Tuesday, May 21, 2024

Latest Posts

ಗರ್ಭಿಣಿಯರು ಯಾವ ರೀತಿಯ ಡಯಟ್ ಮಾಡಬೇಕು..?

- Advertisement -

ಡಿಲೆವರಿಯಾದ ಮೇಲೆ ಹೆಣ್ಣು ಮಕ್ಕಳು ದಪ್ಪ ಆಗಬಾರದು. ನಿಮ್ಮ ಫಿಗರ್ ಹಾಳಾಗಬಾರದು ಅಂದ್ರೆ, ಗರ್ಭಾವಸ್ಥೆಯಲ್ಲಿದ್ದಾಗ ನಿಮ್ಮ ಡಯಟ್ ಸರಿಯಾಗಿ ಇರಬೇಕು. ಯೋಗಾ, ವಾಕಿಂಗ್ ಸರಿಯಾಗಿ ಮಾಡಬೇಕು. ಆಗಲೇ ಮಗುವಾದ ಬಳಿಕವೂ ನಿಮ್ಮ ಫಿಗರ್ ಚೆನ್ನಾಗಿರತ್ತೆ. ಇಂದು ನಾವು ಗರ್ಭಿಣಿಯರು ಯಾವ ರೀತಿ ಡಯಟ್ ಮಾಡಬೇಕು ಅಂತಾ ತಿಳಿಯೋಣ ಬನ್ನಿ..

ಹೆಚ್ಚಿನ ಹೆಣ್ಣು ಮಕ್ಕಳು ಗರ್ಭಾವಸ್ಥೆಯಲ್ಲಿದ್ದಾಗ, ಟೇಸ್ಟಿ ಟೇಸ್ಟಿ ತಿಂಡಿ ತಿಂತಾರೆ. ತಿನ್ನುವ ಬಯಕೆ ಆಗುತ್ತೆ ಅನ್ನೋದು ನಿಜ. ಆದ್ರೆ ನೀವು ಹೆಲ್ದಿ ಆಹಾರಕ್ಕಿಂತ, ಟೇಸ್ಟಿ ಆಹಾರವನ್ನೇ ಹೆಚ್ಚು ತಿಂದ್ರೆ, ಬೊಜ್ಜು ಬೆಳೆಯೋದು ಗ್ಯಾರಂಟಿ. ಅಲ್ಲದೇ, ಮಗುವಾದ ಮೇಲೆ ಮತ್ತೆ ನೀವು ಸಣ್ಣ ಆಗಲು ತುಂಬಾ ಕಷ್ಟ ಆಗತ್ತೆ. ಹಾಗಾಗಿ ನೀವು ಲೈಟ್ ಆಗಿಯಾದ್ರೂ ಡಯಟ್ ಮಾಡಲೇಬೇಕು.

ಮೇಥಿ ಮಟರ್ ಮಲಾಯ್ ರೆಸಿಪಿ..

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 5 ನೆನೆಸಿ ಸಿಪ್ಪೆ ತೆಗೆದ ಬಾದಾಮಿ, 5 ನೆನೆಸಿದ ಒಣದ್ರಾಕ್ಷಿ, ಮತ್ತು ಒಂದು ಆ್ಯಪಲ್ ತಿನ್ನಿ. ಇದಾಗಿ ಒಂದು ತಾಸಾದ್ರೂ ನೀವು ಏನೂ ತಿನ್ನಬಾರದು. ಇದನ್ನು ತಿಂದ ತಕ್ಷಣ, ಒಂದು ವಾಕ್ ಮಾಡಿ, ಇಲ್ಲವಾದಲ್ಲಿ ಬೆಳಿಗ್ಗೆ 9 ಗಂಟೆಯೊಳಗಿನ ಸೂರ್ಯನ ಬಿಸಿಲಿಗೆ ಮೈಯೊಡ್ಡಿ ನಿಲ್ಲಿ. ಇದಾದ ಬಳಿಕ ತಿಂಡಿ ತಿನ್ನಿ. ನೀವು ಯಾವಾಗಲಾದರೂ ಒಮ್ಮೆ ಪೂರಿ, ಬನ್ಸ್‌, ವಡೆಯಂಥ ಕರಿದ ತಿಂಡಿ ತಿನ್ನಬಹುದು. ಅದನ್ನು ಬಿಟ್ಟು ವಾರದಲ್ಲಿ ಎರಡರಿಂದ ಮೂರು ಬಾರಿ, ಅಥವಾ ತಿಂಗಳಲ್ಲಿ 10 ಬಾರಿ ಎಲ್ಲ ಕರಿದ ಪದಾರ್ಥವನ್ನ ತಿಂಡಿಗೆ ತಿನ್ನುವಂತಿಲ್ಲ. ಎಗ್ ತಿನ್ನುವವರು ಆಮ್ಲೆಟ್ ತಿನ್ನಬಹುದು.

