ಮೊದ ಮೊದಲು ಸಣ್ಣಗೆ ಶುರುವಾಗುವ ಕೆಮ್ಮು, ನಂತರದಲ್ಲಿ ಜೀವ ಹಿಂಡುವಷ್ಟು ನೋವನ್ನ ಕೊಡುತ್ತದೆ. ಹಾಗಾಗಿ ಕೆಮ್ಮು ಶುರುವಾಗುವಾಗಲೇ, ಅದಕ್ಕೊಂದು ಮದ್ದು ಮಾಡಿ, ಸೇವಿಸಿಬಿಡಬೇಕು. ಹಾಗಾಗಿ ನಾವಿಂದು ಕೆಮ್ಮು ಕಡಿಮೆ ಮಾಡಲು 5 ಮನೆಮದ್ದು ಹೇಳಲಿದ್ದೇವೆ..
ಮೊದಲನೇಯ ಮನೆ ಮದ್ದು, ಕೊಂಚ ಅರಿಶಿನ ಬಾಯಿಗೆ ಹಾಕಿ, 5 ನಿಮಿಷ ಅದನ್ನು ನುಂಗದೇ, ಹಾಗೆ ಇರಿಸಿ. ಇದರಿಂದಲೂ ಕೆಮ್ಮು ಕಡಿಮೆಯಾಗುತ್ತದೆ. ಇದರಿಂದ ಗಂಟಲಿನ ಯಾವುದೇ ಸಮಸ್ಯೆ ಇದ್ದರೂ ಕಡಿಮೆಯಾಗುತ್ತದೆ. ಆದ್ರೆ ಇದನ್ನು 5 ನಿಮಿಷಕ್ಕಿಂತ ಹೆಚ್ಚು ಹೊತ್ತು ಬಾಯಲ್ಲಿರಿಸಬೇಡಿ.
ಎರಡನೇಯ ಮನೆ ಮದ್ದು ಹಸಿ ಶುಂಠಿಯನ್ನು ಸುಟ್ಟು ಅದಕ್ಕೆ ಅರಿಶಿನ ಹಚ್ಚಿ, ಬಾಯಿಗೆ ಹಾಕಿ, ಅದರ ರಸ ನುಂಗಬೇಕು. 15 ನಿಮಿಷ ಕೊಂಚ ಕೊಂಚ ರಸ ನುಂಗಿದ್ರೆ ಸಾಕು. ಶುಂಠಿ ಚಿಕ್ಕ ತುಂಡಿರಲಿ. ಅರಿಶಿನವೂ ಕೊಂಚ ಬಳಸಿದ್ರೆ ಸಾಕು. ಇವೆರಡೂ ಹೆಚ್ಚಾದ್ರೆ, ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. ನೀವು ಶುಂಠಿ ರಸದೊಂದಿಗೆ ಅರಿಶಿನ ಸೇರಿಸಿ, ಸೇವಿಸಿದ್ರೂ ಒಳ್ಳೆಯದು.
ಮೂರನೇಯ ಮನೆಮದ್ದು ದಾಳಿಂಬೆ ರಸವನ್ನು ಬಿಸಿ ಮಾಡಿ, ಆರಿಸಿ ಕುಡಿಯುವುದರಿಂದಲೂ ಕೆಮ್ಮನ್ನು ಶಮನ ಮಾಡಬಹುದು. ಪೇರಲೆ ಹಣ್ಣನ್ನು ಹಾಗೇ ತಿಂದರೆ, ಕೆಮ್ಮು ಬರುತ್ತದೆ. ಅಥವಾ ಮೊದಲೇ ನಿಮಗೆ ಕೆಮ್ಮಿದ್ದರೆ, ಆ ಕೆಮ್ಮು ಹೆಚ್ಚಾಗುತ್ತದೆ. ಆದ್ರೆ ಪೇರಲೆ ಹಣ್ಣನ್ನು ಬಿಸಿ ಮಾಡಿ ತಿನ್ನುವುದರಿಂದಲೂ ಕೆಮ್ಮು ಕಡಿಮೆಯಾಗುತ್ತದೆ.
ನಾಲ್ಕನೇಯ ಮನೆಮದ್ದು ಲವಂಗವನ್ನು ತಿನ್ನಬೇಕು. ದಿನಕ್ಕೆ ಎರಡು ಲವಂಗವನ್ನು ತಿಂದರೆ, ಕೆಮ್ಮು ಕ್ರಮೇಣ ಕಡಿಮೆಯಾಗುತ್ತದೆ.
ಐದನೇಯ ಮನೆಮದ್ದು ರಾತ್ರಿ ಮಲಗುವಾಗ ಅರ್ಧ ಸ್ಪೂನ್ ಜೇನುತುಪ್ಪಕ್ಕೆ, ಕೊಂಚ ಅರಿಶಿನ ಬೆರೆಸಿ ತಿನ್ನಬೇಕು. ಅಥವಾ ಅರಿಶಿನ ಮತ್ತು ಬೆಲ್ಲ ಸೇರಿಸಿ ತಿನ್ನಬೇಕು. ಇದನ್ನು ತಿಂದ ಬಳಿಕ ಮತ್ತೆ ಏನನ್ನು, ತಿನ್ನಬಾರದು ಮತ್ತು ಕುಡಿಯಬಾರದು. ನೀರನ್ನ ಸಹ ಕುಡಿಯಬಾರದು.
ಮಕ್ಕಳಲ್ಲಿ ಕ್ಯಾಲ್ಶಿಯಂ ಕಡಿಮೆ ಇದ್ದರೆ ಹೇಗೆ ಗೊತ್ತಾಗತ್ತೆ..? ಇದರ ಲಕ್ಷಣ ಮತ್ತು ಪರಿಹಾರವೇನು..?