Monday, December 23, 2024

Latest Posts

ಕಬ್ಜ ರೇಸ್‌ನಲ್ಲೇ ಇಲ್ವಾ..? ಹಿಂದೆ ಬಿದ್ರಾ ಆರ್ ಚಂದ್ರು..? ಸೈಲೆಂಟ್ ಯಾಕೆ..?

- Advertisement -

ಕೆಜಿಎಫ್ ರ‍್ತಿದ್ದ ಹಾಗೇ ಕನ್ನಡ ಚಿತ್ರಗಳ ಬಗ್ಗೆ ನಿರೀಕ್ಷೆ ಗರಿಗೆದರಿದೆ. ಹಾಗೆ ನೋಡಿದ್ರೆ ಕೆಜಿಎಫ್ ಕ್ರೇಜ್‌ನ್ನ ಯಾವ ಸಿನಿಮಾಗಳೂ ಎನ್‌ಕ್ಯಾಷ್ ಮಾಡಿಕೊಳ್ಳಲೇ ಇಲ್ಲ. ಕೆಜಿಎಫ್ ಜೊತೆ ಕಿಚ್ಚನ ವಿಕ್ರಾಂತ್ ರೋಣ ಟೀಸರ್ ಬರುತ್ತೆ ಅಂತ ನಿರೀಕ್ಷೆ ಇಟ್ಟರೂ ಬರಲಿಲ್ಲ. ಚಾರ್ಲಿ-೭೭೭ ಸಿನಿಮಾ ಕೂಡ ತಯಾರಿ ಮಾಡಿಕೊಳ್ಳೋದ್ರಲ್ಲಿ ಹಿಂದೆ ಬಿದ್ರಾ ಗೊತ್ತಿಲ್ಲ. ಆದ್ರೆ ಸದಾ ಅಲರ್ಟ್ ಆಗಿರೋ ಆರ್. ಚಂದ್ರು ಯಾಕೆ ಸೈಲೆಂಟ್ ಆದ್ರು ಅನ್ನೋದು ಸ್ಯಾಂಡಲ್‌ವುಡ್‌ನ ದೊಡ್ಡ ಕುತೂಹಲ.
ಹಾಗೆ ನೋಡಿದ್ರೆ ಕಬ್ಜ ಚಿತ್ರಕ್ಕೆ ಕಿಚ್ಚ ಸುದೀಪ್ ಭಾರ್ಗವ ಭಕ್ಷಿಯಾಗಿ ಎಂಟ್ರಿಕೊಟ್ಟಾಗಲೇ ಚಿತ್ರದ ಬಗ್ಗೆ ನಿರೀಕ್ಷೆ ಡಬಲ್ ಆಗಿದ್ದು. ಕಿಚ್ಚನ ಲುಕ್‌ಗೆ ಸಿನಿಪ್ರೇಮಿಗಳು ಫಿದಾ ಆದ್ರು. ಆದ್ರೆ ಕೆಜಿಎಫ್ ರಿಲೀಸ್ ನಂತ್ರ ಅತ್ಯಂತ ಹೆಚ್ಚು ನಿರೀಕ್ಷೆ ಮೂಡಿಸಿರೋ ಸಿನಿಮಾ ಯಾವ್ದು ಅಂದ್ರೆ ಎಲ್ಲರ ಬಾಯಲ್ಲೂ ವಿಕ್ರಾಂತ್ ರೋಣ, ಚಾರ್ಲಿ-೭೭೭, ಕ್ರಾಂತಿ, ಹೆಸರಿದೆಯೇ ಹೊರತು ಮಲ್ಟಿಸ್ಟಾರರ್ ಮಲ್ಟಿಕ್ರೋರರ್ ಕಬ್ಜ ಹೆಸರೇ ಇಲ್ಲ.
ಪ್ರೊಮೋಷನ್ ಮಾಡೋಕೆ ಅವಕಾಶ ಸಿಕ್ಕಾಗೆಲ್ಲ ಎದ್ದುಬಂದುಬಿಡೋ ಪ್ರಚಾರ ಚತುರ ಆರ್ ಚಂದ್ರು ಇಲ್ಯಾಕೆ ಸೈಲೆಂಟ್ ಆದ್ರು ಅಂಥ ಸ್ಯಾಂಡಲ್‌ವುಡ್ಡೇ ತಲೆಕೆಡಿಸಿಕೊಳ್ತಿದೆ. ವಿಕ್ರಾಂತ್ ರೋಣದಲ್ಲಿ ಕಿಚ್ಚ ಇರೋದ್ರಿಂದ ಅದರ ಜೊತೆ ಬರೋಣ ಅಂತ ಲೆಕ್ಕಾಚಾರ ಹಾಕ್ತಿದ್ದಾರಾ ಗೊತ್ತಿಲ್ಲ. ಆದ್ರೆ ಕಬ್ಜ ಚಿತ್ರವನ್ನೂ ಕೆಜಿಎಫ್ ಮತ್ತು ಅವನೇ ಶ್ರೀಮನ್ನಾರಾಯಣ ದೃಶ್ಯಗಳನ್ನೇ ಹೋಲುವಂತೆ ತೆಗೆದಿದ್ದು ಖಂಡಿತಾ ಇದೂ ದೊಡ್ಡ ಸ್ಕಿçÃನ್‌ನಲ್ಲಿ ಹವಾ ಎಬ್ಬಿಸೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಕಬ್ಜ ಶೂಟಿಂಗ್ ಎಲ್ಲಿದೆ..? ಏನಾಗ್ತಿದೆ ಮಾಹಿತಿಯೇ ಇಲ್ಲದೆ, ಉಪ್ಪಿ ಮತ್ತು ಕಿಚ್ಚನ ಫ್ಯಾನ್ಸ್ ಆರ್ ಚಂದ್ರು ಅವರನ್ನು ಹುಡುಕಾಡುವಂತಾಗಿರೋದAತೂ ಸುಳ್ಳಲ್ಲ..!

- Advertisement -

Latest Posts

Don't Miss