ಬಿಗ್‌ಬಾಸ್ ಓಟಿಟಿ ಸೀ.1- ಕಿರಣ್ ಔಟ್ ಆಗಿದ್ದೇೆಕೆ..? ಸೋನು ಬಚಾವ್ ಆಗಿದ್ಹೇಗೆ..?

ಭಾರೀ ಕೂತುಹಲ ಮೂಡಿಸಿದ್ದ ಬಿಗ್‌ಬಾಸ್ ಓಟಿಟಿ ಮೊದಲ ಸೀಸನ್‌ನ ಮೊದಲ ಎಲಿಮಿನೇಶನ್ ನಡೆದಿದ್ದು, ಕಿರಣ್ ಯೋಗಿಶ್ವರ್ ಮನೆಯಿಂದ ಹೊರ ನಡೆದಿದ್ದಾರೆ. ಕಿರಣ್‌ಗೆ ಸರಿಯಾಗಿ ಕನ್ನಡ ಮಾತನಾಡಲು ಬರದ ಕಾರಣ, ಅವರು ಮನೆಯವರೊಂದಿಗೆ ಹೊಂದಿಕೊಳ್ಳಲು ಕಷ್ಟವಾಗಿತ್ತು. ಹಾಗಾಗಿ ಅವರನ್ನ ನಾಮಿನೇಟ್ ಮಾಡಲಾಗಿತ್ತು.

ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಸಾನ್ಯಾ ಅಯ್ಯರ್, ಸೋನುಗೌಡ, ಜಯಶ್ರೀ ಆರಾಧ್ಯ, ಸ್ಪೂರ್ತಿ ಗೌಡ, ಉದಯ್ ಸೂರ್ಯ, ಅರ್ಜುನ್ ರಮೇಶ್, ಅಕ್ಷತಾ ಕುಕ್ಕಿ, ಕಿರಣ್ ಯೋಗೇಶ್ವರ್ ಈ ವಾರ ನಾಮಿನೇಟ್ ಆಗಿದ್ದರು. ಆದರೆ ಕಿರಣ್‌ಗೆ ಕಡಿಮೆ ಓಟ್ ಬಂದ ಕಾರಣಕ್ಕೆ ಕಿರಣ್ ಬಿಗ್‌ಬಾಸ್ ಮನೆಯಿಂದ ಹೊರ ನಡೆದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್‌ ಆಗಿದ್ದ ಸೋನುಗೌಡ, ಈ ಬಾರಿ ಓಟು ಸಿಗದೇ ಹೊರ ನಡೆಯುತ್ತಾರೆಂದು ಹಲವರು ಊಹಿಸಿದ್ದರು. ಆದ್ರೆ ಹಾಗಾಗಲಿಲ್ಲ, ಸೋನು ಕಿರಣ್‌ಗಿಂತ ಹೆಚ್ಚು ಓಟ್ ಪಡೆದು, ಈ ಬಾರಿ ಬಚಾವ್ ಆಗಿದ್ದಾರೆ.

ಸೋನು ಖಾಸಗಿ ವೀಡಿಯೊವೊಂದು ಈ ಮೊದಲು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಮುಜುಗರವಾಗುವಂತೆ ಮಾಡಿತ್ತು. ಸೋನು ಬಿಗ್‌ಬಾಸ್‌ಗೆ ಬಂದ ಮೇಲೆ, ಈ ಸುದ್ದಿ ಸಖತ್ ಸೌಂಡ್ ಮಾಡಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ, ಸೋನು ಟ್ರೋಲ್ ಆಗಿದ್ದರು. ಆದರೂ ಕೂಡ ಅವರ ಫ್ಯಾನ್ಸ್ ಅವರಿಗೆ ಸಪೋರ್ಟ್ ಮಾಡಿ, ಅವರು ಎಲಿಮಿನೇಟ್ ಆಗದಂತೆ ಓಟ್ ಮಾಡಿದ್ದಾರೆ. ಅಂತೂ ಸೋನು ಮೊದಲ ವಾರ ಬಚಾವ್ ಆಗಿದ್ದಾರೆ.

About The Author