ದಿಗಂತ್ ಮಂಚಾಲೆ ಅಭಿನಯದ ಹೊಸ ಚಿತ್ರದ ಟೈಟಲ್ ಇದೀಗ ಅನಾವರಣಗೊಂಡಿದೆ. “ರುದ್ರ ಕಾಲ” ಎಂಬ ವಿಭಿನ್ನ ಶೀರ್ಷಿಕೆಯೊಂದಿಗೆ ಬರುತ್ತಿರುವ ಈ ಸಿನಿಮಾ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ.
ಈ ಚಿತ್ರದ ಟೈಟಲ್ ಅನ್ನು ಸಮಂತಾ ರುತ್ ಪ್ರಭು ಬಿಡುಗಡೆ ಮಾಡಿದ್ದು, ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಟೈಟಲ್ ರಿವೀಲ್ ಕಾರ್ಯಕ್ರಮದ ವೇಳೆ ದಿಗಂತ್ ಕೂಡ ಉಪಸ್ಥಿತರಿದ್ದರು.
“ರುದ್ರ ಕಾಲ” ಚಿತ್ರದ ಕಥೆಯನ್ನು ನಿರ್ದೇಶಕ ಗೋಪಿ ದಿಗಂತ್ ಅವರಿಗೆ ಹೇಳಿದಾಗ ತುಂಬಾ ಇಷ್ಟವಾಯಿತು. ಅದಕ್ಕಾಗಿ ತಕ್ಷಣವೇ ಈ ಸಿನಿಮಾ ಮಾಡಲು ಒಪ್ಪಿಕೊಂಡಿದ್ದೇನೆ ಎಂದು ದಿಗಂತ್ ತಿಳಿಸಿದ್ದಾರೆ.
ಈ ಚಿತ್ರವನ್ನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಿಸಲಾಗುತ್ತಿದೆ. ಚಿತ್ರಕ್ಕೆ ಕಥೆಯನ್ನು ರಮೇಶ್ ಬರೆದಿದ್ದು, ಛಾಯಾಗ್ರಹಣವನ್ನು ಕ್ರಿಸ್ಟೋಫರ್ ಜೋಸೆಫ್ ನಿರ್ವಹಿಸುತ್ತಿದ್ದಾರೆ.
ಇನ್ನು ನಿರ್ದೇಶಕ ಗೋಪಿ ಅವರಿಗೆ ಇದು ನಾಲ್ಕನೇ ಚಿತ್ರವಾಗಿದ್ದು, ಈಗಾಗಲೇ ಅವರು ಮೂರು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. “ರುದ್ರ ಕಾಲ” ಚಿತ್ರದ ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ. ಆದರೆ ಟೈಟಲ್ ಹಾಗೂ ಪೋಸ್ಟರ್ ಮೂಲಕವೇ ಚಿತ್ರತಂಡ ಕುತೂಹಲ ಮೂಡಿಸಿದೆ.
ವರದಿ : ಲಾವಣ್ಯ ಅನಿಗೋಳ




