ಬೆಲ್ಜಿಯಂ : ಬೆಲ್ಜಿಯಂನ ಚಾರ್ಲೆರಾಯ್ ನಗರದಲ್ಲಿ ಮಹಾಪುರುಷನೊಬ್ಬ ಒಂದಲ್ಲ ಎರಡಲ್ಲ ಬರೋಬ್ಬರಿ 9ನೇ ಬಾರಿ ಲಸಿಕೆ ಪಡೆದುಕೊಳ್ಳಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ವಿಲಕ್ಷಣ ಘಟನೆ ನಡೆದಿದೆ. ಪ್ರತಿಬಾರಿಯೂ ಲಸಿಕೆ ಪಡೆದುಕೊಳ್ಳಲು ಬೆಲ್ಜಿಯಂನ ಈ ವ್ಯಕ್ತಿ ಸುಳ್ಳು ದಾಖಲೆಗಳನ್ನು ನೀಡುತ್ತಿದ್ದ, ಹೀಗೆ ಸುಳ್ಳು ದಾಖಲೆ ನೀಡಿ 8 ಡೋಸ್ ಲಸಿಕೆ ಪಡೆದುಕೊಂಡಿದ್ದು 9ನೇ ಬಾರಿ ಲಸಿಕೆ ಪಡೆಯಲು ಲಸಿಕಾ ಕೇಂದ್ರಕ್ಕೆ ಹೋದಾಗ ಲಸಿಕಾ ಕೇಂದ್ರದಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದ, ಆರೋಗ್ಯ ಕಾರ್ಯಕರ್ತರು ಸುಳ್ಳು ದಾಖಲೆ ನೀಡಿ ಲಸಿಕೆ ಪಡೆಯಲು ಬಂದವನ ಗುರುತು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ವ್ಯಕ್ತಿಯನ್ನ ಬಂಧಿಸಿದ್ದಾರೆ. ಇನ್ನು ಈಗಾಗಲೇ ಎಂಟು ಬಾರಿ ಲಸಿಕೆ ಪಡೆದುಕೊಂಡು 9ನೇ ಬಾರಿ ಲಸಿಕೆ ಪಡೆಯಲು ಹೋದ ವ್ಯಕ್ತಿ ಪೊಲೀಸರ ಕೈಗೆ ಅತಿಥಿಯಾಗಿದ್ದಾನೆ.. ಆದರೆ ಆಶ್ಚರ್ಯ ಅಂದ್ರೆ ಎಂಟು ಬಾರಿ ಲಸಿಕೆಯ ಪಡೆದುಕೊಂಡಿದ್ದರು ಸಹ ಈತನ ಮೇಲೆ ಯಾವುದೇ ಅಡ್ಡಪರಿಣಾಮಗಳು ಬೀರಿಲ್ಲ.ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಳ್ಳದೇ ಎಲ್ಲ ಜನರಂತೆ ಈತ ಕೂಡ ಸಹಜವಾಗಿ ಇದ್ದಾನೆ.




