ಲಕ್ಷಣ ಸಿರಿಯಲ್ ನಟಿ ವಿಜಯ ಲಕ್ಷ್ಮೀ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ನೀವು ಯಾವ ಸಮಯದಲ್ಲಿ ಸ್ಟಕ್ ಆಗಲು ಬಯಸುತ್ತೀರಿ..?
ಕಳೆದ ವರ್ಷ ನನ್ನ ಬರ್ತ್‌ಡೇ ಆಯ್ತು. ಈಗ ಮುಂದಕ್ಕೆ ಹೋಗ್ತಾ ಇದ್ದೀನಲ್ಲಾ, ಏಜ್ ಆಗ್ತಾ ಇದೆಯಲ್ಲ ಅಂತಾ ಬೇಜಾರಾಯ್ತು, ಆ ಬರ್ತ್‌ಡೇಗೆ ನಾನು ಸ್ಟಕ್ ಆಗ್ಬೇಕು ಅಂತಾ ಅನ್ಸ್ತಿದೆ.
ನಿಮಗೆ ನಿಕ್ ನೇಮ್ಸ್ ಎಷ್ಟಿದೆ..? ಆ ಹೆಸರು ಹೇಳಿ..
ನಮ್ಮ ಮನೆಯಲ್ಲಿ ನನ್ನನ್ನು ಪ್ರಣತಿ ಅಂತಾ ಕರೀಯುತ್ತಾರೆ. ಸ್ಕೂಲ್‌ನಲ್ಲಿ, ಸೆಟ್‌ನಲ್ಲಿ ನನ್ನನ್ನು ವಿಜಯ ಲಕ್ಷ್ಮೀ ಅಂತಾರೆ. ಹಾಗಾಗಿ ಹೆಚ್ಚಿನವರು ವಿಜಿ ಎಂದು ಕರೆಯುತ್ತಾರೆ. ಕೆಲವರು ಲಕ್ಷಣ, ನಕ್ಷತ್ರ ಅಂತಾನೂ ಕರೀತಾರೆ. ಹಾಗಾಗಿ 5 ಹೆಸರಿದೆ ನನಗೆ.
ಕಾಲೇಜ್ ಡೇಸ್ ನಲ್ಲಿ ನೀವು ಹೇಗಿದ್ರಿ..? ತರ್ಲೆ ಮಾಡೋದು, ಬಂಕ್ ಮಾಡೋದೆಲ್ಲಾ ಮಾಡ್ತಿದ್ರಾ..?
ತೀರಾ ಸಿನ್ಸಿಯರ್ ಅಲ್ಲಾ, ತೀರಾ ಜೋರಾಗಿರೋ ಹುಡುಗಿನೂ ಅಲ್ಲಾ. ಕೆಲವು ಸಲ ಬಂಕ್ ಹೊಡಿತಿದ್ದೆ. ತರ್ಲೆ ಎಲ್ಲಾ ಸ್ವಲ್ಪ ಸ್ವಲ್ಪ ಮಾಡ್ತಿದ್ದೆ. ಸ್ವಲ್ಪ ನಾಟಿ ಸ್ವಲ್ಪ ಸಿನ್ಸಿಯರ್ ಇದ್ದೆ ನಾನು.
ತುಂಬಾ ಜಾಸ್ತಿ ಹಣ ಇದ್ರೆ, ಮೊದಲು ತೆಗೆದುಕೊಳ್ಳುವ ವಸ್ತುಗಳೇನು..?
ನನಗೆ ಇಯರ್ ರಿಂಗ್ ಅಂದ್ರೆ ಇಷ್ಟ. ಅಟ್ರ್ಯಾಕ್ಟಿವ್ ಇರುವ ಇಯರ್ ರಿಂಗ್ಸ್ ತೊಗೋತಿನಿ. ನಂತರ ವಾಚ್ ತೊಗೋತಿನಿ.
ಯಾರಿಗಾದ್ರೂ, ಯಾವಾಗಲಾದ್ರೂ ಹಾಡು, ಕವನ ಬರ್ದಿದ್ದೀರಾ..?
ಇಲ್ಲಾ.. ಯಾರಿಗೂ ಬರ್ದಿಲ್ಲಾ..
ಸಾಂಗ್ ಹಾಡ್ತೀರಾ..?
ಹಾ.. ಕಾಲೇಜು ದಿನಗಳಲ್ಲಿ ಹಾಡ್ತಿದ್ದೆ. ದೀಪವೂ ನಿನ್ನದೇ, ಗಾಳಿಯೂ ನಿನ್ನದೇ…
ಹ್ಯಾಂಡ್ ಕ್ರಾಫ್ಟ್ ಮಾಡೋದು ಇಷ್ಟಾನಾ..? ಮಾಡಿದ್ದೀರಾ..?
ಕರ್ಚಿಫ್ ಮೇಲೆ ಗೊಂಬೆ ಬಿಡಿಸೋದು ಇಷ್ಟ. ಅದನ್ನು ಕಲಿಯಬೇಕು ಅಂತಾ ಆಸೆ ಇದೆ. ಅದನ್ನ ಒಮ್ಮೆ ಟ್ರೈ ಮಾಡಿದೀನಿ. ಆದ್ರೆ ಕರೆಕ್ಟ್ ಆಗಿ ಕಲಿತಿಲ್ಲ.
ಪಾಸಿಟಿವ್ ಆಗಿ ಅಥವಾ ನೆಗೆಟಿವ್ ಆಗಿ ಯಾವಾಗಲಾದ್ರೂ ಟ್ರೋಲ್ ಆಗಿದ್ದೀರಾ..?
