ಕಲಬುರ್ಗಿ (Kalaburagi) ಜಿಲ್ಲೆಯ ಆಳಂದ ಪಟ್ಟಣದಲ್ಲಿ ಮಾಡಿ ನಿಷೇದಾಜ್ಞೆಯನ್ನು ಜಿಲ್ಲಾಧಿಕಾರಿಗಳು ಜಾರಿ ಮಾಡಿದ್ದಾರೆ. ಮಹಾಶಿವರಾತ್ರಿ ಪ್ರಯುಕ್ತ ಕಲಬುರ್ಗಿ ಜಿಲ್ಲೆಯ ಆಳಂದ ಪಟ್ಟಣದ ಶಿವಲಿಂಗ ಪೂಜೆ ವೇಳೆ ಶ್ರೀರಾಮಸೇನೆ ಹಮ್ಮಿಕೊಂಡಿದ್ದ ಆಳಂದ ಚಲೋ (Alanda Chalo) ಹೋರಾಟ ಖಂಡಿಸಿ, ಸ್ಥಳೀಯ ಮುಸ್ಲಿಂ ಸಂಘಟನೆಗಳು ಕೂಡ ಹೋರಾಟವನ್ನು ಮಾಡಿದವು, ಇದರಿಂದಾಗಿ ಎರಡು ಕೋಮುಗಳ ನಡುವೆ ವಿವಾದ ಉಂಟಾಗಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಈ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ದಾರಿಯನ್ನು ಹೊರಡಿಸಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚೈತ್ರ ಕುಂದಾಪುರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಈ ವೇಳೆ ಮಾತನಾಡಿದ ಅವರು ಪ್ರತಿವರ್ಷದಂತೆ ಶಿವರಾತ್ರಿ ಹಬ್ಬದ ಹಿನ್ನೆಲೆ ಶಿವಲಿಂಗಕ್ಕೆ ಪೂಜೆ ಮಾಡಬೇಕೆಂದು ಕೇಳಿಕೊಂಡಿದ್ದೇವೆ, ನಮಗೆ ಯಾವುದೇ ರೀತಿಯ ಧಾರ್ಮಿಕ ಸಭೆ (Religious assembly) ಮಾಡುವ ಯೋಚನೆ ಇರಲಿಲ್ಲ, ಹಿಂದೂಗಳು (Hindus) ಆಳಂದ ದಲ್ಲಿ ಶಿವಲಿಂಗಕ್ಕೆ ಪೂಜೆ ಮಾಡಲು ನಿರ್ಧಾರ ಮಾಡಿದ ನಂತರ ಮುಸ್ಲಿಂ ಸಮುದಾಯದವರು (Muslim community) ದರ್ಗಾದಲ್ಲಿ ಕಾರ್ಯಕ್ರಮ ಮಾಡಲು ಮುಂದಾಗಿದ್ದಾರೆ. ಇದರಿಂದ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆಯನ್ನು ಜಾರಿ ಮಾಡಿದ್ದಾರೆ. ಇದರಿಂದ ನಮ್ಮ ಧಾರ್ಮಿಕ ಆಚರಣೆಗೆ ಧಕ್ಕೆ ಉಂಟಾಗಿದೆ. ಶಿವರಾತ್ರಿ ಗೆ ಪೂಜೆ ಮಾಡುವುದು ನಮ್ಮ ಸಂಕಲ್ಪ ಹಾಗೂ ನಮ್ಮ ಮೂಲಭೂತ ಹಕ್ಕಾಗಿದೆ ಎಲ್ಲದಕ್ಕೂ ನ್ಯಾಯಾಲಯದಲ್ಲಿ ಉತ್ತರ ಕೊಡಬೇಕು, ಈ ವಿಷಯ ಕುರಿತಂತೆ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತೇವೆ ಎಂದರು ಅಗತ್ಯ ದಾಖಲೆಗಳನ್ನು ಕೋರ್ಟ್ ಗೆ ಸಲ್ಲಿಸುತ್ತೆವೆ. ಮಾರ್ಚ್ 3 ವರೆಗೆ ನಿಷೇಧಾಜ್ಞೆ ಮುಗಿದ ನಂತರ ನಾವು ಎನು ಮಾಡಬೇಕೆಂದು ಈ ಬಗ್ಗೆ ಹಿಂದೂ ಪರ ಸಂಘಟನೆ ಮುಖಂಡರು ನಿರ್ಧಾರ ಮಾಡುತ್ತಾರೆ ಎಂದರು. ಕಲುಬುರಗಿ ಜಿಲ್ಲೆಗೆ ಪ್ರವೇಶ ನಿಷೇಧಿಸಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ, ಸಿದ್ದಲಿಂಗ ಸ್ವಾಮಿಗೆ ನೋಟಿಸ್ ನೀಡಲಾಗಿದೆ. ಕೋಮು ಸಾಮರಸ್ಯ ಹದಗೆಡುವ ಆರೋಪದ ಮೇಲೆ ಅವರ ಆಗಮನಕ್ಕೆ ನಿರ್ಬಂಧ ಹೇರಲಾಗಿದೆ. ಆಳಂದ ತಾಲೂಕು ಮತ್ತು ಕಲಬುರಗಿ ನಗರದ ಅನೇಕ ಕಡೆ ನಿಷೇದಾಜ್ಞೆ ಕೂಡಾ ವಿಧಿಸಲಾಗಿತ್ತು. ಇನ್ನು ಹತ್ತು ಜನರಿಗೆ ಲಿಂಗಕ್ಕೆ ಪೂಜೆಗೆ ಅವಕಾಶವನ್ನು ಜಿಲ್ಲಾಳಿತ ನೀಡಿತ್ತು. ಅದರಂತೆ ಇಂದು ಕೇಂದ್ರ ಸಚಿವ ಭಗವಂತ ಕೂಬಾ, ಶಾಸಕರಾದ ರಾಜಕುಮಾರ್ ಪಾಟೀಲ್, ಬಸವರಾಜ್ ಮತ್ತಿಮೂಡ್ ಸೇರಿದಂತೆ ಹತ್ತು ಜನರಿಗೆ ಅವಕಾಶ ನೀಡಲಾಗಿತ್ತು. ಆದರೆ ನೂರಾರು ಜನರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಳಂದಕ್ಕೆ ಹೊರಟಿದ್ದರಿಂದ ಪೊಲೀಸರು ನಿಷೇಧ ವಿಧಿಸಿದರು.