ಬಂಗಾರ ಪ್ರಿಯರಿಗೆ ಇಲ್ಲಿದೆ ಒಂದು ಖುಷಿಯ ಸುದ್ದಿ. ಎಸ್ ‘ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಸತತ ಎರಡನೇ ದಿನವೂ ಭರ್ಜರಿ ಇಳಿಕೆ ಕಂಡುಬಂದಿದೆ. ನಿನ್ನೆ ತುಸು ತಗ್ಗಿದ್ದ ಬಂಗಾರದ ದರ, ಇವತ್ತು ಗ್ರಾಮ್ಗೆ ಬರೋಬ್ಬರಿ 290 ರೂಪಾಯಿಗಳಷ್ಟು ಕಡಿಮೆಯಾಗಿದ್ದು, ಹೂಡಿಕೆದಾರರಿಗೆ ಹಾಗೂ ಆಭರಣ ಖರೀದಿದಾರರಿಗೆ ನಿರಾಳ ತಂದಿದೆ.
ದೇಶದಲ್ಲಿ ಇಂದಿನ ಮಾರುಕಟ್ಟೆ ದರದಂತೆ, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯು ಪ್ರತಿ ಗ್ರಾಮ್ಗೆ 14,650 ರೂಪಾಯಿಗೆ ಇಳಿದಿದೆ. ಅಂದರೆ 10 ಗ್ರಾಮ್ 22 ಕ್ಯಾರೆಟ್ ಚಿನ್ನದ ಬೆಲೆ 1,46,500 ರೂಪಾಯಿ ಇದೆ. ಇನ್ನು 24 ಕ್ಯಾರೆಟ್ ಶುದ್ಧ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಮ್ಗೆ 15,982 ರೂಪಾಯಿಗಳಷ್ಟಿದ್ದು, ಒಟ್ಟಾರೆಯಾಗಿ 10 ಗ್ರಾಂಗೆ 1,59,820 ರೂಪಾಯಿ ತಲುಪಿದೆ. ಇದರೊಂದಿಗೆ ಅಪರಂಜಿ ಚಿನ್ನದ ಬೆಲೆ ಮತ್ತೆ 16,000 ರೂಪಾಯಿ ಗಡಿಯೊಳಗೆ ಬಂದಿದೆ ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆ ಕೂಡ 12,000 ರೂಪಾಯಿ ಗಡಿಯೊಳಗೆ ಕುಸಿದಿದೆ.
ಪ್ರಮುಖ ನಗರಗಳಲ್ಲಿನ ದರಗಳನ್ನು ನೋಡುವುದಾದರೆ, ಬೆಂಗಳೂರು, ಮುಂಬೈ, ಚೆನ್ನೈ, ಕೊಲ್ಕತಾ ಮತ್ತು ಕೇರಳದಲ್ಲಿ 22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 14,650 ರೂಪಾಯಿ ಇದ್ದರೆ, ದೆಹಲಿ, ಜೈಪುರ್ ಮತ್ತು ಲಕ್ನೋದಲ್ಲಿ 14,665 ರೂಪಾಯಿಗಳಷ್ಟಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸ್ಪಾಟ್ ಗೋಲ್ಡ್ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, 1 ಗ್ರಾಂಗೆ ಸಮ್ಮಾನಿತವಾಗಿ 147 ಡಾಲರ್ ಆಸುಪಾಸಿನಲ್ಲಿದೆ.
ಇನ್ನು ಅದರ ಜೊತೆಗೆ ‘ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯೂ ಇಳಿಕೆಯಾಗಿದ್ದು, ಭಾರತದಲ್ಲಿ ಬೆಳ್ಳಿ ಬೆಲೆ ಗ್ರಾಮ್ಗೆ 5 ರೂಪಾಯಿ ತಗ್ಗಿದೆ. ಪ್ರಸ್ತುತ ಒಂದು ಗ್ರಾಂ ಬೆಳ್ಳಿಯ ಬೆಲೆ ಬೆಂಗಳೂರು, ಮುಂಬೈ ಸೇರಿದಂತೆ ಹಲವೆಡೆ 255 ರೂಪಾಯಿ ಇದ್ದರೆ, ಚೆನ್ನೈ ಮತ್ತು ಭುವನೇಶ್ವರದಲ್ಲಿ 260 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿ ಬೆಲೆ 25,500 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ.
ದುಬೈ, ಅಮೆರಿಕ, ಸಿಂಗಾಪುರ ಸೇರಿದಂತೆ ವಿವಿಧ ವಿದೇಶಗಳಿಗೂ ಭಾರತೀಯ ಮಾರುಕಟ್ಟೆಗೂ ಚಿನ್ನದ ದರದಲ್ಲಿ ವ್ಯತ್ಯಾಸವಿದ್ದು, ಜಿಎಸ್ಟಿ ಹಾಗೂ ಮೇಕಿಂಗ್ ಚಾರ್ಜ್ಗಳು ಇದರ ಮೇಲೆ ಹೆಚ್ಚುವರಿಯಾಗಿ ಅನ್ವಯಿಸಲಿವೆ. ಹಾಗಾಗಿ ‘ಬಂಗಾರ ಖರೀದಿಸಲು ಯೋಚಿಸುತ್ತಿರುವವರಿಗೆ ಸದ್ಯದ ಬೆಲೆ ಇಳಿಕೆ ಸಣ್ಣದೊಂದು ರಿಲೀಫ್ ನೀಡಿದೆ ಅಂತಾನೆ ಹೇಳಬಹುದು.
