ಪುರುಷರಿಗಿಂತ ಮಹಿಳೆಯರಿಗೆ ಉತ್ತಮ ಪೋಷಕಾಂಶವುಳ್ಳ ಆಹಾರಗಳು ಬೇಕಾಗುತ್ತದೆ. ಯಾಕಂದ್ರೆ ಅವರು ಪ್ರತೀ ತಿಂಗಳು ಮುಟ್ಟಾಗುತ್ತಾರೆ. ಮುಂದೆ ಗರ್ಭಿಣಿಯರಾಗುತ್ತಾರೆ. ಆದ್ರೆ ಎಲ್ಲ ಮಹಿಳೆಯರಿಗೂ ಹೀಗೆ ಗರ್ಭಿಣಿಯಾಗುವ ಭಾಗ್ಯವಿರುವುದಿಲ್ಲ. ಅಂಥವರಿಗಾಗಿ ನಾವು 5 ಸೂಪರ್ ಸಪ್ಲಿಮೆಂಟ್‌ಗಳನ್ನ ಹೇಳಲಿದ್ದೇವೆ. ಹಾಗಾದ್ರೆ ಆ ಆಹಾರಗಳು ಯಾವುದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಆಹಾರ ಬಾಳೆಹಣ್ಣು, ಕಿತ್ತಳೆ ಹಣ್ಣು, ಸ್ಟ್ರಾಬೇರಿ, ಪೀಚ್, ಪಿಯರ್ಸ್ ಹಣ್ಣುಗಳು, ಡ್ರೈಫ್ರೂಟ್ಸ್, ಹಸಿರು ಸೊಪ್ಪುಗಳು, ಬೀನ್ಸ್ ಇವುಗಳ ಸೇವನೆಯಿಂದ ನಿಮ್ಮ ದೇಹಕ್ಕೆ ಅವಶ್ಯಕತೆ ಇರುವ ಪೋಷಕಾಂಶಗಳು ಸಿಗುತ್ತದೆ. ಇನೋಸಿಟಾಲ್ ಎನ್ನುವ ಔಷಧ ಸೇವನೆಯಿಂದ ನಿಮಗೆ ಯಾವ ಪೋಷಕಾಂಶ ದೊರೆಯುತ್ತದೆಯೋ, ಅದೆಲ್ಲವೂ ಈ ಆಹಾರ ಸೇವನೆಯಿಂದ ದೊರೆಯುತ್ತದೆ.
ಎರಡನೇಯ ಆಹಾರ ವಿಟಾಮಿನ್ ಬಿ6, ವಿಟಾಮಿನ್ ಬಿ12 ಇರುವ ಆಹಾರ ಸೇವನೆ ಮಾಡಬೇಕು. ಈ ಅಂಶವಿರುವ ಆಹಾರವನ್ನ ಯಾಕೆ ಸೇವನೆ ಮಾಡಬೇಕು ಅಂದ್ರೆ, ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಲು. ನಿಮ್ಮ ದೇಹದಲ್ಲಿ ರಕ್ತದ ಪ್ರಮಾಣ ಸರಿಯಾಗಿ ಇದ್ದಲ್ಲಿ, ನಿಮ್ಮ ಋತುಚಕ್ರ ಸರಿಯಾಗಿ ಇರುತ್ತದೆ. ಗರ್ಭಿಣಿಯಾಗಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಹಾಗಾಗಿ ನೀವು ದಿನಕ್ಕೆ ಒಂದು ಎಳ್ಳಿನ ಲಾಡು, 5 ನೆನೆಸಿ ಸಿಪ್ಪೆ ತೆಗೆದ ಬಾದಾಮಿ, 1 ನೆನೆಸಿದ ವಾಲ್ನಟ್, ಹಸಿರು ಸೊಪ್ಪು, ಹೋಲ್ ಗ್ರೇನ್ಸ್ ಸೇವನೆ ಮಾಡಬೇಕು.
