Chanakya Neeti: ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಇಂದೇ ಈ ಅಭ್ಯಾಸಗಳನ್ನು ಬಿಡಿ

Chanakya Neeti: ಚಾಣಕ್ಯರು ಹಲವು ವಿಷಯಗಳನ್ನು ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಜೀವನದಲ್ಲಿ ಯಶಸ್ವಿಯಾಗಬೇಕು ಅಂದ್ರೆ ಏನು ಮಾಡಬೇಕು ಅಂತಲೂ ಹೇಳಿದ್ದಾರೆ. ನಾವು ಜೀವನದಲ್ಲಿ ಯಶಸ್ವಿಯಾಗಬೇಕು ಅಂದ್ರೆ ಕೆಲ ಅಭ್ಯಾಸಗಳನ್ನು ಬಿಡಬೇಕು ಎಂದು ಚಾಣಕ್ಯರು ಹೇಳಿದ್ದಾರೆ. ಆ ಅಭ್ಯಾಸಗಳೇನು ಅಂತಾ ತಿಳಿಯೋಣ ಬನ್ನಿ.

ಸೋಮಾರಿತನ: ಯಾರಿಗೆ ಹೆಚ್ಚು ಸೋಮಾರಿತನವಿರುತ್ತದೆಯೋ, ಅಂಥವರು ಜೀವನದಲ್ಲಿ ಎಂದಿಗೂ ಉದ್ಧಾರವಾಗಲು ಸಾಧ್ಯವಿಲ್ಲ. ಸೋಮಾರಿತನ ಇರುವವರು ಮಾಡುವ ಕೆಲಸಗಳನ್ನು ಮುಂದೆ ಹಾಕುತ್ತ ಬರುತ್ತಾರೆ. ಆ ಕೆಲಸದ ಭಾರ ಬಿದ್ದ ಬಳಿಕ, ಅರ್ಥವಿಲ್ಲದಂತೆ ಕೆಲಸ ಮಾಡುತ್ತಾರೆ. ಆದ್ದರಿಂದಲೇ ಅಂಥವರು ಯಶಸ್ಸು ಸಾಧಿಸಲು ಸಾಧ್ಯವಿಲ್ಲ.

ಅಹಂಕಾರ: ಅಂಹಾಕರ ತೋರಿಸುವವರು ಎಂದಿಗೂ ಜೀವನದಲ್ಲಿ ಉದ್ಧಾರವಾಗಲು ಸಾಧ್ಯವಿಲ್ಲ. ಏಕೆಂದರೆ ಅಹಂಕಾರದಿಂದ ಮೆರೆಯುವವರಿಗೆ ಇತರರ ಮಾತು, ಸಲಹೆ ತುಚ್ಛ ಎನ್ನಿಸಲು ಶುರುವಾಗುತ್ತದೆ. ಅಂಥವರು ಜನರನ್ನು ನಿರ್ಲಕ್ಷಿಸಲು ಶುರು ಮಾಡುತ್ತಾರೆ. ಈ ಕಾರಣಕ್ಕೆ ಅಹಂಕಾರಿಗಳು ಎಂದಿಗೂ ಉದ್ಧಾರವಾಗಲು ಸಾಧ್ಯವಿಲ್ಲ.

ಸಂಗದೋಷ: ನಾವು ಎಷ್ಟೇ ಬುದ್ಧಿವಂತರಿದ್ದರೂ, ನೀವು ಯಾರ ಸಹವಾಸ ಮಾಡಿದ್ದೀರಿ ಎಂಬುದರ ಮೇಲೆ ನೀವು ಜೀವನದಲ್ಲಿ ಯಶಸ್ವಿಯಾಗುತ್ತೀರೋ, ಇಲ್ಲವೋ ಎಂಬುದು ನಿರ್ಧರಿತವಾಗುತ್ತದೆ. ಹಾಗಾಗಿ ಸ್ನೇಹ ಮಾಡುವಾಗ, ಬುದ್ಧಿ, ಗುಣ, ಅಭ್ಯಾಸ ಎಲ್ಲವನ್ನು ನೋಡಿ ಸ್ನೇಹ ಮಾಡುವುದನ್ನು ಕಲಿಯಿರಿ.

ದುಡುಕು ನಿರ್ಧಾರ: ಯಾರು ಜೀವನದಲ್ಲಿ ದುಡುಕು ನಿರ್ಧಾರ ತೆಗೆದುಕ“ಳ್ಳುತ್ತಾರೋ ಅಂಥವರು ಎಂದಿಗೂ ಉದ್ಧಾರವಾಗುವುದಿಲ್ಲ. ತಾಳ್ಮೆಯಿಂದ ಇದ್ದವರು ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಅಂತಾರೆ ಚಾಣಕ್ಯರು.

About The Author