Web News: ಖ್ಯಾತ ಯೂಟ್ಯೂಬರ್ ಆಗಿರುವ ದತ್ತಾ ಅವರ ಸಂದರ್ಶನವನ್ನು ಕರ್ನಾಟಕ ಟಿವಿಯಲ್ಲಿ ಮಾಡಲಾಗಿದ್ದು, ಅವರ ಯೂಟ್ಯೂಬ್ ಜರ್ನಿ ಹೇಗಿತ್ತು ಅಂತಾ ವಿವರಿಸಿದ್ದಾರೆ.
ಇವರ ಯೂಟ್ಯೂಬ್‌ನಲ್ಲಿ ಇವರು ಪೇಪರ್‌ನಿಂದ ಕಾರ್, ಪ್ಲೇನ್ ಮಾಡೋದು ಹೇಗೆ ಅನ್ನೋಂದ್ರಿಂದ ಹಿಡಿದು ಇನ್ನೂ ಹಲವು ವಿಷಯಗಳ ಬಗ್ಗೆ ತಿಳಿಸಿದ್ದಾರೆ. ಅಲ್ಲದೇ ಇವರದ್ದೊಂದು ಕಾರನ್ನು ಯೂಟ್ಯೂಬ್ ಕೆಲಸಕ್ಕಂತಲೇ ಬಳಸುತ್ತಿದ್ದಾರೆ. ಕೋಟಿ ಕೋಟಿ ಒಡೆಯನಾಗಿರುವ ದತ್ತಾ, ಕಷ್ಟವೇ ನೋಡಿಲ್ಲ ಅಂತೇನೂ ಇಲ್ಲ.
ಒಂದು ಕಾಲದಲ್ಲಿ 10 ಸಾವಿರಕ್ಕೆ ಕೆಲಸ ಮಾಡುತ್ತಿದ್ದವರು ಇದೀಗ ಕೋಟಿ ರೂಪಾಯಿ ಒಡೆಯ. ಕೋಟಿ ಗಳಿಕೆಯಾದ ಮೇಲೂ ಲಕ್ಷ ಲಕ್ಷ ರೂಪಾಯಿ ಲಾಸ್ ಕೂಡ ಮಾಡಿಕೊಂಡಿದ್ದಾರೆ. ಆದರೆ ಹಿಂಜರಿಯದೇ, ಮತ್ತೆ ಕೆಲಸ ಮುಂದುವರಿಸಿ, ಇದೀಗ ಮತ್ತೆ ಕೋಟಿ ಕೋಟಿ ಸಂಪಾದಿಸಿದ್ದಾರೆ.
ಸ್ಟಾಕ್ ಮಾರ್ಕೇಟ್‌ನಲ್ಲಿ ದುಡ್ಡು ಹಾಕಿ ಬರೀ ಹದಿನೈದೇ ದಿನದಲ್ಲಿ 30 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಟೋಟಲ್ ಆಗಿ 60 ಲಕ್ಷಕ್ಕೂ ಹೆಚ್ಚು ಹಣವನ್ನು ದತ್ತಾ ಅವರು ಕಳೆದುಕೊಂಡಿದ್ದರು. ಲಾಕ್‌ಡೌನ್ ಸಮಯದಲ್ಲಿ ಸ್ಟಾಕ್ ಮಾರ್ಕೇಟ್‌ನಲ್ಲಿ ಹಣ ಹಾಕಿ, ಲಾಸ್ ಮಾಡಿಕೊಂಡಿದ್ದ ದತ್ತಾ ಅವರು, ಕೆಲ ದಿನಗಳ ಬಳಿಕ, ಸ್ಟಾಕ್ ಮಾರ್ಕೇಟ್ ಕವರ್ ಆದ ಬಳಿಕ ಅದರಿಂದ ಎಕ್ಸಿಟ್ ಆಗಿಬಿಟ್ಟರು. ಹೀಗೆ ಎಕ್ಸಿಟ್ ಆಗಿ 1 ಗಂಟೆ ಬಳಿಕ ಲಾಕ್ಡೌನ್ ಓಪನ್ ಅಂತಾ ಘೋಷಣೆ ಮಾಡಿಬಿಟ್ಟರು. ಆಗ ನಾನು ತಾಳ್ಮೆಯಿಂದ ಕಾದಿದ್ದರೆ, ಈಗ ನಾನು ಸ್ಟಾಕ್ ಮಾರ್ಕೇಟ್‌ನಿಂದ 2 ಕೋಟಿ ರೂಪಾಯಿ ಲಾಭ ಮಾಡಿರುತ್ತಿದೆ ಎನ್ನುತ್ತಾರೆ ದತ್ತಾ ಅವರು. ಈ ಸಂಪೂರ್ಣ ಸಂದರ್ಶನ ನೋಡಲು, ಈ ವೀಡಿಯೋ ಕ್ಲಿಕ್ ಮಾಡಿ.