Friday, October 17, 2025

Latest Posts

ಮೇಕಪ್ ಮಾಡಿಕೊಳ್ಳದೇ, ಚೆಂದಗಾಣಿಸಲು ಟಿಪ್ಸ್- ಭಾಗ 1

- Advertisement -

ಇಂದಿನ ಕಾಲದಲ್ಲಿ ನ್ಯಾಚುರಲ್ ಬ್ಯೂಟಿ ಪಡಿಯೋದಕ್ಕೆ ಜನರಿಗೆ ಟೈಮ್ ಸಿಗೋದಿಲ್ಲಾ. ಬೆಳಿಗ್ಗೆ ಎದ್ದ ಹಾಗೆ, ಬೇಗ ಬೇಗ ರೆಡಿಯಾಗಿ ಆಫೀಸ್‌ಗೆ ಹೋಗೋದು. ನಂತರ ಕೆಲಸ ಮುಗಿಸಿ, ಲೇಟಾಗಿ ಮನೆಗೆ ಬಂದ್ರೆ, ಸುಸ್ತಾಗಿರತ್ತೆ. ಹಾಗಾಗಿ ತಮ್ಮ ಅಂದದ ಬಗ್ಗೆ ಜನ ಯೋಚಿಸೋದು ಕಡಿಮೆ. ಹಾಗಾಗಿ ಹೆಣ್ಣು ಮಕ್ಕಳು ಚೆಂದ ಕಾಣಲು ಮೇಕಪ್‌ ಮಾಡಿಕೊಂಡು ಹೊರಟುಬಿಡುತ್ತಾರೆ. ಇದು ಬರೀ ಹೆಣ್ಣು ಮಕ್ಕಳ ಸಮಸ್ಯೆ ಅಲ್ಲ, ಗಂಡು ಮಕ್ಕಳು ಕೂಡ ತಮ್ಮ ಅಂದ ಚಂದದ ಬಗ್ಗೆ ಗಮನ ಹರಿಸೋದು ಮುಖ್ಯ. ಹಾಗಾಗಿ ನಾವಿಂದು ಮೇಕಪ್‌ ಮಾಡದೇ, ಚೆಂದಗಾಣಿಸಲು ಏನು ಮಾಡಬೇಕು ಅನ್ನೋ ಬಗ್ಗೆ ಟಿಪ್ಸ್ ಕೊಡಲಿದ್ದೇವೆ.

ಈ 3 ಗುಣಗಳಿಂದಲೇ ಕೆಲವರು ಯಶಸ್ವಿಯಾಗದೇ ಇರೋದು..

1. ವಾರಕ್ಕೆ ಎರಡು ಬಾರಿ ಸ್ಕ್ರಬಿಂಗ್ ಮಾಡಿಕೊಳ್ಳಿ. ಅರ್ಧ ಟೊಮೆಟೋಗೆ ಸಕ್ಕರೆ ಹಚ್ಚಿ, ಅದರಿಂದ ಸ್ಕ್ರಬಿಂಗ್ ಮಾಡಿಕೊಳ್ಳಿ. ಸ್ಕ್ರಬಿಂಗ್ ಮಾಡುವುದರಿಂದ ನಿಮ್ಮ ಸ್ಕಿನ್ ಹೊಳೆಯುತ್ತದೆ. ಡೆಡ್‌ ಸ್ಕಿನ್ ಹೋಗುತ್ತದೆ.  ನೀವು ಸ್ಕ್ರಬಿಂಗ್ ಮಾಡಲು ಮಾರುಕಟ್ಟೆಯಲ್ಲಿ ಸಿಗುವ ಪ್ರಾಡಕ್ಟ್ ಬಳಸೋದಾದ್ರೆ, ನಿಮ್ಮ ಸ್ಕಿನ್‌ಗೆ ಸರಿ ಹೊಂದುವುದನ್ನ ಬಳಸಿ. ಇಲ್ಲವಾದಲ್ಲಿ, ಅದರಿಂದ ಸೈಡ್ ಎಫೆಕ್ಟ್ ಆಗಿ, ನಿಮ್ಮ ಸ್ಕಿನ್ ಹಾಳಾಗಬಹುದು.

ಬುದ್ಧಿವಂತರಿಗಿರುವ ಮೂರು ಲಕ್ಷಣಗಳಿವು..

