Horoscope: ತಮ್ಮ ಆಕರ್ಷಕ ವ್ಯಕ್ತಿತ್ವ, ಮುಖ, ಮೈಕಟ್ಟಿನಿಂದ ಹಲವರು ಜನರನ್ನು ಆಕರ್ಷಿಸುತ್ತಾರೆ. ಆದರೆ ಕೆಲವು ಬಾರಿ ನಾವು ಯಾರನ್ನಾದರೂ ನೋಡಿದಾಗ, ಅವರು ನೋಡಲು ಅಷ್ಟೇನು ಆಕರ್ಷಕರಾಗಿರುವುದಿಲ್ಲ. ಆದರೆ ಅವರ ಮಾತು ಕೇಳಿದ್ರೆ ಕೇಳ್ತಾನೇ ಇರ್ಬೇಕು ಅನ್ಸತ್ತೆ. ಅಂಥ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ.
ತುಲಾ : ತುಲಾ ರಾಶಿಯವರು ಮಾತಿನ ಮಲ್ಲರು. ತುಲಾ ರಾಶಿಯವರು ತಮ್ಮ ಮಾತಿನಿಂದಲೇ ಸೆಂಟರ್ ಆಫ್ ಅಟ್ರ್ಯಾಕ್ಷನ್ ಎನ್ನಿಸಿಕ“ಳ್ಳುತ್ತಾರೆ. ನೀವು ಹೇಗೋ ನಾವು ಹಾಗೆ ಎನ್ನುವ ಗುಣದ ಇವರು, ಪ್ರೀತಿಯಿಂದ ಇರುವವರ ಬಳಿ ದುಪ್ಪಟ್ಟು ಪ್ರೀತಿ ನೀಡುತ್ತಾರೆ.
ವೃಷಭ: ವೃಷಭ ರಾಶಿಯವರ ಪ್ರಮುಖ ಗುಣ ಅಂದ್ರೆ ಅದು ತಾಳ್ಮೆ. ಅದೇ ತಾಳ್ಮೆ ಪ್ರೀತಿ ತೋರಿಸುವುದು, ಕಾಳಜಿ ಮಾಡುವುದನ್ನು ಕಲಿಸುತ್ತದೆ. ಅದೇ ರೀತಿ ಇವರು ಅತ್ಯತ್ತುಮವಾಗಿ ಸಲಹೆ ನೀಡುತ್ತಾರೆ. ತಿಳಿಸಿ ಬುದ್ಧಿ ಹೇಳುವ ಗುಣ ಇರುತ್ತದೆ. ಹಾಗಾಗಿ ಹೆಚ್ಚಿನ ಶಿಕ್ಷಕರು ವೃಷಭ ರಾಶಿಯವರಾಗಿರುತ್ತಾರೆ.
ಮೀನ: ಮೀನ ರಾಶಿಯವರು ಮೃದು ಸ್ವಭಾವದವರು. ಇವರು ಬೇರೆಯವರ ಮನಸ್ಸಿಗೆ ನೋವಾಗದಂತೆ ನಡೆದುಕ“ಳ್ಳುವವರು. ಮಿತ ಮತ್ತು ಮಧುರ ಭಾಷಿಯುಳ್ಳ ಇವರನ್ನು ಎಲ್ಲರೂ ಇಷ್ಟಪಡುತ್ತಾರೆ.
ಕರ್ಕ: ಚಂದ್ರನ ರಾಶಿಯಾಗಿರುವ ಕರ್ಕ ರಾಶಿಯವರು ಮೃದು ಸ್ವಭಾವದವರು. ಕಾಳಜಿ ಗುಣ ಉಳ್ಳವರು. ಅದೇ ರೀತಿ ಇವರು ಮಾತನಾಡುವ ರೀತಿಯೂ ಕೂಡ ಉತ್ತಮ. ಇವರು ಇವರ ಮಾತಿನಿಂದಲೇ ಸ್ನೇಹ, ಸಂಬಂಧ ಕಾಪಾಡಿಕ“ಳ್ಳುತ್ತಾರೆ. ಮನಸ್ಸಿನಲ್ಲಿ ಕೋಪ ಇದ್ದರೂ, ಅದನ್ನು ತೋರಿಸುವುದಿಲ್ಲ. ಹಾಗೆ ಕೋಪ ಮಾಡಿದರೆ ಸಂಬಂಧ, ಸ್ನೇಹ ಹಾಳಾಗಬಹುದು ಎಂಬ ಕಾರಣಕ್ಕೆ, ಇವರು ತಮ್ಮ ಮಾತಿನ ಮೇಲೆ ನಿಗಾ ವಹಿಸುತ್ತಾರೆ.