ಪಾಸಿಟಿವ್ ಆಗಿ ಲಕ್ಷಣ ಸಿರಿಯಲ್ ವಿಷಯದಲ್ಲಿ ಟ್ರೋಲ್ ಆಗಿದ್ದೀನಿ. ಲಕ್ಷಣವಾಗಿದ್ದೀನಿ ಅೞತಾ ಟ್ರೋಲ್ ಆಗಿದ್ದೆ. ಅದನ್ನ ಬಿಟ್ರೆ, ನೀವು ಬೆಳ್ಳಗಿದ್ದೀರಿ ಅಂತಾ ತಿಳ್ಕೊಂಡಿದ್ದೆ ಅಂತಾ ಕೆಲವರು ಕಾಮೆಂಟ್ ಮಾಡಿದ್ದನ್ನ ಓದಿದ್ದೀನಿ.
ನಿಮ್ಮ ಹಿಡನ್ ಟ್ಯಾಲೆಂಟ್ ಏನು..?
ಹಾಡು ಹಾಡ್ತೀನಿ, ಡಾನ್ಸ್ ಮಾಡ್ತೀನಿ.
ಫ್ರೀಯಾಗಿದ್ದಾಗ, ಖುಷಿಯಾಗಿದ್ದಾಗ ಏನ್ ಮಾಡ್ತೀರಿ..?
ಹಾಡು ಹಾಡ್ತೀನಿ.. ನನ್ನ ಖುಷಿಯನ್ನ ಇನ್ನೊಬ್ಬರೊಂದಿಗೆ ಹಂಚಿಕೊಳ್ಳೋಕ್ಕೆ ಇಷ್ಟಪಡ್ತೀನಿ. ಹೆಚ್ಚು ಮಾತಾಡೋಕ್ಕೆ ಇಷ್ಟ ಪಡ್ತೀನಿ..
ಯಾವ ವಿಷಯದ ಬಗ್ಗೆ ಬುಕ್ ಬರಿಯಲು ಇಷ್ಟಪಡ್ತೀರಿ..?
ಪರಿಸರದ ಬಗ್ಗೆ ಬುಕ್ ಬರಿಯಲು ಇಷ್ಟಪಡ್ತೇನೆ. ನಾವು ಪರಿಸರಕ್ಕೆ ಹಾನಿ ಮಾಡುವುದನ್ನ, ನಷ್ಟ ಮಾಡುವುದನ್ನ ಆದಷ್ಟು ಕಡಿಮೆ ಮಾಡಬೇಕು ಅನ್ನೋ ಬಗ್ಗೆ ಬುಕ್ ಬರಿಯಲು ಇಷ್ಟವಿದೆ. ಭವಿಷ್ಯದಲ್ಲಿ ಅವಕಾಶ ಸಿಕ್ರೆ, ಈ ಬಗ್ಗೆ ಬುಕ್ ಬರಿಯುತ್ತೇನೆ.
ಭವಿಷ್ಯದಲ್ಲಿ ನಿಮ್ಮ ಹುಡುಗನೊಂದಿಗೆ ಫಸ್ಟ್ ಡೇಟಿಂಗ್ ಎಲ್ಲಿ ಹೋಗಲು ಇಷ್ಟ ಪಡುತ್ತೀರಿ..?
ಹಸಿರು ವಾತಾವರಣವಿರುವ ಜಾಗ ಅಂದ್ರೆ ಇಷ್ಟ. ಹಾಗಾಗಿ ಫಸ್ಟ್ ಡೇಟಿಂಗ್ ಊಟಿಗೆ ಹೋಗಲು ಇಚ್ಛಿಸುತ್ತೇನೆ. ಲಾಂಗ್ ಡ್ರೈವ್ ಚನಾಗಿರುತ್ತೆ.
ವರ್ಕ್ ಅಥವಾ ಪ್ಲೇ..?
ವರ್ಕ್..
ಪ್ರೀತಿ ಅಥವಾ ಸ್ನೇಹ..?
ಸ್ನೇಹ..
ಹಣ ಅಥವಾ ಸಂತೋಷ..?
ಸಂತೋಷ.. ಹಣ ಸಂತೋಷದ ಒಂದು ಭಾಗ ಅಷ್ಟೇ..
ಬೆಕ್ಕು ಅಥವಾ ನಾಯಿ..?
ಬೆಕ್ಕು.. ನನಗೆ ಬೆಕ್ಕು ಅಂದ್ರೆ ತುಂಬಾ ಇಷ್ಟ. ರೋಡಲ್ಲೆಲ್ಲಾದ್ರೂ ಬೆಕ್ಕು ಸಿಕ್ರೆ, ನಾನು ಅದನ್ನ ಮುದ್ದಾಡದೇ ಬಿಡಲ್ಲ. ನಾನು ಒಂದು ಬೆಕ್ಕು ಮತ್ತೊಂದು ನಾಯಿ ಸಾಕಿದ್ದೆ. ಅವೆರಡು ಸತ್ತೊಯ್ತು.. ಆವಾಗಿಂದ ಸಾಕುವುದಿಲ್ಲ..
ಬೇಸಿಗೆ ಅಥವಾ ಚಳಿಗಾಲ..?
ಚಳಿಗಾಲ..
ಬೆಳಿಗ್ಗೆ ಅಥವಾ ಸಂಜೆ..?
ಬೆಳಿಗ್ಗೆ..
ಉಪ್ಪು ಅಥವಾ ಸಕ್ಕರೆ..?
ಉಪ್ಪು..