2. ಕೆಲವರ ಮುಖದಲ್ಲಿ ಚುಕ್ಕೆ ಚುಕ್ಕೆ ಹೋಲ್‌ಗಳಿರುತ್ತದೆ. ಇದನ್ನ ಪೋರ್ಸ್ ಅಂತಾ ಕರೀತಾರೆ. ಇಂಥ ಫೇಸ್ ಇದ್ದವರು, ನಿಮ್ಮ ಸ್ಕಿನ್ ಸ್ಮೂತ್ ಆಗಬೇಕು ಅಂದ್ರೆ, ಪ್ರತೀ ದಿನ ನಾಲ್ಕು ಬಾರಿಯಾದ್ರೂ ತಣ್ಣೀರಿನಿಂದ ಮುಖ ತೊಳೆಯಿರಿ. ಮತ್ತು ರಾತ್ರಿ ಮಲಗುವ ಮುನ್ನ ಒಂದು ಐಸ್‌ಕ್ಯೂಬ್ ತೆಗೆದುಕೊಂಡು, ಅದಕ್ಕೆ ತೆಳ್ಳಗಿನ ಕಾಟನ್ ಬಟ್ಟೆ ಸುತ್ತಿ. ನಿಮ್ಮ ಮುಖದ ಮೇಲೆ ಮಸಾಜ್ ಮಾಡಿ. ಇದನ್ನ ಪ್ರತೀ ದಿನ ಮಾಡಿದ್ದಲ್ಲಿ, ನಿಮ್ಮ ಮುಖ ಸ್ಮೂತ್ ಆಗಿರುತ್ತದೆ.

3. ನಿಮ್ಮ ಮುಖ ಡ್ರೈ ಆಗಿರದಂತೆ ನೋಡಿಕೊಳ್ಳಿ. ಅದೇ ರೀತಿ ಆಯ್ಲಿ ಫೇಸ್ ಕೂಡ ಇರಬಾರದು. ನಿಮ್ಮ ಸ್ಕಿನ್ ಹೊಳಪಿನಿಂದ ಕೂಡಿರಬೇಕು ಅಂದ್ರೆ, ಮೈಶ್ಚರೈಸ್ ಹಚ್ಚಬೇಕು. ನೀವು ಬಳಸುವ ಮೈಶ್ಚರೈಸರ್, ನಿಮ್ಮ ಮುಖಕ್ಕೆ ಹೊಂದುವತಿರಬೇಕು. ನಿಮ್ಮ ಮುಖಕ್ಕೆ ಹೊಂದದ ಮೈಶ್ಚರೈಸರ್ ಹಚ್ಚಿದ್ರೆ, ಪ್ರಯೋಜನವಿಲ್ಲ. ನಿಮ್ಮ ಮುಖ ಆಯ್ಲಿ ಇದ್ದರೆ, ಜೆಲ್ ಬೇಸ್ಡ್ ಮೈಶ್ಚರೈಸಿಂಗ್ ಕ್ರೀಮ್ ತೆಗೆದುಕೊಳ್ಳಿ. ಡ್ರೈ ಇದ್ದಲ್ಲಿ, ಕ್ರೀಮಿ ಮೈಶ್ಚರೈಸಿಂಗ್ ಕ್ರೀಮ್ ತೆಗೆದುಕೊಳ್ಳಿ.

4. ನೀರು ಕುಡಿಯೋದು ಎಷ್ಟು ಮುಖ್ಯ ಅನ್ನೋ ಬಗ್ಗೆ ನಾವು ನಿಮಗೆ ಸುಮಾರು ಸಾರಿ ಹೇಳಿದ್ದೇವೆ. ಅದೇ ರೀತಿ ನಿಮ್ಮ ಮುಖದಲ್ಲಿ ನ್ಯಾತುರಲ್ ಗ್ಲೋ ಬರಬೇಕು ಅಂದ್ರೆ ನೀವು ಹೆಚ್ಚೆಚ್ಚು ನೀರು ಕುಡಿಯಬೇಕು. ಹಸಿ ತರಕಾರಿ, ಹಸಿರು ಕಾಳು, ಹಣ್ಣು ಹಂಪಲನ್ನ ಹೆಚ್ಚಾಗಿ ಸೇವಿಸಬೇಕು. ನೀವು ಜಂಕ್ ಫುಡ್ ತಿಂದು, ಗ್ಲೋ ಬರಬೇಕು ಅಂದ್ರೆ, ಅಧು ಎಂದಿಗೂ ಸಾಧ್ಯವಿಲ್ಲ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯೋದು, ದಿ ಬೆಸ್ಟ್ ಟಿಪ್ಸ್ ಆಗಿದೆ.

ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss