Political News: ಪ್ರಧಾನಿ ಮೋದಿ ದೆಹಲಿಯ ಸಿಬಿಸಿಐ ಕೇಂದ್ರದ ಆವರಣದಲ್ಲಿ ಕ್ಯಾಥೋಲಿಕ್ ಬಿಷಪ್ಸ್ ಇಂಡಿಯಾ ಆಯೋಜಿಸಿದ್ದ ಕ್ರಿಸ್ಮಸ್ ಆಚರಣೆಯಲ್ಲಿ ಪಾಲ್ಗೊಂಡರು.

ನಾಳೆ ಕ್ರಿಸ್ಮಸ್ ಹಬ್ಬವಿದ್ದು, ಈಗಾಗಲೇ ದೇಶಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪ್ರಧಾನಿ ಮೋದಿ ಕೂಡ ಪ್ರಪ್ರಥಮ ಬಾರಿಗೆ ಕ್ರಿಸ್ಮಸ್ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.

ಭಾರತದ ಪ್ರಧಾನಿಯೊಬ್ಬರು ಈ ರೀತಿ ಕ್ರಿಸ್ಮಸ್ ಸಂಭ್ರಮದಲ್ಲಿ ಭಾಗಿಯಾಗಿದ್ದು ಇದೇ ಮೊದಲು ಎಂದು ಕ್ಯಾಥೋಲಿಕ್ ಚರ್ಚ್ನ ಪ್ರಧಾನ ಕಚೇರಿ ತಿಳಿಸಿದೆ.









