ಮೊದಲ ಭಾಗದಲ್ಲಿ ನಾವು ಮೇಕಪ್ ಇಲ್ಲದೇ, ಚೆಂದಗಾಣಿಸಲು ಇರುವ ಟಿಪ್ಸ್ನಲ್ಲಿ 4 ಟಿಪ್ಸ್ ಬಗ್ಗೆ ವಿವರಿಸಿದ್ದೇವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.
5. ಇದಕ್ಕೂ ಮುಂಚೆ ನಾವು ನೀರು ಕುಡಿಯುವ ಬಗ್ಗೆ, ಉತ್ತಮ ಆಹಾರ ಸೇವಿಸುವ ಬಗ್ಗೆ ವಿವರಣೆ ನೀಡಿದ್ದೆವು. ಇದರೊಂದಿಗೆ ಉತ್ತಮ ನಿದ್ದೆಯೂ ತುಂಬಾ ಮುಖ್ಯ. ಓರ್ವ ಮನುಷ್ಯನಿಗೆ 8 ಗಂಟೆ ನಿದ್ದೆ ತುಂಬಾ ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತುಂಟು. ಆದ್ರೆ ನೀವು 6 ಗಂಟೆಯಾದ್ರೂ ಸರಿಯಾಗಿ ನಿದ್ರಿಸಿದರೂ ಸಾಕು. ನಿಮ್ಮ ಸ್ಕಿನ್ ಉತ್ತಮವಾಗಿರುತ್ತದೆ. ನೀವು ಮಲಗುವ ಹಾಸಿಗೆ, ದಿಂಬು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.
ಮೇಕಪ್ ಮಾಡಿಕೊಳ್ಳದೇ, ಚೆಂದಗಾಣಿಸಲು ಟಿಪ್ಸ್- ಭಾಗ 1
6. ನಿಮ್ಮ ಮುಖ ಸೂಪರ್ ಆಗಿ ಕಾಣಬೇಕು ಅಂದ್ರೆ, ಎಲ್ಲಕ್ಕಿಂತ ಮೊದಲು ನೀವು ಗಮನ ಕೊಡಬೇಕಾಗಿದ್ದು, ನಿಮ್ಮ ಕಣ್ಣಿನ ಬಗ್ಗೆ. ನಿಮ್ಮ ಐ ಲ್ಯಾಶಸ್ ಚೆನ್ನಾಗಿದ್ದರೆ, ನಿಮ್ಮ ಅಂದ ತನ್ನಿಂದ ತಾನೇ ಹೆಚ್ಚುತ್ತದೆ. ಹಾಗಾಗಿ ಐ ಲ್ಯಾಶಸ್ ಬೆಳೆಸುವ ಎಣ್ಣೆಯನ್ನು ಬಳಸಿ. ಕಣ್ಣಿಗೆ ನೀಟ್ ಆಗಿ, ಲೈಟ್ ಆಗಿ ಕಾಡಿಗೆ ಹಚ್ಚಿದರೆ, ಅಂದ ಹೆಚ್ಚುತ್ತದೆ.
7. ನಿಮ್ಮ ನಗು ನೊಡುವವರು ಮೊದಲು ಗಮನಿಸೋದೆ ನಿಮ್ಮ ಹಲ್ಲನ್ನು. ನಿಮ್ಮ ಹಲ್ಲು ನ್ಯಾಚುರಲ್ ಆಗಿ ಚೆನ್ನಾಗಿದ್ದರೆ, ಓಕೆ. ಇಲ್ಲವಾದಲ್ಲಿ ನೀವು ಅದನ್ನು ವೈದ್ಯರ ಬಳಿ ಹೋಗಿ ಸರಿ ಮಾಡಿಸಿಕೊಳ್ಳಿ. ನ್ಯಾಚುರಲ್ ಆಗಿ ನಿಮ್ಮ ಹಲ್ಲಿನ ಹೊಳಪು ಹೆಚ್ಚಬೇಕಂದ್ರೆ. ದಿನಕ್ಕೆ ಎರಡು ಬಾರಿ ಬ್ರಶ್ ಮಾಡಿ. ವಾರಕ್ಕೊಮ್ಮೆ ನಿಂಬೆ ಹಣ್ಣಿಗೆ ಉಪ್ಪು ಹಚ್ಚಿ, ಹಲ್ಲುಜ್ಜಿ.
ಈ 3 ಗುಣಗಳಿಂದಲೇ ಕೆಲವರು ಯಶಸ್ವಿಯಾಗದೇ ಇರೋದು..
8. ನಿಮ್ಮ ಐಬ್ರೋ ಉತ್ತಮವಾಗಿರುವುದು ತುಂಬಾ ಮುಖ್ಯ. ನೀವು ಐ ಬ್ರೋವಿನ ಕೂದಲು ಹೆಚ್ಚಿಸಲು, ಮಾರುಕಟ್ಟೆಯಲ್ಲಿ ಸಿಗುವ ಜೆಲ್ ಬಳಸಬೇಡಿ. ಬದಲಾಗಿ ಹರಳೆಣ್ಣೆ ಹಚ್ಚಿ. ಚೆನ್ನಾಗಿ ಮಸಾಜ್ ಮಾಡಿ. ಕೂದಲು ಚೆನ್ನಾಗಿ ಬೆಳೆಯುತ್ತದೆ. ನಂತರ ಐಬ್ರೋ ಮಾಡಿಸಿದರೆ, ಲುಕ್ ಕಾಣಿಸುತ್ತದೆ. ನಿಮ್ಮ ತಲೆಗೂದಲಿನ ಆರೋಗ್ಯದ ಕಡೆ ಗಮನ ಕೊಡಿ. ವಾರಕ್ಕೆರಡು ಬಾರಿಯಾದ್ರೂ, ಕೂದಲನ್ನು ಚೆನ್ನಾಗಿ ಮಸಾಜ್ ಮಾಡಿ, ಕೆಮಿಕಲ್ ಮುಕ್ತವಾಗಿರುವ ಶ್ಯಾಂಪೂವಿನಿಂದ ತಲೆಕೂದಲು ತೊಳೆಯಿರಿ. ಹೇರ್ ಡ್ರೈ, ಸ್ಟ್ರೇಟ್ನರ್ ಹೆಚ್ಚು ಬಳಸಬೇಡಿ. ಪದೇ ಪದೇ ಸ್ಟ್ರೇಟ್ನಿಂಗ್, ಕೆರೆಟಿನ್ ಟ್ರೀಟ್ಮೆಂಟ್ ಮಾಡದಿದ್ರೆ, ಉತ್ತಮ.