Friday, September 20, 2024

Latest Posts

ಈ 7 ಲಕ್ಷಣಗಳಿಂದಲೇ ನೀವು ಯಶಸ್ವಿಯಾಗುತ್ತೀರೋ, ಇಲ್ಲವೋ ಎಂದು ತಿಳಿಯಬಹುದು- ಭಾಗ 1

- Advertisement -

ಯಾರಿಗೇ ಆಗಲಿ ಜೀವನದಲ್ಲಿ ಯಶಸ್ಸು ಕಾಣೋದು ತುಂಬಾನೇ ಮುಖ್ಯ. ಆದ್ರೆ ನೀವು ಯಶಸ್ವಿಯಾಗಲು ಪ್ರಯತ್ನವೇ ಪಡದೇ, ಯಶಸ್ವಿಯಾಗಬೇಕು ಅಂದ್ರೆ ಹೇಗೆ ಸಾಧ್ಯ..? ಹಾಗಾಗಿ ನಿಮ್ಮಲ್ಲಿರುವ 7 ಲಕ್ಷಣಗಳು ನೀವು ಜೀವನದಲ್ಲಿ ಯಶಸ್ವಿಯಾಗುತ್ತೀರೋ, ಇಲ್ಲವೋ ಅನ್ನೋ ಬಗ್ಗೆ ಹೇಳುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಮೊದಲನೇಯದಾಗಿ ನಿಮ್ಮ ಯಶಸ್ಸಿನ ಹಾದಿಯಲ್ಲಿ ಯಾವುದೇ ಸಮಸ್ಯೆ ಅಡ್ಡ ಬಂದರೂ ಅದನ್ನು ಹಿಮ್ಮೆಟ್ಟಿ ನಿಲ್ಲುವ ತಾಕತ್ತು ನಿಮ್ಮಲ್ಲಿರಬೇಕು. ಒಮ್ಮೆ ಓರ್ವ ಯುವಕ, ಓರ್ವ ಶ್ರೀಮಂತ ಮನೆಗೆ ಹೋಗಿದ್ದ. ಅಲ್ಲಿ ಮಾತನಾಡುತ್ತ, ನೀವೆಷ್ಟು ಶ್ರೀಮಂತರಿದ್ದೀರಿ. ನಿಮ್ಮ ಬಳಿ ಎಷ್ಟು ಚೆಂದದ ಬಂಗಲೆ ಇದೆ, ಕಾರ್ ಇದೆ, ನಿಮ್ಮ ಕುಟುಂಬ ಎಷ್ಟು ಖುಷಿ ಖುಷಿಯಾಗಿ, ನೆಮ್ಮದಿಯಿಂದಿದೆ. ಇದು ಹೇಗೆ ಸಾಧ್ಯವಾಯಿತು..? ನೀವು ಹೇಗೆ ಶ್ರೀಮಂತರಾದ್ರಿ..? ಎಂದು ಕೇಳುತ್ತಾನೆ.

ನಿಮ್ಮ ಕಾನ್ಫಿಡೆನ್ಸ್ ಕಡಿಮೆಯಾಗುವುದು ಈ ಕಾರಣದಿಂದಲೇ..- ಭಾಗ 1

ಆಗ ಆ ಶ್ರೀಮಂತ ಆ ಯುವಕನನ್ನು ಕರೆದುಕೊಂಡು ಸ್ವಿಮ್ಮಿಂಗ್ ಫೂಲ್ ಬಳಿ ಕರೆದುಕೊಂಡು ಹೋಗಿ, ನಿನಗೆ ಈ ನೀರಿನಲ್ಲಿ ಏನು ಕಾಣುತ್ತಿದೆ ಎಂದು ಕೇಳುತ್ತಾನೆ. ಆಗ ಆ ಯುವಕ ಏನೂ ಇಲ್ಲವೆನ್ನುತ್ತಾನೆ. ಆಗ ಶ್ರೀಮಂತ ಯುವಕನ ಮುಖವನ್ನು ನೀರಿನಲ್ಲಿ ಅದ್ದಿಬಿಡುತ್ತಾನೆ. ಕೊನೆಗೆ ಯುವಕ ಒದ್ದಾಡಿದ ಬಳಿಕ, ಅವನ ಮುಖವನ್ನು ಆ ನೀರಿನಿಂದ ಹಿಂದೆ ತೆಗೆಯುತ್ತಾನೆ. ನೀನು ಈಗ ಹೇಗೆ ಒದ್ದಾಡಿದೆಯೋ, ನಾನು ಅದೇ ರೀತಿ ಯಶಸ್ಸು ಗಳಿಸಲು ಜೀವನದಲ್ಲಿ ಒದ್ದಾಡಿದ್ದೇನೆ. ಆಮೇಲೆ ನನಗೆ ಈ ಶ್ರೀಮಂತಿಕೆ, ನೆಮ್ಮದಿ, ಖುಷಿ ಸಿಕ್ಕಿತು ಎನ್ನುತ್ತಾನೆ.

