Health Tips: ಬೇಸಿಗೆ ಶುರುವಾಗಿದೆ. ಬಿರು ಬಿಸಿಲಿಗೆ ಮನೆಯಲ್ಲೇ ಇದ್ದರೂ, ಸೆಕೆಯಲ್ಲಿ ಮಿಂದೇಳುವ ಪರಿಸ್ಥಿತಿ. ಸಮ್ಮರ್ ಎಂದು ಎಳನೀರು, ಶರ್ಬತ್, ಕಲ್ಲಂಗಡಿ, ಸೌತೇಕಾಯಿ, ಐಸ್‌ಕ್ರೀಮ್, ಜ್ಯೂಸ್ ಹೀಗೆ ತಂಪು ನೀಡುವ ಆಹಾರ, ಪೇಯಗಳಿಗೆ ನಾವು ಮೊರೆ ಹೋಗುತ್ತೇವೆ. ಈ ಮಧ್ಯೆ ನಮ್ಮ ಆರೋಗ್ಯವನ್ನು ಸಹ ನಾವು ಕಾಪಾಡಿಕ“ಳ್ಳಬೇಕಿದೆ. ಹಾಗಾಗಿ ವೈದ್ಯರಾಗಿರುವ ಡಾ.ಆಂಜೀನಪ್ಪ ಅವರು ನಾವು ನಮ್ಮ ಆರೋಗ್ಯವನ್ನು, ಮಕ್ಕಳ ಆರೋಗ್ಯವನ್ನು ಯಾವ ರೀತಿ ನೋಡಿಕ“ಳ್ಳಬೇಕು ಎಂಬ ಬಗ್ಗೆ ವಿವರಿಸಿದ್ದಾರೆ.
ಬೇಸಿಗೆಯ ಬಿರು ಬಿಸಿಲಿನಿಂದ ಮಕ್ಕಳನ್ನು ರಕ್ಷಿಸಲು ಮಕ್ಕಳಿಗೆ ಕಾಟನ್ ವಸ್ತ್ರಗಳನ್ನೇ ಹಾಕಿ ಅಂತಾರೆ ವೈದ್ಯರು. ಪ್ರತಿದಿನ ಉಗುರು ಬೆಚ್ಚಗಿನ ನೀರಿನಲ್ಲಿ ದಿನಕ್ಕೆ 2 ಬಾರಿ ಸ್ನಾನ ಮಾಡಿಸಬೇಕು. ಮಕ್ಕಳನ್ನು ಹೆಚ್ಚು ಬಿಸಿಲಿಗೆ ಕಳುಹಿಸಬೇಡಿ. 11 ಗಂಟೆಯಿಂದ 4 ಗಂಟೆಯವರೆಗೆ ಮಕ್ಕಳನ್ನು ಆಚೆ ಬಿಡಲೇಬೇಡಿ.
ಅಲ್ಲದೇ, ಮಕ್ಕಳಿಗೆ ಎಂದಿಗೂ ಬೀದಿ ಬದಿ ತಿಂಡಿ ತಿನ್ನಿಸಬೇಡಿ. ನೀವು ಆರೋಗ್ಯಗರ ಆಹಾರವಾಗಲಿ, ಐಸ್‌ಕ್ರೀಮ್ ಆಗಲಿ ಮಕ್ಕಳಿಗೆ ನೀಡಿದರೆ, ಅದರಿಂದಲೂ ಮಕ್ಕಳಿಗೆ ರೋಗ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಕ್ಕಳಿಗೆ ಆದಷ್ಟು ಮನೆಯ ಆಹಾರ ತಿನ್ನಿಸಿ, ಹಣ್ಣು-ತರಕಾರಿಗಳನ್ನು ತಿನ್ನಿಸಿ.
ಆಚೆ ಸಿಗುವ ಕಟ್ ಮಾಡಿರುವ ಹಣ್ಣಿಗಿಂತ, ಮನೆಗೆ ಹಣ್ಣನ್ನು ತಂದು ಕಟ್ ಮಾಡಿ ತಿನ್ನಿ. ಇನ್ನು ಬೇಸಿಗೆಯಲ್ಲಿ ಜಾತ್ರೆ, ಊರುಹಬ್ಬ ಹೆಚ್ಚಾಗಿರತ್ತೆ. ಅಲ್ಲಿ ಧೂಳು, ನೋಣ ಕೂತಿರುವ ಆಹಾರವನ್ನು ನಾವು ಮಕ್ಕಳಿಗೆ ತಿನ್ನಲು ನೀಡುತ್ತೇವೆ,. ಅಲ್ಲಿ ಬಳಸುವ ಐಸ್ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಅಂತಾರೆ ವೈದ್ಯರು. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




