Spiritual: ಮನೆಯಲ್ಲಿ ಸಮೃದ್ಧಿ ಇರಬೇಕು. ಆಹಾರ, ಹಣ, ನೆಮ್ಮದಿ ಎಲ್ಲವೂ ಇರಬೇಕು ಅಂದ್ರೆ ನಾವು ಕೆಲ ಧಾರ್ಮಿಕ ಕೆಲಸಗಳನ್ನು ಪಾಲಿಸಬೇಕಾಗುತ್ತದೆ. ಧಾರ್ಮಿಕ ನಂಬಿಕೆಯ ಕಡೆ ಗಮನ ನೀಡಬೇಕಾಗುತ್ತದೆ. ಅಂಥ ಧಾರ್ಮಿಕ ನಂಬಿಕೆಯಲ್ಲಿ ನಾವು ಮನೆಯಲ್ಲಿ ಕೆಲ ವಸ್ತುಗಳನ್ನು ಸಂಪೂರ್ಣವಾಗಿ ಖಾಲಿ ಮಾಡಬಾರದು ಅನ್ನೋ ನಂಬಿಕೆಯೂ 1. ಹಾಗಾದ್ರೆ ನಾವು ಮನೆಯಲ್ಲಿ ಯಾವ ವಸ್ತು ಖಾಲಿ ಮಾಡಬಾರದು ಅಂತಾ ತಿಳಿಯೋಣ ಬನ್ನಿ.
ಅರಿಷಿನ: ಅರಿಷಿನ ಅಂದ್ರೆ ಬರೀ ಆಹಾರಕ್ಕೆ ಹಾಕುವ ಪದಾರ್ಥವಲ್ಲ. ಅದು ಪೂಜೆಗೂ ಬಳಸುವ ವಸ್ತು. ಅಲ್ಲದೇ, ಸಮೃದ್ಧಿಯ ಸಂಕೇತ. ಹಾಗಾಗಿ ಅರಿಷಿನಕ್ಕೆ ದೈವೀ ಸ್ಥಾನವನ್ನು ನೀಡಿದ್ದು, ಮನೆಯಲ್ಲಿ ಅರಿಶಿನ ಸಂಪೂರ್ಣವಾಗಿ ಖಾಲಿಯಾದರೆ, ಆರ್ಥಿಕ ಪರಿಸ್ಥಿತಿ ಹದಗೆಡುವ ಸೂಚನೆ ಎಂದರ್ಥ.
ಅಕ್ಕಿ: ಅಕ್ಕಿ ಅಂದ್ರೆ ನಾವು ಬದುಕಲು ಬೇಕಾಗುವ ಪ್ರಮುಖ ವಸ್ತು. ಅನ್ನ ಉಣ್ಣದೇ ಬದುಕಲು ಸಾಧ್ಯವೆೇ? ಅಂಥ ಅಕ್ಕಿ ಮನೆಯಲ್ಲಿ ಸಂಪೂರ್ಣವಾಗಿ ಖಾಲಿ ಆಯಿತು ಎಂದರೆ, ಮನೆಯಲ್ಲಿ ಆರ್ಥಿಕ ಸಂಕಷ್ಟ ಬಂದಾಗಿದೆ ಎಂದರ್ಥ. ಹಾಗಾಗಿ ಏನೇ ಆದರೂ ಮನೆಯಲ್ಲಿ ಅಕ್ಕಿ ಸಂಪೂರ್ಣವಾಗಿ ಖಾಲಿಯಾಗಲು ಬಿಡಬಾರದು.
ಉಪ್ಪು: ಉಪ್ಪು ಕೂಡ ನಮ್ಮ ಅದೃಷ್ಟ-ದುರಾದೃಷ್ಟದ ಎಚ್ಚರಿಕೆ ನೀಡುವ ವಸ್ತುಗಳಲ್ಲಿ 1. ಏಕೆಂದರೆ ಉಪ್ಪನ್ನು ಸಮೃದ್ಧಿ ಮತ್ತು ಸಮತೋಲನದ ಸಂಕೇತ ಎಂದು ಹೇಳಲಾಗಿದೆ. ಇಂಥ ಉಪ್ಪಿನ ಡಬ್ಬ ಸಂಪೂರ್ಣ ಖಾಲಿಯಾದರೆ, ಮನೆಗೆ ನಕಾರಾತ್ಮಕ ಶಕ್ತಿಯ ಆಗಮನವಾದಂತೆ. ಹಾಗಾಗಿ ಉಪ್ಪಿನ ಡಬ್ಬ ಎಂದಿಗೂ ಖಾಲಿಯಾಗದಂತೆ ನೋಡಿ.
ನೀರಿನ ಪಾತ್ರೆ: ಮನೆಯಲ್ಲಿ ಯಾವುದಾದರೂ 1 ನೀರಿನ ಪಾತ್ರೆ, ಅಥವಾ ಬಾಟಲಿಯನ್ನಾದರೂ ತುಂಬಿಸಿಡಿ. ಖಾಲಿ ನೀರಿನ ಪಾತ್ರೆ, ಅಥವಾ ನೀರೇ ತುಂಬಿಸದ ಪಾತ್ರೆಗಳನ್ನು ಮನೆಯ್ಲಲಿದ್ದರೆ, ಅದು ದರಿದ್ರದ ಸಂಕೇತ.
ಹಣ ಇಡುವ ಪೆಟ್ಟಿಗೆ: ಹಣ ಇಡುವ ಪೆಟ್ಟಿಗೆ ಅಥವಾ ತಿಜೋರಿ ಕೂಡ ಎಂದಿಗೂ ಖಾಲಿ ಇಡಲು ಬಿಡಬೇಡಿ. ತಿರೋಜಿಯಲ್ಲಿರುವ ಹಣವೆಲ್ಲ ಖಾಲಿ ಮಾಡಿ ಕುಳಿತಲ್ಲಿ ನಿಮಗೆ ತೀವ್ರ ಆರ್ಥಿಕ ಸಂಕಷ್ಟ, ಸಾಲಬಾಧೆ ಬರಬಹುದು. ಹಾಗಾಗಿ ತಿಜೋರಿಯನ್ನು ಎಂದಿಗೂ ಖಾಲಿ ಬಿಡಬೇಡಿ.