ಇದರ ಅರ್ಥವೇನೆಂದರೆ, ನಾವು ಯಶಸ್ಸು ಕಾಣುವಾಗ, ನಮ್ಮ ಹಾದಿಯಲ್ಲಿ ಅಡ್ಡ ಬರುವ ಎಲ್ಲ ಕಷ್ಟವನ್ನು ಮೆಟ್ಟಿನಿಂತು, ಮುಂದೆ ಹೋಗಲು ಪ್ರಯತ್ನಿಸಬೇಕು. ಆ ಕಾನ್ಫಿಡೆನ್ಸ್ ನಿಮ್ಮಲ್ಲಿ ಇಲ್ಲವೆಂದಲ್ಲಿ, ನೀವು ಯಶಸ್ವಿಯಾಗಲು ಸಾಧ್ಯವಿಲ್ಲ.

ನಿಮ್ಮ ಕಾನ್ಫಿಡೆನ್ಸ್ ಕಡಿಮೆಯಾಗುವುದು ಈ ಕಾರಣದಿಂದಲೇ..- ಭಾಗ 2

ಎರಡನೇಯದಾಗಿ ಕಲಿಯುವುದನ್ನು ನಿಲ್ಲಿಸಬೇಡಿ. ಪ್ರಯತ್ನಿಸುವುದನ್ನು ನಿಲ್ಲಿಸಬೇಡಿ. ನೀವು ಉತ್ತಮ ಕಚೇರಿಯಲ್ಲಿ, ಉತ್ತಮ ಸಂಬಳಕ್ಕೆ ಕೆಲಸ ಮಾಡುತ್ತೀದ್ದೀರಿ ಎಂದಿಟ್ಟುಕೊಳ್ಳಿ. ನೀವು ಇನ್ನೂ ಉತ್ತಮವಾಗಿ ಕೆಲಸ ಮಾಡಲು ಕಲಿಯದಿದ್ದಲ್ಲಿ, ಅಥವಾ ನೀವು ಇನ್ನೂ ಉತ್ತಮವಾಗಿ ಕೆಲಸ ಮಾಡಲು ಪ್ರಯತ್ನಿಸದಿದ್ದಲ್ಲಿ, ಆ ಸಂಬಳಕ್ಕೆ ಸೀಮಿತವಾಗಿರುತ್ತೀರಿ. ಆ ಕಂಪನಿಗೇ ಸೀಮಿತವಾಗಿರುತ್ತೀರಿ. ಅದೇ ಪೊಸಿಷನ್‌ನಲ್ಲೇ ಇರುತ್ತೀರಿ. ನೀವು ಭಡ್ತಿ ಹೊಂದಲು ಸಾಧ್ಯವಾಗುದಿಲ್ಲ. ಹಾಗಾಗಿ ಪ್ರಯತ್ನಿಸುವುದನ್ನು ನಿಲ್ಲಿಸಬೇಡಿ.

ಮೂರನೇಯದಾಗಿ ನಿಮ್ಮ ಪರ್ಸನಲ್ ಪ್ರಾಬ್ಲಮ್‌ ನಿಮ್ಮ ಯಶಸ್ಸಿಗೆ ಧಕ್ಕೆ ತಾರದಂತೆ ನೋಡಿಕೊಳ್ಳಿ. ಮನುಷ್ಯ ಅಂದಮೇಲೆ ಅವನಿಗೆ ಹತ್ತು ಹಲವು ಸಮಸ್ಯೆಗಳಿರುತ್ತದೆ. ಮನೆಯಲ್ಲಿ ಜಗಳ, ಪತ್ನಿಯೊಂದಿಗೆ ಉತ್ತಮವಲ್ಲದ ಸಂಬಂಧ, ಅಣ್ಣ ತಮ್ಮ- ಅಪ್ಪ ಅಮ್ಮನೊಂದಿಗೆ ಜಗಳ, ಅಥವಾ ಬೇರೆ ವಿಷಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇರುತ್ತದೆ. ಆ ಸಮಸ್ಯೆಯನ್ನು ಮನೆಯಲ್ಲೇ ಬಿಟ್ಟು ಬಿಡಿ. ಅದು ನಿಮ್ಮ ಕೆಲಸಕ್ಕೆ ತೊಂದರೆ ನೀಡದಿರುವಂತೆ ನೋಡಿಕೊಳ್ಳಿ. ಯಾಕಂದ್ರೆ ಕೆಲಸದಲ್ಲಿ ನಿಮ್ಮ ವಯಕ್ತಿಕ ವಿಷಯ ತಂದರೆ, ನೀವು ಯಶಸ್ವಿಯಾಗಲು ಸಾಧ್ಯವೇ ಇಲ್ಲ.

ಉಳಿದ ವಿಷಯದ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss