Special Story: ಯೂರೋಪ್ ಪ್ರವಾಸಕ್ಕೆ ಹೋದಾಗ ಇಂಥ ಸ್ಕ್ಯಾಮ್‌ಗಳಿಗೆ ಬಲಿಯಾಗಬೇಡಿ..

Special Story: ಇತ್ತೀಚೆಗೆ ಜನ ಪ್ಯಾಕೇಜ್ ಪ್ರವಾಸ ಎಂದು ಹೆಚ್ಚು ವಿದೇಶಗಳಿಗೆ ಹೋಗುತ್ತಿದ್ದಾರೆ. ಭಾರತದ ಹಲವು ಪ್ರವಾಸಿ ತಾಣಗಳಲ್ಲೂ ಸ್ಕ್ಯಾಮ್ ನಡೆಯುತ್ತದೆ. ಆದರೆ ಇಲ್ಲಿನ ಭಾಷೆ, ಭಾವನೆ ಎಲ್ಲ ಅರ್ಥವಗುವ ಕಾರಣಕ್ಕೆ, ಹಾಗೆ ಸುಲಭವಾಗಿ ಭಾರತೀಯ ಪ್ರವಾಸಿಗರನ್ನೇ ಭಾರತದಲ್ಲಿ ಸ್ಕ್ಯಾಮ್ ಮಾಡಲು ಸಾಧ್ಯವಿಲ್ಲ.

ಆದರೆ ವಿದೇಶಕ್ಕೆ ಹೋದಾಗ, ಅಲ್ಲಿನ ಬಗ್ಗೆ ಹಲವರಿಗೆ ಅರಿವಿರುವುದಿಲ್ಲ. ವಿದೇಶಿಗರೆಲ್ಲ ಫ್ರೆಂಡ್ಲಿ ಅನ್ನೋ ಮನೋಭಾವದಲ್ಲೇ ನಾವಿರುತ್ತೇವೆ. ಆದರೆ ಅಲ್ಲಿಯೂ ಜನ ಸ್ಕ್ಯಾಮ್ ಮಾಡಲು ಮುಂದಾಗುತ್ತಾರೆ ಅನ್ನೋದು ಸತ್ಯ.

ಹಾಗಂತ ವಿದೇಶದ ಎಲ್ಲ ಪ್ರವಾಸಿ ತಾಣಗಳಲ್ಲೂ ಸ್ಕ್ಯಾಮ್ ಆಗುತ್ತದೆ ಅಂತೇನಲ್ಲ. ಆದರೆ ನಾವಿಂದು ವಂಡರರ್ ಡೆನ್ಸಿಟಿ ಅನ್ನೋ ಹೆಸರಿನ ಐಡಿ ಇರುವ ಕಪಲ್ ತಮಗೆ ವಿದೇಶದಲ್ಲಾದ ಕೆಲ ಸ್ಕ್ಯಾಮ್ ಅನುಭವಗಳನ್ನು ನಮ್ಮ ಜತೆ ಹಂಚಿಕ“ಂಡಿದ್ದಾರೆ.

ಇವರು ಕೂಡ ಯೂರೋಪ್ ಪ್ರವಾಸಕ್ಕೆ ಹೋದಾಗ, ಅಲ್ಲಿ ಬಂದ ಓರ್ವ ವ್ಯಕ್ತಿ, ನಿಮ್ಮ ದೇಶ ಯಾವುದು ಎಂದು ಕೇಳಿದ್ದಾನೆ. ತುಂಬಾ ಚೆನ್ನಾಗಿ ಮಾತನಾಡಿಸಿದ್ದಾನೆ. ಫ್ರಿಯಾಗಿ ಗಿಫ್ಟ್ ಕೂಡಾ ನೀಡಿದ್ದಾನೆ. ಪ್ರವಾಸಿಗರಿಗೆ ಫ್ರಿ ಗಿಫ್ಟ್ ಎಂದು ಬ್ರಾಸ್‌ಲೆಟ್ಸ್, ಇಯರ್ ಫೋನ್ ಹೀಗೆ ಗಮನ ಸೆಳೆಯುವ ವಸ್ತುವನ್ನು ನೀಡಿದ್ದಾನೆ.

ಇವರು ಅವರು ನಿಜವಾಗಿಯೂ ಫ್ರಿಯಾಗಿ ನೀಡುತ್ತಿದ್ದಾನೆಂದು ತಿಳಿದು, ಅದನ್ನು ಪಡೆದಿದ್ದಾರೆ. ಆದರೆ ಕೆಲ ಸಮಯದ ಬಳಿಕ ನಿಜ ಬಣ್ಣ ಬಯಲಾಗಿದೆ. ಆತನ ಸೆಲ್‌ಫೋನ್‌ನಲ್ಲಿ ಇದ್ದ ಮಗುವಿನ ಫೋಟೋ ತೋರಿಸಿ, ಇದು ನನ್ನ ಮಗು, ನಾನು ನಿಮಗೆ ನೀಡಿದ ಗಿಫ್ಟ್ ಬದಲಾಗಿ, ನೀವು ನನಗೆ ಏನಾದರೂ ರಿಟರ್ನ್ ಪ್ರೆಸಂಟ್ ನೀಡಿ ಎಂದಿದ್ದಾನೆ. ಇದನ್ನು ನಿರಾಕರಿಸಿದ್ದಕ್ಕೆ ನೀಡಿದ ಗಿಫ್ಟ್ ವಾಪಸ್ ಪಡೆದಿದ್ದಾನೆ.

ಅಲ್ಲದೇ ಬ್ರಾಸ್‌ಲೆಟ್ ನಾನೇ ಹಾಕುತ್ತೇನೆ ಎಂದು ನಿಮ್ಮಿಂದ ನಿಮ್ಮ ಬೆಲೆ ಬಾಳುವ ವಸ್ತು, ಉಂಗುರ, ವಾಚ್ ಏನಾದರೂ ಅವರು ಕದಿಯಬಹುದು. ಹಾಗಾಗಿ ಯೂರೋಪ್‌ಗೆ ಬಂದಾಗ ನಿಮ್ಮ ಪರ್ಸ್, ಸೆಲ್ಫೋನ್, ಚಿನ್ನಾಭರಣ ಎಲ್ಲದರ ಬಗ್ಗೆ ಸರಿಯಾಗಿ ಗಮನವಿರಿಸಿ ಎಂದು ಈ ದಂಪತಿ ಎಚ್ಚರಿಸಿದ್ದಾರೆ.

ವೀಡಿಯೋಗಾಗಿ ಇಲ್ಲಿ ಪ್ರೆಸ್ ಮಾಡಿ.

About The Author