Vidur Neeti: ಇಂಥವರ ಸ್ನೇಹ ಎಂದಿಗೂ ಮಾಡಬಾರದೆಂದು ಹೇಳುತ್ತಾರೆ ವಿದುರ

Vidura Neeti: ಚಾಣಕ್ಯರು ಯಾವ ರೀತಿ ಚಾಣಕ್ಯ ನೀತಿಯಲ್ಲಿ ಬದುಕುವ ರೀತಿಯ ಬಗ್ಗೆ ವಿವರಿಸಿದ್ದಾರೋ, ಅದೇ ರೀತಿ ವಿದುರರು ಕೂಡ ವಿದುರ ನೀತಿಯಲ್ಲಿ ಜೀವನದ ಬಗೆಗಿನ ಹಲವು ಮಹತ್ವದ ಸಂಗತಿಗಳನ್ನು ಹೇಳಿದ್ದಾರೆ. ಅದರಲ್ಲೂ ಎಂಥವರ ಸ್ನೇಹ ಮಾಡಬಾರದು ಅನ್ನೋ ಬಗ್ಗೆ ವಿದುರರು ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.

ಬೇರೆಯವರ ಬಗ್ಗೆ ನಿಮ್ಮ ಎದುರು ದೂರು ಹೇಳುವವರು, ವ್ಯಂಗ್ಯ ಮಾಡುವವರ ಸ್ನೇಹ ಮಾಡಬೇಡಿ: ಯಾವ ವ್ಯಕ್ತಿ ನಿಮ್ಮ ಎದುರು ಬಂದು ಯಾರನ್ನೂ ಎಂದಿಗೂ ಭೇಷ್ ಎನ್ನದೇ, ಬರೀ ದೂರುಗಳನ್ನು ಹೇಳುವವರು. ಬೇರೆಯವರ ಬಗ್ಗೆ ವ್ಯಂಗ್ಯವಾಡುವವರು, ಅಸೂಯೆ ಪಡುವವರ ಸ್ನೇಹ ಎಂದಿಗೂ ಮಾಡಬೇಡಿ. ಅಂಥವರು ನಿಮ್ಮ ಬಗ್ಗೆಯೂ ಅಸೂಯೆ ಪಡುತ್ತಾರೆ.

ಕೆಲಸವಿದ್ದಾಗ ಮಾತ್ರ ಸಿಹಿ ಮಾತನಾಡುವವರು ಅಥವಾ ಕೆಲಸ ಮುಗಿದ ಬಳಿಕ ನಿಮ್ಮನ್ನು ನಿರ್ಲಕ್ಷಿಸುವವರ ಜತೆ ಸ್ನೇಹ ಮಾಡಬೇಡಿ: ಕೆಲಸವಿದ್ದಾಗ ಮಾತ್ರ ನಿಮ್ಮ ಬಳಿ ಬಂದು, ಚೆನ್ನಾಗಿ ಮಾತಾಡಿ, ಕೆಲಸ ಮುಗಿದ ಬಳಿಕ ನಿಮ್ಮನ್ನು ನಿರ್ಲಕ್ಷ್ಯ ಮಾಡುವವರ ಬಗ್ಗೆ ತಿಳಿದುಕ“ಳ್ಳಿ. 1 ಬಾರಿ ನಿಮಗೆ ಈ ಅನುಭವವಾದಲ್ಲಿ, ಅಂಥವರ ಸ್ನೇಹ ಎಂದಿಗೂ ಮಾಡಬೇಡಿ.

ಇತರರ ಮುಂದೆ ತಮಾಷೆಯ ಹೆಸರಿನಲ್ಲಿ ನಿಮ್ಮನ್ನು ಅವಮಾನಿಸುವವರ ಸ್ನೇಹ ಮಾಡಬೇಡಿ: ಯಾವಾಗಲೂ ನಿಮ್ಮನ್ನು ತಮಾಷೆ ಮಾಡುವವರ ಮಾನ್ನು ಗಮನವಿಟ್ಟು ಕೇಳಿ. ಅವರು ನಿಮಗೆ ತಮಾಷೆ ಮಾಡುತ್ತಿದ್ದಾರೋ, ಅಥವಾ ತಮಾಷೆ ಹೆಸರಲ್ಲಿ ಅವಮಾನಿಸುತ್ತಿದ್ದಾರೋ ಎಂದು ಗಮನಿಸಿ. ನಿಮ್ಮನ್ನು ಅವಮಾನಿಸುತ್ತಿದ್ದಾರೆ ಎಂದಲ್ಲಿ ಅಂಥವರಿಂದ ದೂರವಿರಿ.

ಸಿಹಿ ಮಾತನ್ನಾಡಿ ತಪ್ಪು ಕೆಲಸ ಮಾಡಲು ಪ್ರೇರೇಪಿಸುವವರ ಸ್ನೇಹ ಬೇಡ: ಸಂಗತಿ ಸಂಗ ದೋಷ ಎಂಬ ಮಾತಿದೆ. ಅಂದರೆ ಉತ್ತಮನೂ ದುರ್ಜನರ ಸಂಗ ಮಾಡಿ, ದುಷ್ಚಟ ಕಲಿಯುತ್ತಾನೆ. ಹಾಗಾಗಿ ನಿಮ್ಮ ಬಳಿ ಚೆಂದವಾಗಿ ಮಾತನಾಡಿ, ನಿಮ್ಮನ್ನು ತಪ್ಪು ಕೆಲಸ ಮಾಡಲು ಯಾರಾದ್ರೂ ಪ್ರೇರೇಪಿಸಿದರೆ, ಅಂಥವರಿಂದ ದೂರವಿರುವುದು ಉತ್ತಮ.

 

About The Author