ಮಡಿಕೇರಿ: ರಾಜ್ಯದಲ್ಲಿ ನಡೆಯುತ್ತಿರೋ ರಾಜಕೀಯ ಮೇಲಾಟಗಳಿಂದ ದೋಸ್ತಿ ನಾಯಕರು ಹೈರಾಣಾಗಿದ್ದಾರೆ. ಇದೀಗ ನಿಷ್ಠಾವಂತರನ್ನು ತಮ್ಮ ಬಳಿಯೇ ಉಳಿಸಿಕೊಳ್ಳೋದಕ್ಕೆ ಜೆಡಿಎಸ್ ಮುಂದಾಗಿದ್ದು ತನ್ನ ಶಾಸಕರಿಗಾಗಿ ರೆಸಾರ್ಟ್ ನಿಗದಿಪಡಿಸಿದ್ದು, ಈಗಾಗಲೇ ರೂಂಗಳನ್ನು ಕೂಡ ಬುಕ್ ಮಾಡಿದೆ.
ತೆರೆ ಮರೆಯಲ್ಲಿ ಬಿಜೆಪಿ ನೆಡೆಸ್ತಿರೋ ಆಪರೇಷನ್ ಕಮಲಕ್ಕೆ ಬೆದರಿದ ಮೈತ್ರಿ ನಾಯಕರು ಇದೀಗ ತಮ್ಮ ಬಳಿಯಿರೋ ಶಾಸಕರನ್ನು ಬಿಜೆಪಿ ಕೈಗೆ ಸಿಗದಂತೆ ಜೋಪಾನ ಮಾಡಲು ಹೊರಟಿದ್ದಾರೆ. ಇದಕ್ಕಾಗಿ ಜೆಡಿಎಸ್ ತನ್ನ ಶಾಸಕರಿಗೆ ರೆಸಾರ್ಟ್ ವಾಸ್ತವ್ಯಕ್ಕೆ ಸಿದ್ಧತೆ ನಡೆಸಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿಯ ಸುಂಟಿಕೊಪ್ಪದಲ್ಲಿರೋ ಪ್ಯಾಂಡಿಂಗ್ಟನ್ ರೆಸಾರ್ಟ್ ಬುಕ್ ಮಾಡಿದ್ದಾರೆ. ಸುಮಾರು 35 ಕೊಠಡಿಗಳನ್ನು ಬುಕ್ ಮಾಡಿರೋ ಜೆಡಿಎಸ್ ನಾಯಕರು ಶಾಸಕರನ್ನು ಸುಮಾರು 3 ದಿನಗಳ ಕಾಲ ಜೋಪಾನ ಮಾಡಲಿದ್ದಾರೆ.
ಇನ್ನು ಈ ಪ್ಯಾಂಡಿಂಗ್ಟನ್ ರೆಸಾರ್ಟ್ ದಟ್ಟ ಕಾಡಿನ ಮಧ್ಯೆ ಇರೋದ್ರಿಂದ ಜೆಡಿಎಸ್ ನಾಯಕರು ಇದೇ ರೆಸಾರ್ಟನ್ನು ಆಯ್ಕೆ ಮಾಡಿಕ್ಕೊಂಡಿದ್ದಾರೆ. ಇಲ್ಲಿ ಮೊಬೈಲ್ ಸಿಗ್ನಲ್ ಸಿಗದೇ ಇರೋದ್ರಿಂದ ಒಂದು ವೇಳೆ ಬಿಜೆಪಿ ಆಪರೇಷನ್ ಮಾಡೋದಕ್ಕೆಯತ್ನಿಸಿದ್ರೂ ತಮ್ಮ ಶಾಸಕರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಸಾಧ್ಯವಾಗೋದಿಲ್ಲ ಅನ್ನೋದು ಜೆಡಿಎಸ್ ಲೆಕ್ಕಾಚಾರವಾಗಿದೆ.
ಬಿಜೆಪಿ ನಾಯಕರಿಗೆ ಶಾಕ್..!ಮಿಸ್ ಮಾಡದೇ ಈ ವಿಡಿಯೋ ನೋಡಿ