Tuesday, November 18, 2025

Latest Posts

ಸ್ನಾನ ಮಾಡದೇ ಅಡುಗೆ ಮಾಡಿದ್ರೆ ಏನಾಗತ್ತೆ ಗೊತ್ತಾ..?

- Advertisement -

ನಮ್ಮಲ್ಲಿ ಹೆಚ್ಚಿನವರು ಸ್ನಾನ ಮಾಡದೇನೇ ಅಡುಗೆ ಮಾಡೋದು. ಇದಕ್ಕೆ ಹಲವಾರು ಕಾರಣಗಳು ಮತ್ತು ತೊಂದರೆಗಳಿರುತ್ತದೆ. ಬೆಳಿಗ್ಗೆ ಬೇಗ ಬೇಗ ತಿಂಡಿ ರೆಡಿ ಮಾಡಬೇಕು. ಪತಿ- ಮಕ್ಕಳು ಆಫೀಸಿಗೆ ಹೊರಡುತ್ತಾರೆ. ಅವರಿಗೆಲ್ಲ ರೆಡಿ ಮಾಡಿಕೊಡಬೇಕಂದ್ರೆ, ಸ್ನಾನ ಎಲ್ಲಾ ಮಾಡಿ, ತಿಂಡಿ ರೆಡಿ ಮಾಡೋಕ್ಕೆ ಕಷ್ಟ ಆಗತ್ತೆ. ಇನ್ನು ಕೆಲವಡೆ ಒಲೆಗೆ ಬೆಂಕಿ ಹಾಕಿದಾಗಲೇ, ನೀರು ಬಿಸಿಯಾಗೋದು. ಹೀಗೆ ಇತ್ಯಾದಿ ಸಮಸ್ಯೆಗಳಿರುತ್ತದೆ. ಆದ್ರೆ ಸನಾತನ ಧರ್ಮದ ಪದ್ಧತಿ ಪ್ರಕಾರ, ಹೆಣ್ಣು ಸ್ನಾನ ಮಾಡಿಯೇ, ಅಡುಗೆ ಮಾಡಬೇಕಂತೆ. ಹಾಗಾದ್ರೆ ಸ್ನಾನ ಮಾಡದೇ ಅಡುಗೆ ಮಾಡಿದ್ರೆ ಏನಾಗತ್ತೆ..? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಅಡುಗೆ ಮನೆ ಅಂದ್ರೆ ಬರೀ ತಿನ್ನೋ ವಸ್ತು ಇರೋ ಕೋಣೆಯಷ್ಟೇ ಅಲ್ಲ, ಇಲ್ಲಿ ಅನ್ನಪೂರ್ಣೆ ವಾಸಿಸುತ್ತಾಳೆ. ಹಾಗಾಗಿ ಅಡುಗೆ ಕೋಣೆಯನ್ನ ಸರಿಯಾಗಿ ಕ್ಲೀನ್ ಮಾಡಬೇಕು ಅಂತಾ ಹೇಳೋದು. ಅಲ್ಲದೇ ನಾವು ಈಗಾಗಲೇ ನಿಮಗೆ ಅಡುಗೆ ಕೋಣೆಗೆ ಚಪ್ಪಲಿ ಹಾಕಿಕೊಂಡು ಹೋಗೋದು ಎಂಥ ತಪ್ಪು ಅನ್ನೋ ಬಗ್ಗೆ ಹೇಳಿದ್ದೇವೆ. ಹೀಗೆ ಮಾಡೋದ್ರಿಂದ ಅನ್ನಪೂರ್ಣೆಗೆ ಅವಮಾನ ಮಾಡಿದ ಹಾಗಾಗುತ್ತದೆ. ಹಾಗಾಗಿ ಅಡುಗೆ ಕೋಣೆಗೆ ಎಂದಿಗೂ ಚಪ್ಪಲಿ ಧರಿಸಿ ಹೋಗಬೇಡಿ.

ಯಾರೇ ಆಗಲಿ ಈ 7 ತಪ್ಪುಗಳನ್ನು ಎಂದಿಗೂ ಮಾಡಬೇಡಿ..

ಸ್ನಾನ ಮಾಡಿಯೇ ಅಡುಗೆ ಮಾಡಬೇಕು. ಸ್ನಾನ ಮಾಡಿಯೇ ತಿಂಡಿ ತಿನ್ನಬೇಕು ಅನ್ನೋ ನಿಯಮವಿದೆ. ಯಾಕಂದ್ರೆ ಯಾರು ಸ್ನಾನ ಮಾಡಿ ಅಡುಗೆ ಮಾಡುವುದಿಲ್ಲವೋ, ಅಂಥವರ ಮನೆಯಲ್ಲಿ ಎಂದಿಗೂ ನೆಮ್ಮದಿ ಇರುವುದಿಲ್ಲ. ಯಾವಾಗಲೂ ಜಗಳವಾಗುತ್ತದೆ. ಯಾವಾಗಲೂ, ಯಾರದ್ದಾದರೂ ಆರೋಗ್ಯ ಹಾಳಾಗುತ್ತಲೇ ಇರುತ್ತದೆ. ಆ ಮನೆಯಲ್ಲಿ ದುಃಖ ಆವರಿಸಿಯೇ ಇರುತ್ತದೆ. ಹಾಗಾಗಿ ಸ್ನಾನ ಮಾಡಿಯೇ ಅಡುಗೆ ಮಾಡಬೇಕು ಅಂತಾರೆ ಹಿರಿಯರು.

ಮೊದಲ ಬಾರಿ ನವರಾತ್ರಿ ವೃತ ಮಾಡಿದವರು ಯಾರು ಗೊತ್ತಾ..?- ಭಾಗ 2

ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ರಾತ್ರಿಯಿಡೀ ಮಲಗಿದ್ದಾಗ, ನಮ್ಮ ದೇಹದಲ್ಲಿ ಕೀಟಾಣುಗಳು ತುಂಬಿರುತ್ತದೆ. ಹಾಗಾಗಿಯೇ ಬೆಳಿಗ್ಗೆ ಎದ್ದ ಬಳಿಕ ಸ್ನಾನ ಮಾಡಿಯೇ ಮುಂದಿನ ಕೆಲಸ ಮಾಡಬೇಕು ಅಂತಾ ಹೇಳುವುದು. ಹೀಗೆ ಸ್ನಾನ ಮಾಡಿ, ಅಡುಗೆ- ಪೂಜೆ ಮಾಡಿದಾಗಲೇ, ಮಾಡಿದ ಅಡುಗೆಗೆ ಮತ್ತು ಪೂಜೆ ಸಫಲವಾಗುತ್ತದೆ. ಅದರಿಂದ ಆರೋಗ್ಯಾಭಿವೃದ್ಧಿಯೂ ಆಗುತ್ತದೆ ಅಂತಾ ಹೇಳಲಾಗುತ್ತದೆ. ಇಲ್ಲವಾದಲ್ಲಿ ದೇಹದಲ್ಲಿರುವ ಕೀಟಾಣುಗಳು ಆಹಾರಕ್ಕೆ ತಗುಲಿ, ರೋಗ ಬರಲು ಕಾರಣವಾಗುತ್ತದೆ ಅಂತಾ ಹೇಳಲಾಗಿದೆ.

- Advertisement -

Latest Posts

Don't Miss