www.karnatakatv.net :ಮುಂಬರುವ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಟಾಂಡ್ ಬೈ ಪಟ್ಟಿಗೆ ಟೀಮ್ ಇಂಡಿಯಾಗೆ ಶಾರ್ದೂಲ್ ಠಾಕೂರ್ ಎಂಟ್ರಿಯಾಗಿದ್ದಾರೆ. ಆಲ್ ರೌಂಡರ್ ಅಕ್ಷರ್ ಪಟೇಲ್ ಸ್ಥಾನಕ್ಕೆ ಠಾಕೂರ್ ಗೆ ಸ್ಥಾನ ನೀಡಲಾಗಿದೆ. ಇವರ ಜೊತೆಗೆ ಶ್ರೇಯಸ್ ಆಯ್ಯರ್ ಕೂಡ ಆಯ್ಕಯಾಗಿದ್ದಾರೆ. ಆಯ್ಕೆ ಸಮಿತಿ ಮತ್ತು ತಂಡ ನಿರ್ವಹಣೆಯ ಚರ್ಚೆ ಬಳಿಕ ಈ ಆಟಗಾರರ ಪಟ್ಟಿ ಫೈನಲ್ ಮಾಡಲಾಗಿದೆ.
ಈ ವರ್ಷದ ಆರಂಭದಲ್ಲಿ ಅಹಮದಬಾದ್ ಮತ್ತು ಇಂಗ್ಲೆಡ್‌ನಲ್ಲಿ ಪಂದ್ಯಗಳನ್ನ ಆಡಿದ್ದ ಠಾಕೂರ್ ನಿಧಾನವಾಗಿ ಭಾರತ ಎಲ್ಲಾ ಮಾದರಿಗಳಿಗೂ ಆಯ್ಕೆ ಆಗುತ್ತಿದ್ದಾರೆ. ಕಳೆದ ಇಂಗ್ಲೆಂಡ್ ಸೀರಿಸ್‌ನ ಶಾರ್ದೂಲ್ ಬ್ಯಾಟಿಂಗ್ ಪ್ರದರ್ಶನವೇ ವಿಶ್ವಕಪ್ ಗೆ ಆಯ್ಕೆಯಾಗಲು ಪ್ಲಸ್ ಪಾಯಿಂಟ್ ಆಗಿದೆ.
ಐಪಿಎಲ್‌ನಲ್ಲಿ ಚೆನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡುತ್ತಿರುವ ಶಾರ್ದೂಲ್ ಠಾಕೂರ್ 8.75ಸರಾಸರಿಯಲ್ಲಿ 15 ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ.
ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದೆ ಇರುವುದರಿಂದ ಇವರನ್ನು ಆಯ್ಕೆ ಮಾಡಲಾಗಿದೆ ಅಂತ ಹೇಳಲಾಗಿದೆ. ಒಟ್ಟಿನಲ್ಲಿ ಟೀಮ್ ಇಂಡಿಯಾಗೆ ಮತ್ತೊಬ್ಬ ಆಲ್ ರೌಂಡರ್ ಆಗಿ ಗುರುತಿಸಿಕೊಳ್ಳಲು ಶಾರ್ದೂಲ್‌ಗೆ ಇದು ಒಳ್ಳೆಯ ಅವಕಾಶವಾಗಿದೆ.
ಮಂಜುನಾಥ್ ದೇವಾಂಗ್ ಶೆಟ್ಟಿ ಸ್ಪೊರ್ಟ್ಸ್ ಬ್ಯೂರೋ ಕರ್ನಾಟಕ ಟಿವಿ