OILY SKIN ಸಮಸ್ಯೆ! ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತೆ!

Health Tips: ಕೆಲವರ ಮುಖ ಎಣ್ಣೆಮಯವಾಗಿರುತ್ತದೆ. ಮುಖಕ್ಕೆ ಎಣ್ಣೆ ಹಚ್ಚದಿದ್ದರೂ, ಎಣ್ಣೆ ಹಚ್ಚಿದಂತೆ ಕಾಣುತ್ತಿರುತ್ತದೆ. ಅಂಥವರ ತ್ವಚೆಯನ್ನು ಆಯ್ಲಿ ಸ್ಕಿನ್ ಎಂದು ಪರಿಗಣಿಸಲಾಗುತ್ತದೆ. ಹಾಗಾದ್ರೆ ಈ ಎಣ್ಣೆ ತ್ವಚೆ ಬರಲು ಕಾರಣವೇನು..? ಇದಕ್ಕೆ ಪರಿಹಾರವೇನು ಎಂದು ವೈದ್ಯರೇ ಹೇಳಿದ್ದಾರೆ ನೋಡಿ.

ಸಕ್ಕರೆ ಅಂಶವಿರುವ, ಮೈದಾ ಬಳಸಿರುವ, ಎಣ್ಣೆ ಪದಾರ್ಥಗಳ ಸೇವನೆ ಯಾರು ಮಾಡುತ್ತಾರೋ, ಅಂಥವರ ಸ್ಕಿನ್ ಆಯ್ಲಿಯಾಗಿರುತ್ತದೆ. ಜಂಕ್ ಫುಡ್, ಬೇಕರಿ ತಿಂಡಿಗಳ ಸೇವನೆ ಯಾರು ಮಾಡುತ್ತಾರೋ, ನೀರಿನ ಸೇವನೆ ಯಾರು ಕಡಿಮೆ ಮಾಡುತ್ತಾರೋ ಅಂಥವರ ಸ್ಕಿನ್ ಆಯ್ಲಿಯಾಗಿರುತ್ತದೆ. ನೀರಿನ ಅಂಶವಿರುವ ತರಕಾರಿ, ಹಣ್ಣಿನ ಸೇವನೆ ಹೆಚ್ಚು ಮಾಡದೇ, ಅನಾರೋಗ್ಯಕರ ಆಹಾರ ಸೇವನೆ ಮಾಡುವವರ ತ್ವಚೆ ಎಣ್ಣೆಭರಿತವಾಗಿರುತ್ತದೆ.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನೀವು ಡೇಲಿ ರೂಟಿನ್ ಫಾಲೋ ಮಾಡಬೇಕು ಎನ್ನುತ್ತಾರೆ ವೈದ್ಯೆ ಡಾ.ದೀಪಿಕಾ. ದಿನಕ್ಕೆ ಎರಡರಿಂದ ಮೂರು ಬಾರಿ ಚೆನ್ನಾಗಿ ಮುಖ ತೊಳೆಯಬೇಕು. ವೈದ್ಯರು ಸೂಚಿಸಿದ ಫೇಸ್‌ವಾಶ್ ಬಳಸಬೇಕು. ಮಾಯಿಶ್ಚರೈಸರ್ ಕೂಡ ಬಳಸಬೇಕಾಗುತ್ತದೆ. ಜೆಲ್ ಬೇಸ್ಡ್ ಸನ್‌ಸ್ಕ್ರೀನ್ ಸೇರಿ ವೈಜ್ಯರು ಸೂಚಿಸಿದ ಕ್ರೀಮ್ ಬಳಸಿ, ನಿಮ್ಮ ಆಯ್ಲಿ ಸ್ಕಿನ್ ಸರಿ ಮಾಡಿಕೊಳ್ಳಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author