Friday, June 20, 2025

Latest Posts

ಮಂಗಳೂರು ಶೈಲಿಯ ಸಜ್ಜಿಗೆ ಬಜಿಲ್ ರೆಸಿಪಿ..

- Advertisement -

ಕೆಲವರಿಗೆ ಸಜ್ಜಿಗೆ- ಬಜಿಲ್ ಅಂದ್ರೆ ಯಾವ ತಿಂಡಿ ಅನ್ನೋ ಬಗ್ಗೆ ಗೊಂದಲವಿರುತ್ತದೆ. ಆದ್ರೆ ದಕ್ಷಿಣ ಕನ್ನಡದವರಿಗೆ ಸಜ್ಜಿಗೆ- ಬಜಿಲ್ ಬಹು ಪರಿಚಿತ ತಿನಿಸು. ಯಾಕಂದ್ರೆ ಸಜ್ಜಿಗೆ- ಬಜಿಲ್ ಅಂದ್ರೆ, ಉಪ್ಪಿಟ್ಟು ಮತ್ತು ಕಲಿಸಿದ ಅವಲಕ್ಕಿ ಎಂದರ್ಥ. ಹಾಗಾದ್ರೆ ಸಜ್ಜಿಗೆ- ಬಜಿಲ್ ಮಾಡೋಕ್ಕೆ, ಏನೇನು ಸಾಮಗ್ರಿ ಬೇಕು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಅವಲಕ್ಕಿಗೆ ಒಂದು ಕಪ್‌ ಅವಲಕ್ಕಿ, ಎರಡು ಹಸಿ ಮೆಣಸು, ಒಂದು ಸ್ಪೂನ್ ಜೀರಿಗೆ-ಕೊತ್ತೊಂಬರಿ ಕಾಳು, ಅರ್ಧ ಕಪ್ ಕೊಬ್ಬರಿ ತುರಿ, ಸಣ್ಣ ತುಂಡು ಬೆಲ್ಲ, ಒಂದು ಸ್ಪೂನ್ ಉದ್ದಿನ ಬೇಳೆ. ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು.

ಉಪ್ಪಿಟ್ಟು ಮಾಡಲು, ಒಂದು ಕಪ್ ರವೆ, ಒಂದುವರೆ ಕಪ್ ನೀರು, 2 ಸಣ್ಣಗೆ ಹೆಚ್ಚಿದ ನೀರುಳ್ಳಿ, ಒಂದು ಟೊಮೆಟೋ, ಒಂದು ಹಸಿ ಮೆಣಸು, ಚಿಕ್ಕ ತುಂಡು ಹಸಿ ಶುಂಠಿ, ಸಣ್ಣ ತುಂಡು ಬೆಲ್ಲ, 4 ಸ್ಪೂನ್ ಎಣ್ಣೆ, ಚಿಟಿಕೆ ಸಾಸಿವೆ, ಚಿಟಿಕೆ ಜೀರಿಗೆ, ಉದ್ದಿನ ಬೇಳೆ, ಕಡ್ಲೆಬೇಳೆ, ನಾಲ್ಕೈದು ಎಸಳು ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಕೊಂಚ ಸಕ್ಕರೆ.

ಮಾಡುವ ವಿಧಾನ: ಮೊದಲು ಅವಲಕ್ಕಿ ತಯಾರಿಸಿಕೊಳ್ಳಿ. ಒಂದು ಮಿಕ್ಸಿ ಜಾರ್‌ಗೆ ಹಸಿಮೆಣಸು, ಜೀರಿಗೆ, ಕೊತ್ತೊಂಬರಿ ಕಾಳು, ಉಪ್ಪು, ಕೊಬ್ಬರಿ ತುರಿ ಹಾಕಿ, ತರಿತರಿಯಾಗಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಅವಲಕ್ಕಿಗೆ ಸೇರಿಸಿ, ಇದಕ್ಕೆ ಬೆಲ್ಲ, ಈರುಳ್ಳಿ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿದ್ರೆ ಅವಲಕ್ಕಿ ರೆಡಿ.

ಈಗ ಉಪ್ಪಿಟ್ಟು ತಯಾರಿಸಿ. ಒಂದು ಪ್ಯಾನ್‌ಗೆ ಕೊಂಚ ಎಣ್ಣೆ ಹಾಕಿ, ರವೆ ಹುರಿದು ಕೊಳ್ಳಿ. ಇದನ್ನು ಒಂದು ಪ್ಲೇಟ್‌ಗೆ ವರ್ಗಾಯಿಸಿ. ಈಗ ಅದೇ ಪ್ಯಾನ್‌ಗೆ ಎಣ್ಣೆ, ಸಾಸಿವೆ, ಜೀರಿಗೆ, ಕಡ್ಲೆಬೇಳೆ, ಉದ್ದಿನ ಬೇಳೆ, ಕರಿಬೇವು, ಹಸಿ ಮೆಣಸು ಸೇರಿಸಿ ಹುರಿಯಿರಿ, ನಂತರ ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿ. ಇದಾದ ಬಳಿಕ ಟೊಮೆಟೋ ಹಾಕಿ ಹುರಿದು, ನೀರು ಸೇರಿಸಿ, ಪ್ಲೇಟ್ ಮುಚ್ಚಿ ಚೆನ್ನಾಗಿ ಕುದಿಸಿ. ನೀರು ಕುದಿ ಬಂದ ಬಳಿಕ ಇದಕ್ಕೆ ಉಪ್ಪು ಮತ್ತು, ರವೆ ಸೇರಿಸಿ, ಉಪ್ಪಿಟ್ ತಯಾರಿಸಿ. ಬೇಕಾದಲ್ಲಿ ಇದರ ಮೇಲೆ ಕೊಬ್ಬರಿ ತುರಿ ಮತ್ತು ಕೊತ್ತೊಂಬರಿ ಸೊಪ್ಪು ಸೇರಿಸಿಕೊಳ್ಳಬಹುದು.

- Advertisement -

Latest Posts

Don't Miss