Health Tips: ಸಕ್ಕರೆ ಖಾಯಿಲೆ ಅನ್ನೋದು ಇತ್ತೀಚಿನ ದಿನಗಳಲ್ಲಿ ಇರುವ ಕಾಮನ್ ಖಾಯಿಲೆ. ಆದರೆ ಇದು ತರುವ ಫಜೀತಿ ಕಾಮನ್ ಅಲ್ಲವೇ ಅಲ್ಲ. ಇದು ಮನುಷ್ಯನ ಜೀವವನ್ನು ಕೆಲವೇ ವರ್ಷಗಳಲ್ಲಿ ಮುಗಿಸಿಬಿಡಬಹುದಾದ ಖಾಯಿಲೆ. ಹಾಗಾಗಿ ಶುಗರ್ ಇದೆ ಅಂತಾ ಗೊತ್ತಾದಾಗ ಎಚ್ಚೆತ್ತುಕೊಳ್ಳುವುದು ಉತ್ತಮ. ಅಲ್ಲದೇ, ಶುಗರ್ ಬರದ ಹಾಗೆ ನೋಡಿಕೊಳ್ಳುವುದು ಇನ್ನೂ ಮುಖ್ಯ. ಇನ್ನು ಶುಗರ್ ಗೂ ಸೆಕ್ಸ್ ಪ್ರಾಬ್ಲಮ್‌ಗೂ ಇರುವ ಸಂಬಂಧವೇನು..? ಶುಗರ್ ಇದ್ದರೆ ಲೈಂಗಿಕ ಕ್ರಿಯೆಯಲ್ಲಿ ಏನು ಸಮಸ್ಯೆಯಾಗುತ್ತದೆ ಎಂದು ಕುಟುಂಬ ವೈದ್ಯರಾದ ಡಾ.ಪ್ರಕಾಶ್ ರಾವ್ ಹೇಳಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಸಕ್ಕರೆ ಖಾಯಿಲೆ ಒಮ್ಮೆ ಬಂತೆಂದರೆ, ಮತ್ತೆ ಅದು ಹೋಗುವುದಿಲ್ಲ. ಆದರೆ ಅದನ್ನು ನಾವು ಕಂಟ್ರೋಲಿನಲ್ಲಿಡಬಹುದು. ಆಹಾರ ಪದ್ಧತಿ, ವ್ಯಾಯಾಮ, ನಿದ್ರೆ, ಟೆನ್ಶನ್ ಫ್ರೀಯಾಗಿ ಇರುವ ಮೂಲಕ ನಾವು ಸಕ್ಕರೆ ಖಾಯಿಲೆಯನ್ನು ಕಂಟ್ರೋಲಿನಲ್ಲಿಡಬಹುದು. ಇನ್ನು ಶುಗರ್ ಪ್ರಾಬ್ಲ್ಂ ಹೆಚ್ಚಾದಂತೆ, ನಿಮಿರುವಿಕೆ ಕಡಿಮೆಯಾಗುತ್ತದೆ. ಕಾಮಾಸಕ್ತಿ ಕಡಿಮೆಯಾಗುತ್ತದೆ. ಅಥವಾ ಪುರುಷತ್ವ ಸಮಸ್ಯೆ ಉದ್ಭವಿಸುತ್ತದೆ.
ಇಂಥ ಸಮಸ್ಯೆ ಉದ್ಭವಿಸಬಾರದು ಅಂದ್ರೆ ಶುಗರ್ ಕಂಟ್ರೋಲಿನಲ್ಲಿಡಬೇಕು. ಸರಿಯಾದ ಆಹಾರ ಸೇವನೆ, ಸಮಯಕ್ಕೆ ಸರಿಯಾಗಿ ಆಹಾರ ಸೇವನೆ, ಔಷಧಿ ಸೇವನೆ ಮಾಡಬೇಕು. ಸಿಹಿ ತಿಂಡಿ ತ್ಯಜಿಸಿದರೂ ಉತ್ತಮ. ಅದರಲ್ಲೂ ಸಕ್ಕರೆಯಿಂದ ದೂರವಿರಬೇಕು. ಹೆಚ್ಚು ಟೆನ್ಶನ್ ತೆಗೆದುಕೊಳ್ಳಬಾರದು. ದೇಹದ ತೂಕ ಹೆಚ್ಚದಂತೆ ನೋಡಿಕೊಳ್ಳಬೇಕು. ಯೋಗ, ವ್ಯಾಯಾಮ ಮಾಡುವ ಮೂಲಕ ಫಿಟ್ ಆಗಿರಬೇಕು. ಇಷ್ಟೆಲ್ಲ ಮಾಡಿದಾಗ, ಲೈಂಗಿಕ ಸಮಸ್ಯೆಯಿಂದಲೂ ಹೊರಬರಬಹುದು ಅಂತಾರೆ ವೈದ್ಯರು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.