Horoscope: ಅಸೂಯೆ ಅನ್ನೋದು ಜೀವನದಲ್ಲಿ ನೆಮ್ಮದಿಯನ್ನೇ ಕಸಿಯುವ ಗುಣ. ಅದು ಅಸೂಯೆ ಪಡುವವರ ನೆಮ್ಮದಿಯಷ್ಟೇ ಅಲ್ಲದೇ, ಅವರೊಂದಿಗೆ ಜೀವಿಸುವ ಪ್ರತಿಯೊಬ್ಬರ ನೆಮ್ಮದಿ ನಾಶ ಮಾಡುತ್ತದೆ. ಒಂದು ಮನೆಯಲ್ಲಿ ಎಲ್ಲದಕ್ಕೂ ಅಸೂಯೆ ಪಡೆದು, ಎಲ್ಲರ ಖುಷಿ ನೋಡಿ ಹೊಟ್ಟೆ ಉರಿದುಕೊಳ್ಳುವ ಜನ ಇದ್ದರೆ, ಆ ಮನೆಯಲ್ಲಿ ಸಂಭ್ರಮ ಅನ್ನೋದು ಅಪರೂಪ ಅಂತಾಗುತ್ತದೆ. ಅಂಥ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ. (ಇಲ್ಲಿ ಹೇಳಿರುವ ಹಾಗೆ, ಈ ರಾಶಿಯ ಎಲ್ಲರಿಗೂ ಅದೇ ಗುಣ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವೊಮ್ಮೆ ಗಣಗಳು ಕೂಡ ಇಲ್ಲಿ ಪ್ರಭಾವ ಬೀರುತ್ತದೆ.)
ಮೇಷ: ಮೇಷ ರಾಶಿಯವರು ತಮ್ಮ ಗುರಿ ತಲುಪಲು, ಯಾವುದೇ ದಾರಿ ಅಡ್ಡ ಬಂದರೂ ಅದನ್ನು ದಾಟಿ ಹೋಗುತ್ತಾರೆ. ಎಂಥ ಕಷ್ಟವನ್ನು ಬೇಕಾದರೂ ಸಹಿಸಿಕೊಂಡು ಮುನ್ನುಗ್ಗುತ್ತಾರೆ. ಇವರ ಈ ಗುಣದಿಂದ, ಬೇರೊಬ್ಬರ ಯಶಸ್ಸನ್ನು ಅರಗಿಸಿಕೊಳ್ಳಲು ಇವರಿಗೆ ಕಷ್ಟಸಾಧ್ಯ. ಸ್ವಂತದವರೇ ಇವರಿಗಿಂತ ಮುನ್ನುಗ್ಗಿದರೆ, ಅವರ ಮೇಲೆ ಅಸೂಯೆ ಪಡುವ ಗುಣ ಇವರದ್ದು.
ವೃಷಭ: ವೃಷಭ ರಾಶಿಯ ಕೆಲವರಲ್ಲಿ ಅಸೂಯೆ ಗುಣ ಕಂಡು ಬರುತ್ತದೆ. ಆದರೆ ತೋರಿಸಿಕೊಳ್ಳುವುದು ಕಡಿಮೆ. ಏಕೆಂದರೆ ಇವರಲ್ಲಿ ಹೆಚ್ಚು ತಾಳ್ಮೆಯ ಗುಣವಿರುತ್ತದೆ. ಹಾಾಗಾಗಿ ಆ ತಾಳ್ಮೆಯೇ ಅಸೂಯೆ ತೋರಿಸದ ಹಾಗೆ ತಡೆಯುತ್ತದೆ.
ಸಿಂಹ: ಸಿಂಹ ರಾಶಿಯವರು ಸದಾ ಎಲ್ಲದರಲ್ಲೂ ತಾವೇ ಮುಂದಿರಬೇಕು ಎಂದು ಬಯಸುವವರು. ಅಲ್ಲದೇ, ಎಲ್ಲರೂ ತಮ್ಮ ಬಗ್ಗೆಯೇ ಮೆಚ್ಚುಗೆ ಸೂಚಿಸಬೇಕು. ತಮ್ಮನ್ನೇ ಹೊಗಳಬೇಕು. ತಾವು ಮೊದಲನೇಯ ಸ್ಥಾನದಲ್ಲಿ ಇರಬೇಕು ಎಂದು ಬಯಸುವವರು. ಹಾಗಾಗಿ ಆಫೀಸಿನಲ್ಲಿ, ಮನೆಯಲ್ಲಿ ಸಂಬಂಧಿಕರಲ್ಲಿ ಎಲ್ಲೇ ಆಗಲಿ, ಇವರ ಎದುರು ಯಾರನ್ನಾದರೂ ಕೊಂಡಾಡಿದರೆ, ಇವರಿಗೆ ಕೋಪ ಬರುತ್ತದೆ. ಅಸೂಯೆ ಹುಟ್ಟುತ್ತದೆ.
ಕನ್ಯಾ: ಕನ್ಯಾ ರಾಶಿಯವರು ಸದಾ ತಮ್ಮನ್ನು ತಾವು, ಅತ್ಯುತ್ತಮರು ಅಂತಲೇ ಭಾವಿಸಿರುತ್ತಾರೆ. ಅವರಿಗೆ ಅವರಿಗಿಂತ ಬುದ್ಧಿವಂತರನ್ನು ಕಂಡರೆ ಆಗುವುದಿಲ್ಲ. ಜೊತೆಗೆ ಅವರ ಎದುರು ಒಬ್ಬರು ಇನ್ನೊಬ್ಬರನ್ನು ಹೊಗಳಬಾರದು. ಒಂದು ವೇಳೆ ಹಾಗೆ ಮಾಡಿದ್ದಲ್ಲಿ, ಹೊಗಳಿಸಿಕೊಂಡವರನ್ನು ಹೇಗಾದರೂ ಮಾಡಿ, ಅಗೌರವಿಸಬೇಕು ಎಂದು ಅವರು ಪ್ರಯತ್ನಿಸುತ್ತಾರೆ.