Saturday, July 5, 2025

Latest Posts

ಆರೋಗ್ಯಕರ ಸ್ಪೆಶಲ್ ಬಾದಾಮ್ ಲಡ್ಡು ರೆಸಿಪಿ..

- Advertisement -

ಕೆಲವರಿಗೆ ಸಿಹಿ ತಿಂಡಿ ತಿನ್ನಬೇಕು ಅಂತಾ ಅನ್ನಿಸುತ್ತೆ. ಆದ್ರೆ ಸಿಹಿ ತಿಂದ್ರೆ ಎಲ್ಲಿ ಶುಗರ್ ಬರತ್ತೋ ಅನ್ನೋ ಭಯ. ಇನ್ನು ಶುಗರ್ ಇದ್ದವರಿಗೂ ಸಿಹಿ ತಿನ್ನೋಕ್ಕೆ ಆಸೆ. ಆದ್ರೆ ಎಲ್ಲಿ ಶುಗರ್ ಹೆಚ್ಚಾಗತ್ತೆ ಅನ್ನೋ ಭಯ.. ಹಾಗಾಗಿ ನಾವಿಂದು ಆರೋಗ್ಯಕರ ಮತ್ತು ರುಚಿಕರ ಲಡ್ಡು ರೆಸಿಪಿ ತಂದಿದ್ದೇವೆ. ಈ ಲಡ್ಡುವಿನಲ್ಲಿ ಸಕ್ಕರೆ ಬಳಸಲಾಗಿಲ್ಲ. ಹಾಗಾದ್ರೆ ಈ ಲಡ್ಡು ತಯಾರಿಸೋದು ಹೇಗೆ..? ಈ ಲಡ್ಡು ತಯಾರಿಸಲು ಬೇಕಾಗುವ ಸಾಮಗ್ರಿಗಳೇನು ಅನ್ನೋದನ್ನ ನೋಡೋಣ ಬನ್ನಿ..

ಅರ್ಧ ಕಪ್ ಬಾದಾಮಿ, ಒಂದು ಕಪ್ ಕೊಬ್ಬರಿ ತುರಿ, ಎರಡು ಸ್ಪೂನ್ ಬೆಲ್ಲ, ಎರಡು ಸ್ಪೂನ್ ಜಜ್ಜಿ ಪುಡಿ ಮಾಡಿದ ಬಾದಾಮಿ, ಒಂದು ಸ್ಪೂನ್ ಒಣಗಿಸಿದ ರೋಸ್ ಪೆಟಲ್ ಇವಿಷ್ಟು ಬಾದಾಮ್ ಲಡ್ಡು ತಯಾರಿಸಲು ಬೇಕಾಗುವ ಸಾಮಗ್ರಿ.

ಈ ಲಡ್ಡು ತಯಾರಿಸಲು ಮೊದಲು ನಾವು ಬಾದಾಬ್ ಬೆಣ್ಣೆ ತಯಾರಿಸಬೇಕು. ಅದಕ್ಕಾಗಿ ಬಾದಾಮನ್ನ ಎಣ್ಣೆ, ತುಪ್ಪವಿಲ್ಲದೇ ಹುರಿದು, ಮಿಕ್ಸಿ ಜಾರ್‌ಗೆ ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿ. ಹೇಗೆ ಬ್ಲೆಂಡ್ ಮಾಡಬೇಕು ಅಂದ್ರೆ, ಬಾದಾಮ್ ಒಳಗಿನ ಎಣ್ಣೆ ಹೊರಬಂದು, ಬಾದಾಮ್ ಪುಡಿಗೆ ಮಿಕ್ಸ್ ಆಗುವಷ್ಟು. ಹೀಗೆ ಬಾದಾಮ್ ಪುಡಿ ಮತ್ತು ಅದರ ಎಣ್ಣೆ ಮಿಕ್ಸ್ ಆಗಿ, ಬಾದಾಮ್ ಪೇಸ್ಟ್ ರೆಡಿಯಾದಾಗಲೇ, ಬಾದಾಮ್ ಬೆಣ್ಣೆ ರೆಡಿಯಾಗೋದು. ಹಾಗಾಗಿ ಬಾದಾಮ್ ಹುರಿಯುವಾಗ ಮತ್ತು ಬ್ಲೆಂಡ್ ಮಾಡುವಾಗ ನೀರು, ತುಪ್ಪ, ಎಣ್ಣೆ, ಬೆಣ್ಣೆ ಏನನ್ನೂ ಬಳಸಬಾರದು.

ಇನ್ನು ಎರಡನೇಯದಾಗಿ ಒಣ ಕೊಬ್ಬರಿ ಬೆಣ್ಣೆ ತಯಾರಿಸಬೇಕು. ಒಣ ಕೊಬ್ಬರಿಯನ್ನು ತುರಿದು, ಅದನ್ನ ಕೂಡ ಮಿಕ್ಸಿ ಜಾರ್‌ಗೆ ಹಾಕಿ, ಏನನ್ನೂ ಹಾಕದೇ, ರುಬ್ಬಿ. ಹೀಗೆ ರುಬ್ಬುತ್ತ, ಒಣಕೊಬ್ಬರಿ ಮಿಶ್ರಣ ಮತ್ತು ಅದರ ಎಣ್ಣೆ ಮಿಕ್ಸ್ ಆಗಿ ಬೆಣ್ಣೆ ರೆಡಿಯಾಗುತ್ತದೆ. ಹೀಗೆ ರೆಡಿ ಮಾಡಿಟ್ಟುಕೊಂಡ ಬಾದಾಮ್ ಬಟರ್ ಮತ್ತು ಕೊಕೊನಟ್ ಬಟರ್‌ನಲ್ಲಿ, ಒಂದು ಕಪ್ ಕೊಕೊನಟ್ ಬಟರ್ ಮತ್ತು ಮೂರು ಸ್ಪೂನ್ ಬಾದಾಮ್ ಬಟರ್ ಹಾಕಿ ಮಿಕ್ಸ್ ಮಾಡಿ. ನಂತರ ಎರಡು ಟೇಬಲ್ ಸ್ಪೂನ್ ಬೆಲ್ಲ, ಎರಡು ಸ್ಪೂನ್ ಜಜ್ಜಿ ಪುಡಿ ಮಾಡಿದ ಬಾದಾಮ್, ಒಂದು ಸ್ಪೂನ್ ಒಣಗಿಸಿದ ರೋಸ್ ಪೆಟಲ್ ಹಾಕಿ ಮಿಕ್ಸ್ ಮಾಡಿ, ಲಾಡು ಕಟ್ಟಿದ್ರೆ, ಆರೋಗ್ಯಕರ ಸ್ಪೆಶಲ್ ಬಾದಾಮ್ ಲಡ್ಡು ರೆಡಿ.

- Advertisement -

Latest Posts

Don't Miss