ಇರುವ ಚಿನ್ನವನ್ನೆಲ್ಲಾ ಧರಿಸಿ, ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ ಮಹಿಳೆ: ಮನೆಗೆ ಕನ್ನ ಹಾಕಿದ ಕಳ್ಳರು

Viral News: ಇತ್ತೀಚಿನ ಸೋಶಿಯಲ್ ಮೀಡಿಯಾ ಅಂದ್ರೆ 1 ಮನೆ ಆಗಿಬಿಟ್ಟಿದೆ. ಆ ಮನೆಯಲ್ಲಿ ಅಡುಗೆ ಮಾಡಿದ್ರೆ, ಕ್ಲೀನಿಂಗ್ ಮಾಡಿದ್ರೆ ಓಕೆ. ಆದರೆ ಈಗ ಆ ಮನೆಯಲ್ಲಿ ಜನ ಕ್ಯಾಮೆರಾ ಮುಂದೆ ಬಂದು ಓಪನ್ ಆಗಿ ರೋಮ್ಯಾನ್ಸ್ ಮಾಡುತ್ತಿದ್ದಾರೆ. ಗೆಟ್ ರೆಡಿ ವಿತ್ ಮಿ ಅನ್ನೋ ನೆಪದಲ್ಲಿ ಅಂಗಾಂಗ ಪ್ರದರ್ಶನ ಮಾಡುತ್ತಿದ್ದಾರೆ.  ಇನ್ನೂ ಏನೇನೋ ಮಾಡುತ್ತಿದ್ದಾರೆ. ತಮ್ಮ ಪರ್ಸನಲ್‌ ಲೈಫನ್‌ ಸಾರ್ವಜನಿಕರ ಪ್ರದರ್ಶನಕ್ಕಿರಿಸಿದ್ದಾರೆ.

ಇದೀಗ ಓರ್ವ ಇನ್‌ಫ್ಲ್ಯೂಯೆನ್ಸರ್ ತನ್ನ ಬಳಿ ಇದ್ದ ಚಿನ್ನಗಳನ್ನೆಲ್ಲಾ ಧರಿಸಿ, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾಳೆ. ರಚನಾ ಗುರ್‌ಜರ್ ಎಂಬ ಮಹಿಳೆ ಈ ರೀತಿ ಫೋಟೋ ಹಾಕಿದ್ದು, ಆ ಫೋಟೋ ನೋಡಿ, ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ.

ಸುಮಾರು 8ರಿಂದ 10 ಲಕ್ಷ ರೂಪಾಯಿ ಚಿನ್ನಾಭರಣ, ಬೆಳ್ಳಿ, ನಗದು ಎಲ್ಲವನ್ನೂ ಕಳುವು ಮಾಡಿದ್ದಾರೆ. ಮನೆಗೆ ನುಗ್ಗಿದ ಕಳ್ಳರು ರೂಮ್‌ಗಳನ್ನು ಲಾಕ್ ಮಾಡಿ, ಬುದ್ಧಿವಂತಿಕೆ ಉಪಯೋಗಿಸಿ, ಚಿನ್ನಾಭರಣ ಕಳುವು ಮಾಡಿದ್ದಾರೆನ್ನಲಾಗಿದೆ.

ಇನ್ನು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ತಮ್ಮ ಮುಖ ಕಾಣದಂತೆ ವ್ಯವಸ್ಥೆಯೂ ಮಾಡಿದ್ದರೆನ್ನಲಾಗಿದೆ. ಹಣ, ಚಿನ್ನಾಭರಣದ ಜತೆಗೆ 1 ಬಾಕ್ಸ್ ರೆಡ್‌ಬುಲ್ ಪೆಟ್ಟಿಗೆ ಕೂಡ ಕದ್ದೋಯ್ದಿದ್ದಾರೆ. ಸದ್ಯ ಸ್ಥಳೀಯ ಪೋಲೀಸ್ ಸ್ಟೇಶನ್‌ನಲ್ಲಿ ಈ ಬಗ್ಗೆ ರಚನಾ ದೂರು ದಾಖಲಿಸಿದ್ದಾರೆ. ಪೋಲೀಸರು ದೂರು ದಾಖಲಿಸಿ, ವಿಚಾರಣೆ ನಡೆಸಿದ್ದಾರೆ.

ಪೋಲೀಸರು ಆಗಾಗ ಈ ಬಗ್ಗೆ ಎಲ್ಲರಿಗೂ ಎಚ್ಚರಿಕೆ ನೀಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅತಿಯಾಗಿ ನಿಮ್ಮ ಖಾಸಗಿ ವಿಷಯದ ಬಗ್ಗೆ ಪ್ರಸ್ತಾಪಿಸಬೇಡಿ. ಸಿಕ್ಕ ಸಿಕ್ಕ ಲಿಂಕ್ ಪ್ರೆಸ್ ಮಾಡಬೇಡಿ, ನಿಮ್ಮ ಬ್ಯಾಂಕ್ ಮಾಹಿತಿ ಸೋರಿಕೆ ಆಗದಂತೆ ಜಾಗೃತೆ ವಹಿಸಿ, ಹೀಗೆ ಹಲವು ವಿಚಾರಗಳ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ಆದರೂ ಈ ರೀತಿ ದಡ್ಡತನದಿಂದ ವರ್ತಿಸಿ, ಜನ ಮೋಸ ಹೋಗುತ್ತಿರುವುದು ವಿಪರ್ಯಾಸದ ಸಂಗತಿ.

About The Author