ಮೂರನೇಯ ಆಹಾರ ವಿಟಾಮಿನ್ ಡಿ. ಇದಕ್ಕಾಗಿ ನೀವು ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯೊಳಗೆ ಸಿಗುವ ತಿಳಿ ಬಿಸಿಲಿಗೆ ಮೈಯೊಡ್ಡಿ ನಿಂತರೆ ಸಾಕು. ನಿಮಗೆ ಭರಪೂರ ವಿಟಾಮಿನ್ ಡಿ ಸಿಗುತ್ತದೆ. ಇದನ್ನ ಪಡೆಯುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ನಿಮ್ಮ ಸೌಂದರ್ಯ ಹೆಚ್ಚುತ್ತದೆ. ಅಲ್ಲದೇ ಗರ್ಭಿಣಿಯಾದವರು ಕೂಡ ಹೀಗೆ ವಿಟಾಮಿನ್ ಡಿ ಪಡೆದರೆ, ನಿಮ್ಮ ಮಗು ಆರೋಗ್ಯವಾಗಿ, ಚುರುಕಾಗಿ ಇರತ್ತೆ.
ನಾಲ್ಕನೇಯ ಆಹಾರ ನಿಮ್ಮ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗಲು ನೀವು ಉತ್ತಮ ಆಹಾರ ಸೇವನೆ ಮಾಡಬೇಕು. ಪಾಲಕ್ ಸೊಪ್ಪು, ಕ್ವಾಲಿ ಫ್ಲವರ್, ಬ್ರೋಕೋಲಿ, ವಾಲ್ನಟ್, ಪಿಸ್ತಾ, ಆರೆಂಜ್, ದ್ರಾಕ್ಷಿ ಇವನ್ನ ಸೇವನೆ ಮಾಡಬೇಕು. ಇನ್ನು ನಾನ್‌ವೆಜ್ ತಿನ್ನುವವರು, ಹೆಚ್ಚು ಮಸಾಲೆ, ಎಣ್ಣೆ, ಉಪ್ಪು, ಖಾರ ಬೆರೆಸದ ನಾನ್‌ವೆಜ್ ಸೇವಿಸಬಹುದು.
ಐದನೇಯ ಆಹಾರ ಜೀರ್ಣಕ್ರಿಯೆಯನ್ನ ಸುಧಾರಿಸುವ, ಆರೋಗ್ಯಕರವಾಗಿ ಇರಿಸುವ ಆಹಾರವನ್ನು ನೀವು ಸೇವಿಸಬೇಕು. ಕ್ಯಾರೆಟ್ ಜ್ಯೂಸ್, ಬಾಳೆಹಣ್ಣು, ಮೊಸರು, ತುಪ್ಪ, ಮಜ್ಜಿಗೆ, ಹೀಗೆ ಜೀರ್ಣಕ್ರಿಯೆ ಉತ್ತಮಗೊಳಿಸುವ ಆಹಾರವನ್ನು ನೀವು ಸೇವಿಸಬೇಕು.
ನಾವು ಈಗ ಹೇಳಿರುವ ಆಹಾರವನ್ನ ನೀವು ಸೇವಿಸಿದ್ರೆ, ನಿಮಗೆ ಗರ್ಭಿಣಿಯಾಗುವುದಕ್ಕೆ ಇದು ಸಹಾಯ ಮಾಡುತ್ತದೆ. ಪಿಸಿಓಡಿ, ಪಿಸಿಓಎಸ್ ಸಮಸ್ಯೆ, ಮುಟ್ಟಿನ ಸಮಸ್ಯೆ ಇದ್ದರೂ, ಈ ಆಹಾರ ಸೇವನೆಯಿಂದ ಆ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ನಪುಂಸಕತೆ, ಡಯಾಬಿಟೀಸ್, ಕೂದಲು, ಸೌಂದರ್ಯ ಸಮಸ್ಯೆ ಎಲ್ಲದಕ್ಕೂ ಈ ವಸ್ತುವನ್ನು ಬಳಸಿ.. ಭಾಗ 2
ಒಂದೇ ವಾರದಲ್ಲಿ ನಿಮ್ಮ ಕೂದಲು ಉದುರುವ ಸಮಸ್ಯೆಯನ್ನ ಹೀಗೆ ಕಡಿಮೆ ಮಾಡಿ..