11 LAXMI : ಕಡೆಯಿಂದ ನಿಮ್ಮ ಸಂಕಷ್ಟಗಳು ಪರಿಹಾರ..!

ನಮಸ್ಕಾರ ಗೆಳೆಯರೇ, ವ್ಯಾಪಾರ-ವ್ಯವಹಾರದಲ್ಲಿ ಅಭಿವೃದ್ಧಿ ಕಾಣಬೇಕು, ಉತ್ತಮವಾದ ಉದ್ಯೋಗ ದೊರೆಯಬೇಕು, ಆರ್ಥಿಕವಾಗಿ ಸಾಕಷ್ಟು ಲಾಭ ಪಡೆದುಕೊಂಡು ಸಾಲಬಾಧೆಯಿಂದ ದೂರವಾಗಿ, ಸುಖ, ಶಾಂತಿ,ನೆಮ್ಮದಿ ಜೀವನ ಹೊಂದಬೇಕು ಎಂದು ಎಲ್ಲರಿಗೂ ಸಹ ಆಸೆ ಇರುತ್ತದೆ. ಆದರೆ ಅದು ಸಾಧ್ಯವಾಗಿರುವುದಿಲ್ಲ. ಶ್ರಮಪಟ್ಟು ದುಡಿಯುವುದರ ಜೊತೆಗೆ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಎದುರಾಗುವ ಸಮಸ್ಯೆಗಳಿಂದ ಸುಲಭವಾಗಿ ಹೊರಗೆ ಬರಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಈ ಒಂದು ಪರಿಹಾರ ಮಾಡಿಕೊಳ್ಳುವುದರಿಂದ ಜೀವನದಲ್ಲಿ ಸುಲಭವಾಗಿ ಪ್ರಗತಿ ಕಾಣಬಹುದು. ಮೊದಲಿಗೆ 11 ಕವಡೆ ತೆಗೆದುಕೊಳ್ಳಿ, ಅದರಲ್ಲೂ ಲಕ್ಷ್ಮಿ ಕವಡೆಯನ್ನು ಪರಿಹಾರಕ್ಕೆ ಬಳಸಬೇಕು, 11 ಲಕ್ಷ್ಮಿ ಕವಡೆ ತೆಗೆದುಕೊಳ್ಳಬೇಕು, ಹಾಗೂ ಕೆಂಪುವಸ್ತ್ರ ತೆಗೆದುಕೊಳ್ಳಬೇಕು, ನಂತರ ಅರಿಶಿನ ದಾರವನ್ನು ತೆಗೆದುಕೊಳ್ಳಬೇಕು, ನಂತರ ಒಂದು ಬಟ್ಟಲಿನಲ್ಲಿ ಸ್ವಲ್ಪ ಅರಿಶಿನ ಪುಡಿ ಹಾಗೂ ನೀರನ್ನು ತೆಗೆದುಕೊಳ್ಳಬೇಕು, ಅದರಲ್ಲಿ ಕವಡೆಗಳನ್ನುಶುದ್ಧವಾಗಿ ತೊಳೆಯಬೇಕು ಹಾಗೂ ಪನ್ನೀರು ಅಥವಾ ಗಂಗಾಜಲ ಇಲ್ಲವಾದರೆ ಹಾಲಿನಲ್ಲಿ ಸುದ್ದಿ ಮಾಡಬೇಕು. ನಂತರ ಒಂದು ಬಟ್ಟೆ ತೆಗೆದುಕೊಂಡು ಕವಡೆಯನ್ನು ಸರಿಯಾಗಿ ವರೆಸಬೇಕು ಈ ಪರಿಹಾರವನ್ನು ಶುಕ್ರವಾರ ಅಥವಾ ಹುಣ್ಣಿಮೆಯ ದಿನ ಮಾಡಿದರೆ ಒಳ್ಳೆಯದು, ಕವಡೆಯನ್ನು ಶುದ್ಧವಾಗಿ ತೊಳೆದು ನಂತರ ಕೆಂಪು ಬಟ್ಟೆಯಲ್ಲಿ ಹಾಕಬೇಕು, ನಂತರ ಕವಡೆಯ ಮೇಲೆ ಸ್ವಲ್ಪ ಅರಿಶಿನ ಕುಂಕುಮ ಅಕ್ಷತೆಯನ್ನು ಹಾಕಬೇಕು ನಂತರ ಒಂದು ಹೂವನ್ನು ಹಾಕಿ ಲಕ್ಷ್ಮೀದೇವಿಯನ್ನು ಮನಸ್ಸಿನಲ್ಲಿ ನೆನೆದು ಮನಸ್ಸಿನಲ್ಲಿರುವ ಇಷ್ಟಾರ್ಥಗಳನ್ನು ಸಂಕಲ್ಪ ಮಾಡಿಕೊಳ್ಳಬೇಕು. ಸಂಕಲ್ಪ ಮಾಡಿಕೊಂಡ ನಂತರ ಅರಿಶಿನ ದಾರವನ್ನು ತೆಗೆದುಕೊಂಡು ಬಟ್ಟೆಯ 4 ಮೂಲೆಯನ್ನು ಹಿಡಿದು ದಾರದಿಂದ ಮೂರು ಸುತ್ತು ಹಾಕಿ ಗಂಟು ಕಟ್ಟಬೇಕು ಈ ರೀತಿಯಾಗಿ ಪ್ರತಿ ತಿಂಗಳು ಕೂಡ ಪರಿಹಾರವನ್ನು ಮಾಡಿಕೊಳ್ಳಬೇಕು. ಹುಣ್ಣಿಮೆಯ ದಿನ ಈ ಪರಿಹಾರ ಮಾಡಿಕೊಂಡಿದ್ದರೆ ಬರುವ ಹುಣ್ಣಿಮೆಯ ದಿನ ಬಟ್ಟೆಯಲ್ಲಿರುವ ಕವಡೆಯನ್ನು ತೆಗೆದು ಅರಸಿನ ನೀರಿನಲ್ಲಿ ಶುದ್ದಿ ಮಾಡಿ ಅದೇ ಕೆಂಪು ಬಟ್ಟೆಯಲ್ಲಿ ಹಾಕಿ ಅರಿಶಿನ ಕುಂಕುಮ ಹೂವಿನಿಂದ ಅರ್ಚನೆ ಮಾಡಿ ಅದಕ್ಕೆ ದೂಪ, ದೀಪರಾಧನೆ ತೋರಿಸಿ ಗಂಟನ್ನು ಕಟ್ಟಿ ದೇವರ ಮನೆಯಲ್ಲಿ ಇಡಬೇಕು. ಆರ್ಥಿಕವಾಗಿ ಸಮಸ್ಯೆ ಇದ್ದರೆ ಹಣಕಾಸು ಇರುವ ಖಜಾನೆ ಪೆಟ್ಟಿಗೆಯಲ್ಲಿ ಇಡಬಹುದು ಅಥವಾ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಿದ್ದರೆ, ವ್ಯಾಪಾರ ವ್ಯವಹಾರ ಮಾಡುವ ಸ್ಥಳದಲ್ಲಿ ಅಥವಾ ಉದ್ಯೋಗ ಮಾಡುವ ಕಚೇರಿಯಲ್ಲಿ ಕೂಡ ಇಟ್ಟುಕೊಳ್ಳಬಹುದು ಈ ಒಂದು ಪರಿಹಾರ ಮಾಡಿಕೊಳ್ಳುವುದರಿಂದ ಲಕ್ಷ್ಮೀದೇವಿ ಅನುಗ್ರಹದಿಂದ ಶೀಘ್ರವಾಗಿ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ.

About The Author