ಮಧ್ಯಪ್ರದೇಶದ ದೇವಸ್ಥಾನವೊಂದರಲ್ಲಿ ಹುಂಡಿ ಕಳ್ಳ, ದೇವಿಗೆ ಕೈ ಮುಗಿದು, ಹುಂಡಿ ಕಳ್ಳತನ ಮಾಡಿ ಹೋದ ಘಟನೆ ನಡೆದಿದೆ. ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಸಿಕ್ಕಿದೆ.
ಜಬಲ್ಪುರ್‌ನ ಸುಖಾ ಎನ್ನುವ ಊರಿನ ಲಕ್ಷ್ಮೀದೇವಿ ದೇವಸ್ಥಾನವೊಂದರಲ್ಲಿ ಈ ಘಟನೆ ನಡೆದಿದ್ದು, ಕಳ್ಳ ಕಳ್ಳತನಕ್ಕೂ ಮುನ್ನವೇ. ದೇವಿಯಲ್ಲಿ ಕ್ಷಮೆ ಕೇಳಿದ್ದು, ಹುಂಡಿ ಕದ್ದೊಯ್ದಿದ್ದಾನೆ. ಬೆಳಗ್ಗಿನ ಜಾವ 4 ಗಂಟೆಗೆ ಈ ಘಟನೆ ನಡೆದಿದ್ದು, ಈ ದೇವಸ್ಥಾನ ಬರುವ ಭಕ್ತರು ದೇವಿಗೆ ಲಕ್ಷಾಂತರ ರೂಪಾಯಿ ಕಾಣಿಕೆಯನ್ನು ಹಾಕುತ್ತಾರೆ. ಹಾಗಾಗಿ ಇದು ಈ ಊರಿನ ಶ್ರೀಮಂತ ದೇವಸ್ಥಾನ ಅಂತಲೂ ಹೇಳಬಹುದು.
ಹಾಗಾಗಿ ಈ ಕಳ್ಳ, ಲಕ್ಷ್ಮೀ ದೇವಿಯ ಹುಂಡಿಯ ಮೇಲೆ ಕಣ್ಣು ಹಾಕಿದ್ದು, ಅದನ್ನು ಕದಿಯುವ ಪ್ಲಾನ್ ಮಾಡಿದ್ದಾನೆ. ಆದ್ರೆ ಈತ ಹುಂಡಿ ಕದಿಯುವ ದೃಶ್ಯ ದೇವಸ್ಥಾನದ ಗರ್ಭಗುಡಿಯಲ್ಲೇ ಇರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್‌ಯ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
#Watch – Thief prays with folded hands in front of goddess before stealing temple's donation box.#thief #goddess #Lakshmi #Sukha #Jabalpur #donationbox #temple #hindu #news #jabalpur #India #News #Viral #ViralVideo #madhyapradesh pic.twitter.com/X3YzsmSnAQ
— Free Press Journal (@fpjindia) August 10, 2022