ಚಾಣಕ್ಯರ ಪ್ರಕಾರ ನೀವು ವಿವಾಹಕ್ಕೂ ಮುನ್ನ ವಧುವಿಗೆ ಕೇಳಬೇಕಾದ ಪ್ರಶ್ನೆಗಳಿವು- ಭಾಗ 2

ಮೊದಲ ಭಾಗದಲ್ಲಿ ನಾವು ಚಾಣಕ್ಯರು ಮದುವೆಗೂ ಮುನ್ನ ವರ ವಧುವಿಗೆ ಯಾವ ಪ್ರಶ್ನೆ ಕೇಳಬೇಕು ಅನ್ನುವುದರಲ್ಲಿ, ಮೂರು ಪ್ರಶ್ನೆಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಉಳಿದ ಪ್ರಶ್ನೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ನಾಲ್ಕನೇಯ ಪ್ರಶ್ನೆ, ಆಕೆಯ ಜೀವನದ ಬಗ್ಗೆ ಪ್ರಶ್ನೆ ಕೇಳಬೇಕು. ನಿಮಗೆ ಟಿಪ್ ಟಾಪ್ ಆಗಿ ಬಟ್ಟೆ ಹಾಕು, ಜೀವನ ಎಂಜಾಯ್ ಮಾಡುವ, ಶೋಕಿ ಮಾಡುವ ವರ ಇಷ್ಟವೋ..? ಅಥವಾ ಸಾಧಾರಣವಾಗಿ, ಅವಶ್ಯಕತೆ ಇದ್ದಷ್ಟೇ ಖರ್ಚು ಮಾಡುವ, ಇದ್ದುದರಲ್ಲೇ ಖುಷಿ ಖುಷಿಯಾಗಿರುವ ವರ ಇಷ್ಟವೋ ಅನ್ನೋ ಪ್ರಶ್ನೆಯನ್ನ ನೀವು ಕೇಳಬೇಕು. ಆಗ ಆಕೆಯ ಮನಸ್ಥಿತಿಯನ್ನು ನೀವು ತಿಳಿಯಬಹುದು.

ಯಾಕಂದ್ರೆ ನೀವು ಆಕೆಗಾಗಿ ಖರ್ಚು ಮಾಡುವ ಅರ್ಹತೆ ಹೊಂದಿದ್ದಲ್ಲಿ, ಅಥವಾ ಮುಂದೊಂದು ದಿನ ಶ್ರೀಮಂತನಾಗೇ ಆಗುತ್ತೇನೆ ಎಂಬ ಗುರಿ ನಿಮಗಿದ್ದಲ್ಲಿ, ನೀವು ಆಕೆಯನ್ನ ವಿವಾಹವಾಗಿ ಚೆನ್ನಾಗಿ ನೋಡಿಕೊಳ್ಳಬಹುದು. ಆದ್ರೆ ನೀವು ಇದ್ದುದರಲ್ಲೇ ಜೀವನ ಸಾಗಿಸುವ, ಸಾಧಾರಣವಾಗಿರುವ ವ್ಯಕ್ತಿಯಾಗಿದ್ದರೆ, ಮತ್ತು ಅವರು ಜೀವನವನ್ನು ಎಂಜಾಯ್ ಮಾಡುವ ಹುಡುಗಿಯಾಗಿದ್ದರೆ, ನಿಮಗೆ ಮತ್ತು ಅವರಿಗೆ ಮುಂದೆ ತೊಂದರೆಯಾಗಬಹುದು. ಹಾಗಾಗಿ ಈ ಬಗ್ಗೆ ಖಂಡಿತ ವಿಚಾರಿಸಿ.

ಐದನೇಯದಾಗಿ ನೀವು ಕೇಳಬೇಕಾದ ಪ್ರಶ್ನೆ ಎಂದರೆ, ನಿಮಗೆ ನನ್ನ ಬಗ್ಗೆ ಏನಾದರೂ ಕೇಳುವುದಿದೆಯೇ..? ಕೇಳುವುದಿದ್ದರೆ ಕೇಳಿ ಎಂದು. ಯಾಕಂದ್ರೆ ನೀವು ಅವರ ಬಗ್ಗೆ ತಿಳಿದುಕೊಳ್ಳುವುದಷ್ಟೇ ಅಲ್ಲದೇ, ನಿಮ್ಮ ಬಗ್ಗೆ ಹೇಳಬೇಕಾಗುತ್ತದೆ. ಹಾಗಾಗಿ ಇಬ್ಬರ ಅನಿಸಿಕೆಯೂ ಇಲ್ಲಿ ಬಹಳ ಮುಖ್ಯ. ಇನ್ನು ನಿಮಗೆ ಹೊಂದುವ ಹೆಣ್ಣು ಸಿಕ್ಕು, ಆಕೆ ನೋಡಲು ಅಂದವಾಗಿರದಿದ್ದಲ್ಲಿ, ಆಕೆ ಗುಣ ಉತ್ತಮವಿದ್ದಲ್ಲಿ, ನೀವು ಆಕೆಯನ್ನ ವಿವಾಹವಾಗಬಹುದು. ಆದ್ರೆ ಹುಡುಗಿ ನೋಡಲು ಅಂದವಾಗಿದ್ದು, ಆಕೆ ಹಣ ನೋಡಿ ಬರುವವಳಾಗಿದ್ದಲ್ಲಿ, ವೈವಾಹಿಕ ಜೀವನದಲ್ಲಿ ಸಮಸ್ಯೆ ಕಟ್ಟಿಟ್ಟಬುತ್‌ತಿ ಎನ್ನುತ್ತಾರೆ ಚಾಣಕ್ಯರು.

About The Author