Spiritual: ಸಾವಿನ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಓಡಾಟ ಹೆಚ್ಚಾಗಿರುತ್ತದೆ. ಏಕೆಂದರೆ, ಆ ಮನೆಯಲ್ಲಿ ಸಾವಾಗಿದ್ದು, ಸತ್ತ ಬಳಿಕ ಆತ್ಮ 13 ದಿನಗಳ ಕಾಲ ಅಲ್ಲೇ ಅಲೆಯುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಸಾವಿನ ಮನೆಯಲ್ಲಿ ಹಲವು ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಅದೇ ರೀತಿ ಸಾವಾದಾಗ ಅಂತ್ಯಸಂಸ್ಕಾರಕ್ಕೆ ಕೆಲವರು ಹೋಗುವಂತಿಲ್ಲ.
ದುರ್ಬಲರು: ದುರ್ಬಲ ಮನಸ್ಸಿನವರು ಅಂತ್ಯಕ್ರಿಯೆಗೆ ಹೋಗಬಾರದು. ದುರ್ಬಲರು ಅಥವಾ ಆರೋಗ್ಯ ಹಾಳಾದವರು ಅಂತಿಮ ಸಂಸ್ಕಾರಕ್ಕೆ ಹೋದರೆ, ಅವರ ಆರೋಗ್ಯ ಮತ್ತಷ್ಟು ಹಾಳಾಗಬಹುದು. ಮತ್ತು ಅವರ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಬಹುದು.
ಚಿಕ್ಕ ಮಕ್ಕಳು: ಚಿಕ್ಕಮಕ್ಕಳನ್ನು ಆದಷ್ಟು ಅಂತ್ಯಸಂಸ್ಕಾರವಾಗುವ ಜಾಗದಿಂದ ದೂರವಿರಿಸಬೇಕು. ನೀವು ಟ್ರೌಮಾ ಅನ್ನೋ ಶಬ್ಧ ಕೇಳಿರಬಹುದು. ಅಂದ್ರೆ 1 ವಿಷಯ ಜೀವನದುದ್ದಕ್ಕೂ ಕಾಡುವುದು. ಅಂತ್ಯಸಂಸ್ಕಾರದಲ್ಲಿ ಹೂಳುವುದು ಅಥವಾ ಸುಡುವ ಪದ್ದತಿ ಇರುತ್ತದೆ. ಮಕ್ಕಳು ಇದನ್ನು ನೋಡಿ ಅದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿ, ಜೀವನದೂದ್ದಕ್ಕೂ ಅದು ಅವರಲ್ಲಿ ನಕಾರಾತ್ಮಕ, ಕಹಿ ನೆನಪಾಗಿ ಉಳಿಯಬಹುದು. ಹಾಗಾಗಿ ಮಕ್ಕಳನ್ನು ಅಂತ್ಯಸಂಸ್ಕಾರವಾಗುವ ಜಾಗಕ್ಕೆ ಕರೆದೋಯ್ಯಬೇಡಿ.
ಗರ್ಭಿಣಿಯರು: ಗರ್ಭಿಣಿಯರು ಕೂಡ ಆ ಸಮಯದಲ್ಲಿ ದುರ್ಬಲರಾಗಿರುತ್ತಾರೆ. ಹಾಗಾಗಿ ಅಂಥವರನ್ನು ಅಂತ್ಯಸಂಸ್ಕಾರ ನಡೆಯುವ ಸ್ಥಳದಿಂದ ದೂರವಿರಿಸಬೇಕು. ಇಲ್ಲದಿದ್ದರೆ, ಆಕೆಯ ಮಾನಸಿಕ ಮತ್ತು ದೈಹಿಕ ನೆಮ್ಮದಿ ಹಾಳಾಗಬಹುದು. ಆಕೆಯ ಮಗುವಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.




