ನವದೆಹಲಿ: ಇನ್ನು ಮುಂದೆ ರೈಲುಗಳಲ್ಲಿ ಪ್ರಯಾಣ ಮಾಡೋವಾಗ ಬಾಟಲಿ ನೀರುಗಳನ್ನು ಕೊಂಡುಕೊಳ್ಳೋ ಮುನ್ನ ಎಚ್ಚರದಿಂದಿರಿ. ಯಾಕಂದ್ರೆ ದೇಶಾದ್ಯಂತ ರೈಲುಗಳಲ್ಲಿ ನಕಲಿ ನೀರು ಬಾಟಲಿಗಳ ಮಾರಾಟ ಜಾಲ ಬೆಳಕಿಗೆ ಬಂದಿದ್ದು, ಸುಮಾರು 800 ಮಂದಿಯನ್ನು ಬಂಧಿಸಲಾಗಿದೆ.
ರೈಲುಗಳಲ್ಲಿ ನೀರು ಬಾಟಲಿಗಳಿಗೆ ನಕಲಿ ಲೇಬಲ್ ಅಂಟಿಸಿ ಮಾರಾಟ ಮಾಡಲಾಗುತ್ತಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ ರೈಲ್ವೇ ಇಲಾಖೆ ಈ ಜಾಲದಲ್ಲಿ ತೊಡಗಿದ್ದು 800 ಮಂದಿಯನ್ನು ಬಂಧಿಸಿದೆ. ಈ ಕುರಿತು ಮಾಹಿತಿ ನೀಡಿದ ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್, ದೇಶದ 300ಕ್ಕೂ ಹೆಚ್ಚು ಪ್ರದೇಶಗಳಲ್ಲಿ ನಕಲಿ ನೀರು ಮಾರಾಟ ಜಾಲ ಪತ್ತೆಯಾಗಿದ್ದು, ಕ್ಯಾಂಟೀನ್ ಮ್ಯಾನೇಜರ್ ಗಳೂ ಸೇರಿದಂತೆ ಒಟ್ಟು 800 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ 48ಸಾವಿರಕ್ಕೂ ಅಧಿಕ ನಕಲಿ ನೀರಿನ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಅಂತ ಮಾಹಿತಿ ನೀಡಿದ್ರು.
ಇನ್ನು ರೈಲ್ವೇ ಇಲಾಖೆ ತನ್ನ ಪ್ರಥಮ ದರ್ಜೆ ರೈಲುಗಳಾದ ದುರಂತೋ, ರಾಜಧಾನಿ ಎಕ್ಸ್ ಪ್ರೆಸ್ ಸೇರಿದಂತೆ ಮತ್ತಿತರ ರೈಲುಗಳಲ್ಲಿ ತಾನೇ ಉಚಿತವಾಗಿ ನೀರು ಬಾಟಲಿಗಳನ್ನು ಒದಗಿಸುತ್ತಿದೆ. ಆದ್ರೆ ಇತರೆಲ್ಲಾ ರೈಲುಗಳಲ್ಲಿ ನಕಲಿ ನೀರು ಮಾರಾಟ ಮಾಡುತ್ತಿರೋದು ಬೆಳಕಿಗೆ ಬಂದಿದ್ದು ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದ ರೈಲ್ವೇ ಇಲಾಖೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಅಂತ ಇದೇ ವೇಳೆ ಗೋಯಲ್ ಸ್ಪಷ್ಟನೆ ನೀಡಿದ್ರು.
ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ವಿದ್ಯುತ್ ಚಾಲಿತ ಕಾರು..! ಮಿಸ್ ಮಾಡದೇ ಈ ವಿಡಿಯೋ ನೋಡಿ