ನಮ್ಮ ಲಕ್ ಖುಲಾಯಿಸಬೇಕು. ನಾನು ಶ್ರೀಮಂತರಾಗಬೇಕು. ಲಕ್ಷ್ಮೀ ನಮ್ಮ ಮೇಲೆ ಕೃಪೆ ತೋರಬೇಕು ಅನ್ನೋ ಆಸೆ ಹಲವರಿಗೆ ಇರುತ್ತದೆ. ಅಂಥ ಆಸೆ ನಮ್ಮಲ್ಲಿದ್ದರೆ, ನಾವು ಕೆಲವು ವಸ್ತುಗಳನ್ನ ಮನೆಯಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಹಾಗಾದ್ರೆ ಯಾವ ವಸ್ತುಗಳನ್ನ ನಾವು ಮನೆಯಲ್ಲಿಟ್ರೆ, ನಮ್ಮ ಅದೃಷ್ಟ ಖುಲಾಯಿಸುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಒಂದು ಕಣ್ಣಿನ ತೆಂಗಿನಕಾಯಿ. ಸಾಮಾನ್ಯವಾಗಿ ನಾವು ಮನೆಯಲ್ಲಿ ಪ್ರತಿದಿನ ಬಳಸುವ ತೆಂಗಿನಕಾಯಿಯಲ್ಲಿ ಮುಕ್ಕಣ್ಣು ಇರುತ್ತದೆ. ತೆಂಗಿನಕಾಯಿ ಒಡೆದಾಗ, ಮೊದಲು ಮೂರು ಕಣ್ಣುಗಳುಳ್ಳ ತೆಂಗಿನಕಾಯಿಯ ಭಾಗವನ್ನೇ ಒಡೆಯಬೇಕು ಅಂತಾ ಹೇಳಲಾಗುತ್ತದೆ. ಯಾಕಂದ್ರೆ ಅದು ಮುತ್ತೈದೆ ಸಾವಿನ ಸಂಕೇತವಂತೆ. ಆದ್ರೆ ನಿಮಗೆ ಒಂಟಿ ಕಣ್ಣಿನ ತೆಂಗಿನಕಾಯಿ ಸಿಗೋದು ತುಂಬಾ ಕಷ್ಟ. ಹಾಗೇನಾದ್ರೂ ನಿಮಗೇನಾದ್ರೂ ಒಂಟಿ ಕಣ್ಣಿನ ತೆಂಗಿನಕಾಯಿ ಸಿಕ್ರೆ, ಅದನ್ನ ದೇವರ ಮುಂದಿರಿಸಿ. ಅದನ್ನ ಎಂದಿಗೂ ಉಪಯೋಗಿಸಬೇಡಿ. ಅದಕ್ಕೆ ಬಟ್ಟೆ ಕಟ್ಟಿ, ಅರಿಶಿನ ಕುಂಕುಮ ಹಚ್ಚಿ, ದೇವರ ಮುಂದಿಟ್ಟು ಪೂಜಿಸಿ. ಇದರಿಂದ ಅದೃಷ್ಟ ನಿಮ್ಮ ಪಾಲಾಗುತ್ತದೆ.
ಎರಡನೇಯದಾಗಿ ಶಂಖ. ನಿಮ್ಮ ಮನೆಯ ದೇವರ ಕೋಣೆಯಲ್ಲಿ ಸದಾ ಶಂಖವನ್ನಿಟ್ಟು ಪೂಜಿಸಿ. ಬೆಳಿಗ್ಗೆ ಪೂಜೆ ವೇಳೆಗೆ ಮತ್ತು ಸಂಜೆ ದೀಪ ಹಚ್ಚಿದ ಬಳಿಕ ಐದೈದು ಬಾರಿ ಶಂಖ ಊದಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೋಗಿ, ಧನಾತ್ಮಕ ಶಕ್ತಿಯ ತಾಕತ್ತು ಹೆಚ್ಚಾಗುತ್ತದೆ.
ಮೂರನೇಯದಾಗಿ ಕುಬೇರ ಮತ್ತು ಲಕ್ಷ್ಮೀಯ ಫೋಟೋವನ್ನು ಮನೆಯಲ್ಲಿರಿಸಿ. ಇವರಿಬ್ಬರು ಧನ, ಅದೃಷ್ಟದ ಸಂಕೇತ. ಹಾಗಾಗಿ ಇವರ ಫೋಟೋವನ್ನು ಇಟ್ಟು ಪ್ರತಿದಿನ ಕುಬೇರ ಮತ್ತು ಲಕ್ಷ್ಮೀಗೆ ಸಂಬಂಧಿಸಿದ ಶ್ಲೋಕವನ್ನು ಜಪಿಸಿ, ಪೂಜೆ ಮಾಡಿದರೆ ಅದೃಷ್ಟ ಖುಲಾಯಿಸುತ್ತದೆ.
ನಾಲ್ಕನೇಯದಾಗಿ ಹಳೆಯ ಕುದುರೆ ಲಾಳವನ್ನು ಮನೆಯ ಬಾಗಿಲಿಗೆ ಕಟ್ಟಿ. ಇದಕ್ಕೂ ಪ್ರತಿದಿನ ಪೂಜೆ ಸಲ್ಲಲಿ. ಆದರೆ ಹೊರಗಿನವರು ಇದನ್ನು ಮುಟ್ಟದಂತೆ ನೋಡಿಕೊಳ್ಳಿ. ಇದನ್ನು ಮನೆಯಲ್ಲಿ ಇಡುವುದರಿಂದ ಹಣಕಾಸಿನ ಸಮಸ್ಯೆ ಕಡಿಮೆಯಾಗುತ್ತದೆ. ಸಾಲ ಬಾಕಿ ಇದ್ದಲ್ಲಿ ಅದು ತೀರುತ್ತದೆ.
ನಾವು ಈ ಮೇಲೆ ಹೇಳಿದ ಎಲ್ಲ ವಸ್ತುಗಳೂ ದೇವರ ಕೋಣೆಯಲ್ಲೇ ಇರಲಿ. ಯಾಕಂದ್ರೆ ನೀವು ಮೈಲಿಗೆಯಾದಾಗ, ಮುಟ್ಟಾದಾಗ, ಸೂತಕದ ಸಮಯದಲ್ಲಿ ಮತ್ತು ಸ್ನಾನ ಮಾಡದ ಸಂದರ್ಭದಲ್ಲಿ ಇವುಗಳನ್ನು ಮುಟ್ಟಿ ಮೈಲಿಗೆ ಮಾಡಬಾರದು. ಹೀಗೆ ಮಾಡಿದ್ದಲ್ಲಿ, ಇದರ ಶಕ್ತಿ ಕಡಿಮೆಯಾಗುತ್ತದೆ. ಹಾಗಾಗಿ ಈ ವಸ್ತುಗಳು ದೇವರ ಕೋಣೆಯಲ್ಲೇ ಇರುವಂತೆ ನೋಡಿಕೊಳ್ಳಿ.

