ಇಂಗ್ಲೆಂಡ್: ವಿಶ್ವಕಪ್ ಮಹಾ ಸಮರದಲ್ಲಿ ಇಂದು ಭಾರತ ಅಫ್ಘಾನ್ ತಂಡದ ವಿರುದ್ಧ ಸೆಣಸಲಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರೋ ಕೊಹ್ಲಿ ಪಡೆ ಎದುರಾಳಿಯ ಮಟ್ಟ ಹಾಕಲು ರೆಡಿಯಾಗಿದೆ.
ಆಡಿದ ಐದೂ ಪಂದ್ಯಗಳಲ್ಲೂ ಸೋತು ಸುಣ್ಣವಾಗಿರುವ ಅಫ್ಘಾನಿಸ್ತಾನ ತಂಡದ ವಿರುದ್ಧ ಇಂದು ಭಾರತ ಸೆಣಸಾಟ ನಡೆಸಲಿದೆ. ಸೌತಾಂಪ್ಟನ್ ನಲ್ಲಿ ನಡೆಯುತ್ತಿರೋ ಪಂದ್ಯದಲ್ಲಿ ಮೊದಲಿಗೆ ಟಾಸ್ ಗೆದ್ದಿರೋ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ವಿಶ್ವಕಪ್ ನಲ್ಲಿ ತನ್ನ ಖಾತೆಯನ್ನೇ ತೆರೆಯದ ಅಫ್ಘಾನ್ ತಂಡವನ್ನು ಮಣಿಸೋಕೆ ಬ್ಲ್ಯೂ ಬಾಯ್ಸ್ ಸನ್ನದ್ಧರಾಗಿದ್ದು, ಅಫ್ಘಾನ್ನರು ವಿಶ್ವಕಪ್ ನಲ್ಲಿ ಖಾತೆ ತರೆಯುತ್ತಾರಾ ಅನ್ನೋ ಕುತೂಹಲ ಕೆರಳಿಸಿದೆ.
ಇನ್ನು ಈವರೆಗೆ ಆಡಿದ 4 ಪಂದ್ಯಗಳಲ್ಲಿ 3 ಪಂದ್ಯಗಳಲ್ಲಿ ಭಾರತ ಗೆಲುವಿನ ಜಯಭೇರಿ ಬಾರಿಸಿದ್ದು ಪಾಯಿಂಟ್ ಪಟ್ಟಿಯಲ್ಲಿ ಟೀಂ ಇಂಡಿಯಾ 4ನೇ ಸ್ಥಾನದಲ್ಲಿದೆ.
ಮಕ್ಕಳೊಂದಿಗೆ ತಾವೇ ಮಕ್ಕಳಾದ ಕೊಹ್ಲಿ, ರಾಹುಲ್..!ಮಿಸ್ ಮಾಡದೇ ಈ ವಿಡಿಯೋ ನೋಡಿ