Saturday, July 5, 2025

Latest Posts

ಪತಿ ಪತ್ನಿ ಒಂದೇ ತಟ್ಟೆಯಲ್ಲಿ ಯಾಕೆ ಊಟ ಮಾಡಬಾರದು..?

- Advertisement -

ಪತಿ- ಪತ್ನಿ ಸಂಬಂಧ ಅಂದ್ರೆ ಉತ್ತಮವಾದ ಸಂಬಂಧ. ಇಂಥ ಸಂಬಂಧ ಇನ್ನೂ ಉತ್ತಮವಾಗಿರಬೇಕು. ಮತ್ತು ಪತಿ- ಪತ್ನಿ ಮಧ್ಯೆ ಬಿರುಕು ಬರಬಾರದು ಅಂತಿದ್ರೆ, ಒಂದೇ ತಟ್ಟೆಯಲ್ಲಿ ಊಟ ಮಾಡಬಾರದು ಅಂತಾ ಹೇಳಲಾಗಿದೆ. ಈ ಬಗ್ಗೆ ಭೀಷ್ಮ ಪಿತಾಮಹರು ಹೇಳಿದ್ದು, ಯಾಕೆ ಪತಿ- ಪತ್ನಿ ಒಂದೇ ತಟ್ಟೆಯಲ್ಲಿ ಊಟ ಮಾಡಬಾರದು ಅಂತಾ ಹೇಳಿದ್ದಾರೆ.

ಎಂಥ ಮನೆಯಲ್ಲಿ ಹೆಣ್ಣು ಮಕ್ಕಳ ಜನನವಾಗುತ್ತದೆ..?

ಯಾಕಂದ್ರೆ ಕೆಲವರಲ್ಲಿ ಒಂದೇ ತಟ್ಟೆಯಲ್ಲಿ ಊಟ ಮಾಡಿದ್ರೆ, ಪ್ರೀತಿ ಹೆಚ್ಚುತ್ತದೆ ಅಂತಾ ಹೇಳಲಾಗುತ್ತೆ. ಹಾಗಾಗಿ ಇಂದಿನ ಪೀಳಿಗೆಯಲ್ಲಿ ಹಲವರು ಒಂದೇ ತಟ್ಟೆಯಲ್ಲಿ ತಿನ್ನುತ್ತಾರೆ. ಆದ್ರೆ ಇದು ಮನೆಗೆ ದರಿದ್ರ ತರುತ್ತದೆ. ಪತಿ-ಪತ್ನಿ ಮಧ್ಯೆ ಜಗಳ ಹೆಚ್ಚುತ್ತದೆ. ಈ ಬಗ್ಗೆ ಯುಧಿಷ್ಠಿರನಿಗೆ ಭೀಷ್ಮ ಪಿತಾಮಹ ವಿವರಿಸಿದ್ದರು. ಮಹಾಭಾರತ ಯುದ್ಧದ ವೇಳೆ ಭೀಷ್ಮ ಪಿತಾಮಹ, ಶರ ಶಯ್ಯದ ಮೇಲೆ ಮಲಗಿದ್ದಾಗ, ಯುಧಿಷ್ಟಿರ ಅವರ ಬಳಿ, ಜೀವನ ಪಾಠ ಕೇಳಲು ಬಂದಿದ್ದ. ಆಗ ಭೀಷ್ಮರು ಭೋಜನದ ಬಗ್ಗೆಯೂ ಮಾಹಿತಿ ನೀಡಿದ್ದರು.

ಈ ದೇವಸ್ಥಾನಗಳಿಗೆ ಪುರುಷರು ಹೋಗುವಂತಿಲ್ಲ..

