡಿದ್ದಾರೆ.

ಶ್ರೇಯಸ್ ಪಟೇಲ್ 41 ಕೋಟಿ ರೂಪಾಯಿ ಒಡೆಯರಾಗಿದ್ದಾರೆ. ಪತ್ನಿ ಅಕ್ಷತಾ ಹೆಸರಿನಲ್ಲೂ ಕೋಟಿ ಬೆಲೆ ಬಾಳೋ ಆಸ್ತಿಗಳಿದೆ. ಶ್ರೇಯಸ್ 1.25 ಲಕ್ಷ ನಗದು ಹೊಂದಿದ್ದು, ಪತ್ನಿ ಬಳಿ 3.94 ಲಕ್ಷ ನಗದು ಇದೆ. ವಿವಿಧ ಬ್ಯಾಂಕ್ ನಲ್ಲಿ ಶ್ರೇಯಸ್ 6.23 ಲಕ್ಷ ಠೇವಣಿ ಹೊಂದಿದ್ದಾರೆ.

ಸ್ನೇಹಿತರು ಹಾಗು ಬಂದುಗಳಿಂದ 50 ಲಕ್ಷ ಸಾಲ ಮಾಡಿದ್ದಾರೆ. ಪತ್ನಿ ಅಕ್ಷತಾ ತಾಯಿಯಿಂದ 3.64 ಲಕ್ಷ ಹಾಗು ವ್ಯಕ್ತಿಯೊಬ್ಬರಿಂದ 88 ಲಕ್ಷ ಸಾಲ‌ಪಡೆದಿದ್ದಾರೆ. ಇನ್ನು ಶ್ರೇಯಸ್ ಪಟೇಲ್ ಪತ್ನಿಗಿಂತ ಹೆಚ್ಚು ಚಿನ್ನಾಭರಣ ಹೊಂದಿದ್ದಾರೆ. ಶ್ರೇಯಸ್ ಬಳಿ ಇದೆ 59 ಲಕ್ಷದ 65 ಸಾವಿರ ಬೆಲೆ ಬಾಳೋ ಚಿನ್ನಾಭರಣ ಇದೆ. ಪತ್ನಿ ಬಳಿ 22 ಲಕ್ಷ ಬೆಲೆ ಬಾಳೊ 450 ಗ್ರಾಮ್ ಚಿನ್ನಾಭರಣ ಹಾಗೂ 1 kg ಬೆಳ್ಳಿ ಇದೆ.

ಒಟ್ಟು 1ಕೋಟಿ 40 ಲಕ್ಷದ 96 ಸಾವಿರದ 246 ರೂ ಮೌಲ್ಯದ ಚರಾಸ್ಥಿ ಹೊಂದಿರೊ ಶ್ರೇಯಸ್. ಪತ್ನಿ ಹೆಸರಿನಲ್ಲಿ 31 ಲಕ್ಷದ 14 ಸಾವಿರದ 917 ರೂ ಮೌಲ್ಯದ ಚರಾಸ್ಥಿ ಇದೆ. ಇನ್ನು ಶ್ರೇಯಸ್ 20 ಎಕರೆ ಕೃಷಿ ಭೂಮಿ ಒಡೆಯನಾಗಿದ್ದಾರೆ. ಬೆಂಗಳೂರು ಹಾಗು ಹೊಳೆನರಸೀಪುರ ದ ವಿವಿದೆಡೆ ಕೃಷಿಯೇತರ ಭೂಮಿ ಹೊಂದಿದ್ದಾರೆ. ಒಟ್ಟು 39. ಕೋಟಿ 58 ಲಕ್ಷದ 6 ಸಾವಿರದ 482 ರೂ ಮೌಲ್ಯದ ಕೃಷಿಯೇತರ ಭೂಮಿ ಹಾಗು ವಾಣಿಜ್ಯ ಕಟ್ಟಡದಿಂದ ಇವರಿಗೆ ಬರುತ್ತದೆ.

ಶ್ರೇಯಸ್ ಪತ್ನಿ ಹೆಸರಿನಲ್ಲಿ ಬೆಂಗಳೂರಿನಲ್ಲಿ 1.36 ಕೋಟಿ ಬೆಲೆಬಾಳೋ ಒಂದು ನಿವೇಶನ ಹಾಗು ಮನೆ ಹೊಂದಿದ್ದಾರೆ. ಒಟ್ಟು ಚರ ಸ್ಥಿರಾಸ್ತಿ ಸೇರಿ 40 ಕೋಟಿ 99 ಲಕ್ಷದ 02 ಸಾವಿರದ 728 ರೂ ಮೌಲ್ಯದ ಆಸ್ತಿಯನ್ನು ಶ್ರೇಯಸ್ ಹೊಂದಿದ್ದಾರೆ. ಜೊತೆಗೆ ಇವರ ಪತ್ನಿ ಅಕ್ಷತಾ ಹೆಸರಿನಲ್ಲಿ ಒಟ್ಟು 1.68 ಕೋಟಿ ಚರ ಮತ್ತು ಸ್ಥಿರಾಸ್ಥಿ ಇದೆ.

ತನ್ನ ಹೆಸರಿನಲ್ಲಿ ಒಂದು ಇನ್ನೋವ ಕಾರು ಒಂದು ಟ್ರ್ಯಾಕ್ಟರ್ ಶ್ರೇಯಸ್‌ ಹೊಂದಿದ್ದಾರೆ. ತಮ್ಮ ಬಳಿ 65 ಸಾವಿರದ ಮೊಬೈಲ್ ಹಾಗು ಪತ್ನಿ ಬಳಿ 55 ಸಾವಿರದ ಮೊಬೈಲ್ ಹೊಂದಿರೊ ಬಗ್ಗೆ ಆಸ್ತಿ ವಿವಿರದಲ್ಲಿ ಶ್ರೇಯಸ್ ಪಟೇಲ್ ಘೋಷಿಸಿದ್ದಾರೆ.

ಸುರೇಶಾ, ಸಿಮೆಂಟ್ ಮಂಜಾ ನಿನ್ನ ಬಿಡೋದಿಲ್ಲಾ, ಪ್ರೀತಂಗೌಡ ನಿನ್ನ ಸಮಾಧಿ ಮಾಡಿ ಬಿಡುತ್ತಾರೆ: ಜೆಡಿಎಸ್ ವಿರುದ್ಧ ಡಿಕೆಶಿ ವ್ಯಂಗ್ಯ

ವೀಣಾ ಕಾಶಪ್ಪನವರ್ ಕುರಿತು ಶಾಕಿಂಗ್ ಹೇಳಿಕೆ‌ ನೀಡಿದ ಸಚಿವ ಆರ್.ಬಿ.ತಿಮ್ಮಾಪೂರ್

ನಾಮಪತ್ರ ಸಲ್ಲಿಸಿದ ಯದುವೀರ್ ಒಡೆಯರ್: ಮಗನಿಗೆ ಸಾಥ್ ಕೊಟ್ಟ ರಾಜಮಾತೆ ಪ್ರಮೋದಾದೇವಿ

- Advertisement -

Latest Posts

Don't Miss