ಇದಾದ ಬಳಿಕ ನಿಮ್ಮ ವೈದ್ಯರು ನಿಮಗೆ ಕ್ಯಾಲ್ಸಿಯಂ ಮಾತ್ರೆ ಕೊಟ್ಟಿರುತ್ತಾರ. ಅದನ್ನು ಮರಿಯದೇ ತೆಗೆದುಕೊಳ್ಳಿ. ಇನ್ನು ತಿಂಡಿಯೊಂದಿಗೆ ಟೀ, ಕಾಫಿ ಬದಲು, ಜ್ಯೂಸ್ ಕುಡಿದರೆ ಒಳ್ಳೆಯದು. ಇದಾದ ಬಳಿಕ 11 ಗಂಟೆಯಿಂದ 11.30ರೊಳಗೆ ಎರಡು ಬಗೆಯ ಹಣ್ಣನ್ನು ತಿನ್ನಬೇಕು. ಅವೆರಡು ಹಣ್ಣು ನಿಮ್ಮ ದೇಹಕ್ಕೆ ಹೊಂದುವಂತಾಗಿರಬೇಕು. ಉದಾಹರಣೆಗೆ ಕಿತ್ತಳೆ ಹಣ್ಣು ಮತ್ತು ಬಾಳೆ ಹಣ್ಣು ತಿನ್ನಬಾರದು. ಯಾಕಂದ್ರೆ ಇವೆರಡು ವಿರುದ್ಧ ಹಣ್ಣುಗಳು.

ಮುಖದ ಕಾಂತಿ ಹೆಚ್ಚಿಸಲು ಈ ಎಣ್ಣೆಯನ್ನು ಬಳಸಿ..

ನೀವು ಆ್ಯಪಲ್ ಮತ್ತು ಬಾಳೆಹಣ್ಣು ತಿನ್ನಬಹುದು. ಅಥವಾ ಕಿತ್ತಳೆ ಹಣ್ಣನ್ನಷ್ಟೇ ತಿನ್ನಬಹುದು. ದಾಳಿಂಬೆ, ಪಯರ್ಸ್ ಹಣ್ಣು ತಿನ್ನಬಹುದು. 12.30ಕ್ಕೆ ಊಟ ಮಾಡಬೇಕು. ಹಸಿ ತರಕಾರಿ, ಸೊಪ್ಪು, ಮೊಳಕೆ ಕಾಳು, ಮೊಸರು, ತುಪ್ಪ ಸಹಿತ ಪೌಷ್ಟಿಕಾಂಶಯುಕ್ತ ಆಹಾರ ನಿಮ್ಮದಾಗಿರಲಿ. ಸಂಜೆ ವೇಳೆಗೆ ಸೂಪ್ ಸೇವನೆ ಮಾಡಿ. ಹೆಲ್ದಿ ಸ್ನ್ಯಾಕ್ಸ್ ತಿನ್ನಿ.

ಬೇಯಿಸಿದ ಸ್ವೀಟ್ ಕಾರ್ನ್, ಕಾಳಿನ ಉಸುಳಿ, ಡ್ರೈಫ್ರೂಟ್ಸ್ ಲಡ್ಡು, ಗೋಧಿ, ರಾಗಿ, ಹೆಸರು ಕಾಳಿನ ಹಿಟ್ಟಿನ ಲಾಡು ಹೀಗೆ ಆರೋಗ್ಯಕರ ಸ್ನ್ಯಾಕ್ಸ್ ತಿನ್ನಿ. ರಾತ್ರಿ ಲೈಟ್ ಆಗಿ ಊಟ ಮಾಡಿ. ಗರ್ಭಾವಸ್ಥೆಯಲ್ಲಿದ್ದಾಗ, ಹೆಚ್ಚು ಚಪಾತಿ, ರೊಟ್ಟಿ ತಿನ್ನಬಾರದು. ಯಾಕಂದ್ರೆ ಇದು ದೇಹಕ್ಕೆ ಉಷ್ಣತೆ ಒದಗಿಸುತ್ತದೆ. ಮತ್ತು ದೇಹ ಹೆಚ್ಚು ಉಷ್ಣವಾದಷ್ಟು ಮಗುವಿನ ಜೀವಕ್ಕೆ ತೊಂದರೆಯಾಗುತ್ತದೆ.  ಹಾಗಾಗಿ ರಾತ್ರಿ ದೋಸೆ ತಿನ್ನಬಹುದು.

- Advertisement -

Latest Posts

Don't Miss