ನೀವು ಭೋಜನಕ್ಕೆ ಗೌರವ ನೀಡಬೇಕು. ಭೋಜನ ಬಡಿಸುವ ಮುನ್ನವೇ, ತಟ್ಟೆಯ ಮುಂದೆ ಬಂದು ಕುಳಿತುಕೊಳ್ಳಬೇಕು. ಊಟ ಬಡಿಸಿಟ್ಟು, ಅದನ್ನು ಕಾಯಿಸಿ. ನಂತರ ಬಂದು ಊಟ ಮಾಡಬಾರದು. ಇದು ಅನ್ನಪೂರ್ಣೆಗೆ ಮಾಡುವ ಅವಮಾನ ಮತ್ತು ಇದರಲ್ಲಿ ಹಲವು ಕೀಟಾಣು ಬಂದು ಕೂರುತ್ತದೆ. ಹಾಗಾಗಿ ಊಟ ಬಡಿಸಿದ ತಕ್ಷಣ ಊಟ ಮಾಡಬೇಕು ಎಂದಿದ್ದಾರೆ ಭೀಷ್ಮರು.

ಕೋಪ ಬಂದಾಗ ಪತಿ-ಪತ್ನಿ ಅನುಸರಿಸಬೇಕಾದ 2 ನಿಯಮಗಳಿದು..

ಇನ್ನು ಮನೆಯಲ್ಲಿ ಊಟ ಮಾಡುವ ವೇಳೆ, ಮನೆ ಮಂದಿಯೆಲ್ಲ ಕುಳಿತು ಊಟ ಮಾಡಬೇಕು. ಒಬ್ಬೊಬ್ಬರು ಒಂದೊಂದು ಸಮಯಕ್ಕೆ ಊಟ ಮಾಡಬಾರದು ಎಂದಿದ್ದಾರೆ ಭೀಷ್ಮರು. ಯಾಕಂದ್ರೆ ನೀವು ಒಟ್ಟುಗೂಡಿ ಊಟ ಮಾಡುವುದರಿಂದ, ನಿಮ್ಮ ಮನೆಯಲ್ಲಿ ಲಕ್ಷ್ಮೀಯ ಪ್ರವೇಶವಾಗುತ್ತದೆ. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರುತ್ತದೆ.

ಪನೀರ್ ತಿನ್ನುವ ಮುನ್ನ ಹುಷಾರ್…! ಕಲಬೆರಕೆಯಾಗುತ್ತಿದೆ ಪನೀರ್..?!

ಇನ್ನು ಪತಿ- ಪತ್ನಿ ಒಂದೇ ತಟ್ಟೆಯಲ್ಲಿ ಊಟ ಮಾಡುವುದರಿಂದ, ಇಬ್ಬರ ಗುಣವೂ ಒಂದೇ ಆಗುತ್ತದೆ. ಒಬ್ಬರಿಗೆ ಕೋಪವಿದ್ದರೆ, ಆ ಕೋಪ ಇನ್ನೊಬ್ಬರಿಗೆ ಬರುತ್ತದೆ. ಒಬ್ಬರಿಗೆ ದುರ್ಬುದ್ಧಿ ಇದ್ದರೆ, ಅದು ಕೂಡ ಇನ್ನೊಬ್ಬರಿಗೆ ಬರುತ್ತದೆ. ಇದೇ ಜಾಗದಲ್ಲಿ ಪ್ರೀತಿ, ಕಾಳಜಿಯ ಭಾವನೆ ಇದ್ದರೆ, ಅದು ಕೂಡ ಬರುತ್ತದೆ. ಆದ್ರೆ ಇಬ್ಬರಲ್ಲೂ ಕೋಪ, ಅಸೂಯೆ ಇದ್ದರೆ, ನಿಮ್ಮ ನೆಮ್ಮದಿಯೇ ಹಾಳಾಗುತ್ತದೆ. ಮತ್ತು ಹೀಗೆ ಪತಿ- ಪತ್ನಿ ಒಂದೇ ತಟ್ಟೆಯಲ್ಲಿ ಊಟ ಮಾಡಿದರೆ, ಮನೆಯ ನೆಮ್ಮದಿ ಹಾಳಾಗುತ್ತದೆ ಎಂದಿದ್ದಾರೆ ಭೀಷ್ಮರು.

- Advertisement -

Latest Posts

Don't Miss