Friday, July 11, 2025

Latest Posts

ನೀವು ಕಡಿಮೆ ಮಾತನಾಡುವವರಾ..? ಅಥವಾ ಮೌನಿಯಾ..? ಹಾಗಾದ್ರೆ ಈ ಸ್ಟೋರಿ ಓದಿ..

- Advertisement -

ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ಜೀವನ ಪಾಠವನ್ನು ಹೇಳಿದ್ದಾರೆ. ಹೇಗೆ ಇರಬೇಕು..? ವಿವಾಹವಾಗಬೇಕಾದರೆ ಯಾವ ವಿಚಾರದ ಬಗ್ಗೆ ತಿಳಿದುಕೊಳ್ಳಬೇಕು..? ವರ ವಧುವಿಗೆ ಮತ್ತು ವಧು ವರನಿಗೆ ಕೇಳಬೇಕಾದ ಪ್ರಶ್ನೆಗಳೇನು..? ಇತ್ಯಾದಿ ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ಮೌನಿಯಾಗಿರುವವರ ಬಗ್ಗೆ ಮತ್ತು ಹೆಚ್ಚು ಮಾತನಾಡುವವರ ಬಗ್ಗೆ ಕೆಲ ವಿಷಯಗಳನ್ನು ಹೇಳಿದ್ದಾರೆ. ಆ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..

ಅಗತ್ಯಕ್ಕಿಂತ ಹೆಚ್ಚು ಮಾತನಾಡುವವರು ಕಾಗೆಯ ಹಾಗೆ ಮತ್ತು ಅಗತ್ಯವಿದ್ದಷ್ಟು ಮಾತನಾಡುವವರು ಕೋಗಿಲೆಗೆ ಸಮ ಎಂದು ಚಾಣಕ್ಯರು ಹೇಳುತ್ತಾರೆ. ಹಾಗಂತ, ಕೆಲವರು ಪಟ ಪಟ ಅಂತಾ ಮಾತಾಡ್ತಾರೆ. ಅವರು ಕಾಗೆಗೆ ಸಮಾನವೆಂದು ಹೇಳಲಿಲ್ಲ. ಬದಲಾಗಿ ಅವಶ್ಯಕತೆಗಿಂತ ಹೆಚ್ಚು ಮಾತನಾಡುವುದು, ತಮ್ಮ ಬಗ್ಗೆ, ತಮ್ಮ ಮಕ್ಕಳ ಬಗ್ಗೆ, ಮನೆ ಮಂದಿಯ ಬಗ್ಗೆ ಕೊಚ್ಚಿಕೊಳ್ಳುವುದು. ತಮ್ಮ ಮನೆ ಜನರನ್ನು ಮತ್ತು ತಮ್ಮನ್ನು, ತಮ್ಮ ಕೆಲಸವನ್ನು ತಾವೇ ಅಗತ್ಯಕ್ಕಿಂತ ಹೆಚ್ಚು ಹೊಗಳಿಕೊಳ್ಳುವಂಥ ಜನರು ಕಾಗೆಗೆ ಸಮ ಎಂದಿದ್ದಾರೆ ಚಾಣಕ್ಯರು.

ಯಾಕಂದ್ರೆ ಕಾಗೆಯ ಕರ್ಕಶ ಶಬ್ಧ ಯಾರಿಗೂ ಹಿಡಿಸುವುದಿಲ್ಲ. ಅಂತೆಯೇ ಅಗತ್ಯಕ್ಕಿಂತ ಹೆಚ್ಚು ಮಾತನಾಡುವವರು ಯಾರಿಗೂ ಇಷ್ಟವಾಗುವುದಿಲ್ಲ. ಹಾಗೆ ಮಾತನಾಡುವವರಿಂದ ಯಾವಾಗ ಪಾರಾಗುತ್ತೇವೋ ಅಂತಾ ಎದುರಿನವರು ಕಾಯುತ್ತಿರುತ್ತಾರೆ. ಅದೇ ರೀತಿ ಕೋಗಿಲೆಯ ಶಬ್ಧ ಎಲ್ಲರಿಗೂ ಇಷ್ಟ. ಅಂತೆಯೇ ಕಡಿಮೆ ಮತ್ತು ಅಗತ್ಯಕ್ಕೆ ತಕ್ಕಷ್ಟು, ಅವಶ್ಯಕತೆ ಇರುವಷ್ಟು ಯಾರು ಮಾತನಾಡುತ್ತಾರೋ, ಅವರು ಎಲ್ಲರಿಗೂ ಅಚ್ಚು ಮೆಚ್ಚಾಗುತ್ತಾರೆ.

ಕಡಿಮೆ ಮಾತನಾಡುವುದು ಬುದ್ಧಿವಂತರ ಲಕ್ಷಣ. ಹಾಗಂತ ಎಲ್ಲ ಸಮಯದಲ್ಲೂ ಕಡಿಮೆ ಮಾತನಾಡಬಾರದು. ಎಲ್ಲಿ ಹೇಗೆ ಮಾತಿನ ಪೆಟ್ಟು ಕೊಡಬೇಕೋ ಅಲ್ಲಿ ಕೊಟ್ಟುಬಿಡಬೇಕು. ಅದನ್ನು ಬಿಟ್ಟು ಎದುರಿನವರು ಅವಮಾನಿಸಿದರೂ ನೀವು ಬಾಯಿಬಿಡದಿದ್ದರೇ, ಅದು ತಪ್ಪು. ಇನ್ನು ಕಡಿಮೆ ಮಾತನಾಡುವವರನ್ನು ಕಂಡು ಅವರ ಬಗ್ಗೆ ಹಲವರು ಅಪಹಾಸ್ಯ ಮಾಡುತ್ತಾರೆ. ಯಾಕಂದ್ರೆ ತಾವು ಏನೇ ಅಂದ್ರು ಅವರು ಬಯ್ಯುವುದಿಲ್ಲ ಅಂತಾ. ಆ ಸಮಯದಲ್ಲೂ ನೀವು ಮೌನಿಯಾಗಿರುವುದು ತಪ್ಪು. ಬದಲಾಗಿ ಅಲ್ಲಿ ಸರಿಯಾದ ಮಾತಿನ ಪೆಟ್ಟು ಕೊಡಬೇಕು.

ಇನ್ನು ಕಾಗೆಯನ್ನು ಹೆಚ್ಚು ಮಾತನಾಡುವವರಿಗೆ ಮತ್ತು ಕೋಗಿಲೆಯನ್ನು ಕಡಿಮೆ ಮಾತನಾಡುವರಿಗೆ ಯಾಕೆ ಹೋಲಿಸಲಾಗಿದೆ ಅಂದ್ರೆ, ಕಾಗೆಯ ಸ್ವರ ಕರ್ಕಶವಾಗಿದ್ದರೂ, ಅದು ದಿನಪೂರ್ತಿ ಕೂಗುತ್ತಲೇ ಇರುತ್ತದೆ. ಆದ್ರೆ ಕೋಗಿಲೆಯ ಸ್ವರ ಸುಂದರವಾಗಿದ್ದರೂ ಕೂಡ, ಅದು ಇಡೀ ದಿನ ಕೂಗುವುದಿಲ್ಲ. ಬದಲಾಗಿ ತನ್ನ ಸಮಯ ಬಂದಾಗ ಅಂದ್ರೆ ವಸಂತ ಮಾಸದಲ್ಲಿ, ಬೆಳಗ್ಗಿನ ಜಾವ ಮಾತ್ರ ಕೂಗುತ್ತದೆ. ಹಾಗಾಗಿ ನಮ್ಮ ಸಮಯ ಬಂದಾಗ ನಮ್ಮ ಮಾತನ್ನು ನಾವು ಮಾತನಾಡಬೇಕು ಅಂತಾರೆ ಚಾಣಕ್ಯರು.

- Advertisement -

Latest Posts

Don't Miss